ZIM vs AFG: ಜಿಂಬಾಬ್ವೆ 54 ರನ್‌ಗೆ ಆಲೌಟ್: ಅಫ್ಘಾನಿಸ್ತಾನ 232 ರನ್ ಜಯ
ಭರವಸೆಯ ಬ್ಯಾಟರ್ ಸೇದಿಕುಲ್ಲಾ ಅಟಲ್ ಬಾರಿಸಿದ ಶತಕ ಹಾಗೂ ಅಬ್ದುಲ್ ಮಲಿಕ್ ಅರ್ಧಶತಕದ ಬಲದಿಂದ ಅಫ್ಘಾನಿಸ್ತಾನ 232 ರನ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿತು. ಜಿಂಬಾಬ್ವೆ ಪ್ರವಾಸದಲ್ಲಿ ಆಡಿದ ಎರಡನೇ ಏಕದಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ, ಮೂರು ಏಕದಿನ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 286 ರನ್ ಸೇರಿಸಿತು. ಜಿಂಬಾಬ್ವೆ ಜಸ್ಟ್ 17.5 ಓವರ್‌ಗಳಲ್ಲಿ 54 ರನ್‌ಗಳಿಗೆ ಆಲೌಟ್ ಆಯಿತು.

ಭರ್ಜರಿ ಜೊತೆಯಾಟ
ಸೇದಿಕುಲ್ಲಾ ಅತಲ್ ಹಾಗೂ ಅಬ್ದುಲ್ ಮಲಿಕ್ ಜೋಡಿ ಅಫ್ಘಾನಿಸ್ತಾನ ತಂಡಕ್ಕೆ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಆತಿಥೇಯ ತಂಡದ ಬೌಲರ್‌ಗಳ ಮನ ಬಂದಂತೆ ದಂಡಿಸಿದರು. ಈ ಜೋಡಿಯನ್ನು ಕಟ್ಟಿಹಾಕುವಲ್ಲಿ ಜಿಂಬಾಬ್ವೆ ಬೌಲರ್‌ಗಳು ವಿಫಲರಾದರು. ಈ ವೇಳೆ ಈ ಜೋಡಿ 32.6 ಓವರ್‌ಗಳಲ್ಲಿ 191 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಸೊಗಸಾಗಿ ಆಡುತ್ತಿದ್ದ ಅಬ್ದುಲ್ ಮಲಿಕ್ 84 ರನ್ ಸೇರಿಸಿ ಔಟ್ ಆದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 11 ಬೌಂಡರಿ, 1 ಸಿಕ್ಸರ್ ಸೇರಿವೆ.
ಮಧ್ಯಮ ಕ್ರಮಾಂಕದಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಹಾಗೂ ರಹಮತ್ ಶಾ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.
ಸೇದಿಕುಲ್ಲಾ ಶತಕ
ಅಫ್ಘಾನಿಸ್ತಾನ ತಂಡದ ಸೇದಿಕುಲ್ಲಾ ಅತಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೊಟ್ಟ ಮೊದಲ ಶತಕವನ್ನು ಬಾರಿಸಿ ಅಬ್ಬರಿಸಿದರು. ಸೇದಿಕುಲ್ಲಾ ಅತಲ್ 128 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ 104 ರನ್ ಆರ್ಭಟಿಸಿದರು.
ನಾಯಕಿ ಹಶ್ಮತುಲ್ಲಾ ಶಾಹಿದಿ 29 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಜಿಂಬಾಬ್ವೆ ಪರ ನ್ಯೂಮನ್ ನ್ಯಾಮ್ಹುರಿ 3 ಹಾಗೂ ಟ್ರೆವರ್ ಗ್ವಾಂಡು 2 ವಿಕೆಟ್ ಪಡೆದರು.
ಕಳಪೆ ಆರಂಭ
ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಆರಂಭ ಕಳಪೆ ಆಗಿತ್ತು. 11 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಜಿಂಬಾಬ್ವೆ ಸಂಕಷ್ಟದಲ್ಲಿತ್ತು. ಆಗ ಸೀನ್ ವಿಲಿಯ್ಸನ್ ತಂಡಕ್ಕೆ ಕೊಂಚ ಆಧಾರವಾದರು. ಸೀನ್ ವಿಲಿಯಮ್ಸನ್ 16 ಹಾಗೂ ಸಿಕಂದರ್ ರಾಜ್ 19 ರನ್‌ಗಳಿಸಿದರು. ಉಳಿದಂತೆ ಎಲ್ಲ ಬ್ಯಾಟರ್‌ಗಳು ಸಿಂಗಲ್ ಡಿಜಿಟ್ ನಲ್ಲಿ ಆಟ ಮುಗಿಸಿದರು.
ಅಫ್ಘಾನಿಸ್ತಾನ ತಂಡದ ಪರ ಎಎಮ್ ಗಜನ್ಫರ್, ನವೀದ್ ಜದ್ರಾನ್ ತಲಾ ಮೂರು ವಿಕೆಟ್ ಕಬಳಿಸಿದರು. ಫಜಲ್ಹಕ್ ಫಾರೂಕಿ 2, ಅಜ್ಮತುಲ್ಲಾ ಒಮರ್ಜಾಯ್ 1 ವಿಕೆಟ್ ಕಬಳಿಸಿದರು.
ಜಿಂಬಾಬ್ವೆ ಕಡಿಮೆ ರನ್ ದಾಖಲಿಸಿದ ಪಟ್ಟಿ
35, ಶ್ರೀಲಂಕಾ, ಏಪ್ರಿಲ್ 25, 2004,
38, ಶ್ರೀಲಂಕಾ, ಡಿಸೆಂಬರ್ 8, 2001
44, ಬಾಂಗ್ಲಾದೇಶ, ನವೆಂಬರ್ 3, 2009
54, ಅಫ್ಘಾನಿಸ್ತಾನ, ಡಿಸೆಂಬರ್ 19, 2024
54, ಅಫ್ಘಾನಿಸ್ತಾನ, ಫೆಬ್ರವರಿ 26, 2017
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications