For Quick Alerts
ALLOW NOTIFICATIONS  
For Daily Alerts
 

ZIM vs NED: ನೆದರ್ಲ್ಯಾಂಡ್ಸ್ ವಿರುದ್ಧ ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಜಿಂಬಾಬ್ವೆ

ZIM vs NED: Zimbabwe Announced Their Squad For 3-Matches ODI Series Against Netherlands

ನೆದರ್ಲ್ಯಾಂಡ್ಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ಮಂಗಳವಾರ, ಮಾರ್ಚ್ 21ರಂದು ಪ್ರಾರಂಭವಾಗಲಿದ್ದು, ಇದಕ್ಕಾಗಿ ಬಲಿಷ್ಠ ಜಿಂಬಾಬ್ವೆ ತಂಡವನ್ನು ಪ್ರಕಟಿಸಿದೆ.

ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಸರಣಿಯು ಏಕದಿನ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದ್ದು, ತಮ್ಮ ಶ್ರೇಯಾಂಕಗಳನ್ನು ಹೆಚ್ಚಿಸಲು ಎದುರು ನೋಡುತ್ತಿದ್ದಾರೆ.

ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಉಭಯ ತಂಡಗಳಿಗೆ ಈ ಸರಣಿಯಲ್ಲಿನ ಗೆಲುವು ನಿರ್ಣಾಯಕವಾಗಿದೆ.

ಇದೀಗ ನೆದರ್ಲ್ಯಾಂಡ್ಸ್ ತಂಡದ ವಿರುದ್ಧಸ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆತಿಥೇಯ ಜಿಂಬಾಬ್ವೆ ತಂಡವನ್ನು ಪ್ರಕಟಿಸಿದೆ. ಗೆಲ್ಲುವುದು ಪ್ರಮುಖವಾಗಿರುವುದರಿಂದ ಪ್ರಮುಖ ಆಟಗಾರರ ಬಲಿಷ್ಠ ತಂಡವನ್ನೇ ಹೆಸರಿಸಿದೆ.

ZIM vs NED: Zimbabwe Announced Their Squad For 3-Matches ODI Series Against Netherlands

ಈ ಸರಣಿಯ ಎಲ್ಲ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ತವರಿನ ಪ್ರೇಕ್ಷಕರ ಬೆಂಬಲ ಮತ್ತು ರಿಯಾನ್ ಬರ್ಲ್ ಮತ್ತು ಸಿಕಂದರ್ ರಜಾ ಅವರಂತಹ ಪ್ರಮುಖ ಆಟಗಾರರು ಹಿಂದಿರುಗಿದ ಕಾರಣ, ಜಿಂಬಾಬ್ವೆ ತಂಡದ ಬಲ ಹೆಚ್ಚಿಸಲಿದೆ. ನೆದರ್ಲ್ಯಾಂಡ್ಸ್ ವಿರುದ್ಧ ಸರಣಿ ಗೆಲ್ಲಲು ಉತ್ಸುಕವಾಗಿರುವ ಜಿಂಬಾಬ್ವೆ, ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ನಿರೀಕ್ಷೆ ಮೂಡಿಸಿದೆ.

ರಿಯಾನ್ ಬರ್ಲ್, ಸಿಕಂದರ್ ರಜಾ ಮಾತ್ರಲ್ಲದೆ, ಸ್ಟಾರ್ ಅಟಗಾರರಾದ ಸೀನ್ ವಿಲಿಯಮ್ಸ್, ಟೆಂಡೈ ಚಟಾರಾ, ಬ್ಲೆಸ್ಸಿಂಗ್ ಮುಜರಬಾನಿ, ಗ್ಯಾರಿ ಬ್ಯಾಲೆನ್ಸ್ ಅವರಂತಹ ಆಟಗಾರರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

ZIM vs NED: Zimbabwe Announced Their Squad For 3-Matches ODI Series Against Netherlands

ಪೂರ್ಣ ತಂಡ ಮರಳಿರುವುದು ಖುಷಿಯಾಗಿದೆ; ಜಿಂಬಾಬ್ವೆ ಮುಖ್ಯ ಕೋಚ್

ಜಿಂಬಾಬ್ವೆ ತಂಡವನ್ನು ಪ್ರಕಟಿಸಿದ ನಂತರ ಮಾತನಾಡಿದ ಮುಖ್ಯ ಕೋಚ್ ಡೇವ್ ಹೌಟನ್, ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲು ಆಟಗಾರರು ಮರಳಿರುವುದು ತಂಡವು ಬಲಿಷ್ಠವಾಗಿದೆ ಎಂಬುದನ್ನು ಸೂಚಿಸುತ್ತದೆ. ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ಸರಣಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

"ಜಿಂಬಾಬ್ವೆ ತಂಡದ ಆಟಗಾರರು ಫಿಟ್ ಆಗಿ ಮರಳಿರುವುದು ಅದ್ಭುತವಾಗಿದೆ. ಇದು ಸ್ವಾಭಾವಿಕವಾಗಿ ಸರಣಿಯನ್ನು ಗೆಲ್ಲುವ ಉದ್ದೇಶವನ್ನು ಹೊಂದಿದೆ. ಮುಂಬರುವ ಸರಣಿಗಳ ಮೇಲೆ ಕಣ್ಣಿಟ್ಟು, ವಿಶ್ವಕಪ್ ಅರ್ಹತೆಯ ಗುರಿಯನ್ನು ಸಾಧಿಸಲು ವಿಭಿನ್ನ ಸಂಯೋಜನೆಗಳ ತಂಡವನ್ನು ಪ್ರಯತ್ನಿಸಲು ಇದು ಒಂದು ಉತ್ತಮ ಅವಕಾಶವಾಗಿದೆ," ಎಂದು ಮುಖ್ಯ ಕೋಚ್ ಡೇವ್ ಹೌಟನ್ ತಿಳಿಸಿದ್ದಾರೆ.

ಏಕದಿನ ಸರಣಿ: ನೆದರ್ಲ್ಯಾಂಡ್ಸ್ ವಿರುದ್ಧದ ಜಿಂಬಾಬ್ವೆ ಪೂರ್ಣ ತಂಡ
ಗ್ಯಾರಿ ಬ್ಯಾಲೆನ್ಸ್, ರಿಯಾನ್ ಬರ್ಲ್, ಟೆಂಡೈ ಚಟಾರಾ, ಕ್ರೇಗ್ ಎರ್ವಿನ್ (ನಾಯಕ), ಇವಾನ್ಸ್ ಬ್ರಾಡ್ಲಿ, ಇನ್ನೋಸೆಂಟ್ ಕೈಯಾ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ವೆಲ್ಲಿಂಗ್ಟನ್ ಮಸಕಡ್ಜಾ, ಮಾವುತ ಬ್ರಾಂಡನ್, ಬ್ಲೆಸ್ಸಿಂಗ್ ಮುಜರಬಾನಿ, ರಿಚರ್ಡ್ ನಾಗರವ, ಸಿಕಂದರ್ ರಜಾ, ಸೀನ್ ವಿಲಿಯಮ್ಸ್.

Story first published: Friday, March 17, 2023, 16:13 [IST]
Other articles published on Mar 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+