ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲ್ಯೂಕ್‌ ಜೊಂಗ್ವೆ ಮಾರಕ ಬೌಲಿಂಗ್, ಪಾಕ್‌ಗೆ‌ ಶಾಕ್ ನೀಡಿದ ಜಿಂಬಾಬ್ವೆ

Zimbabwe beat Pakistan by 19 runs in 2nd T20I

ಹರಾರೆ: ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಶುಕ್ರವಾರ (ಏಪ್ರಿಲ್ 23) ನಡೆದ ದ್ವಿತೀಯ ಟಿ20ಐ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ 19 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಬಲಗೈ ವೇಗಿ ಲ್ಯೂಕ್‌ ಜೊಂಗ್ವೆ ಅವರ ಮಾರಕ ಬೌಲಿಂಗ್‌ನಿಂದಾಗಿ ಜಿಂಬಾಬ್ವೆ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು 1-1ರಿಂದ ಸಮಬಲಗೊಳಿಸಿಕೊಂಡಿದೆ.

ರಾಜಸ್ಥಾನ್ ರಾಯಲ್ಸ್‌ ಪರ ವೇಗಿ ಜೋಫ್ರಾ ಆರ್ಚರ್ ಇನ್ನು ಪಂದ್ಯ ಆಡಲ್ಲ!ರಾಜಸ್ಥಾನ್ ರಾಯಲ್ಸ್‌ ಪರ ವೇಗಿ ಜೋಫ್ರಾ ಆರ್ಚರ್ ಇನ್ನು ಪಂದ್ಯ ಆಡಲ್ಲ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಜಿಂಬಾಬ್ವೆ, ಕಮುನ್ಹುಕಂವೆ 34, ತದಿವಾನಾಶೆ ಮಾರುಮಾನಿ 13, ವೆಸ್ಲಿ ಮಾಧೆವೆರೆ 16, ರೆಗಿಸ್ ಚಕಾಬ್ವಾ 18, ತಾರಿಸೈ ಮುಸಕಂಡ 13 ರನ್‌ ಕೊಡುಗೆಯೊಂದಿಗೆ 20 ಓವರ್‌ಗೆ 9 ವಿಕೆಟ್ 118 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಪಾಕಿಸ್ತಾನ, ಮೊಹಮ್ಮದ್ ರಿಝ್ವಾನ್ 13, ಬಾಬರ್ ಅಝಾಮ್ 41, ದಾನಿಶ್ ಅಝಿಝ್ 22, ಮೊಹಮ್ಮದ್ ಹಫೀಝ್ 5 ರನ್‌ನೊಂದಿಗೆ 19.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 99 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಭಾರತೀಯ ಯುವ ಆಟಗಾರನ ಮನಸಾರೆ ಶ್ಲಾಘಿಸಿದ ಶಾನ್ ಪೊಲಕ್ಭಾರತೀಯ ಯುವ ಆಟಗಾರನ ಮನಸಾರೆ ಶ್ಲಾಘಿಸಿದ ಶಾನ್ ಪೊಲಕ್

ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಮೊಹ್ಮದ್ ಹಸ್ನೈನ್ 2, ದಾನಿಶ್ ಅಝಿಝ್ 2, ಫಹೀನ್ ಅಶ್ರಫ್, ಅರ್ಷದ್ ಇಕ್ಬಾಲ್, ಹ್ಯಾರಿಸ್ ರೌಫ್ ತಲಾ 1 ವಿಕೆಟ್ ಪಡೆದರೆ, ಪಾಕ್ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆಯ ಲ್ಯೂಕ್‌ ಜೊಂಗ್ವೆ 18 ರನ್‌ಗೆ 4, ರಿಯಾನ್ ಬರ್ಲ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.

Story first published: Friday, April 23, 2021, 20:35 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X