AFG vs ZIM: ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ; 7 ಅನ್‌ಕ್ಯಾಪ್ಡ್ ಆಟಗಾರರಿಗೆ ಸ್ಥಾನ
ಮೂರು ಪಂದ್ಯಗಳ ಏಕದಿನ ಸರಣಿಯ ನಂತರ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ಎರಡು ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ಎರಡೂ ಟೆಸ್ಟ್ ಪಂದ್ಯಗಳು ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಆರಂಭವಾಗಲಿದ್ದು, ಎರಡನೇ ಟೆಸ್ಟ್ ಜನವರಿ 2 ರಿಂದ ನಡೆಯಲಿದೆ. ಜಿಂಬಾಬ್ವೆ ತನ್ನ ಎರಡೂ ಟೆಸ್ಟ್ ಪಂದ್ಯಗಳಿಗಾಗಿ ಏಳು ಅನ್‌ಕ್ಯಾಪ್ಡ್ ಆಟಗಾರರನ್ನು ತನ್ನ ತಂಡದಲ್ಲಿ ಸೇರಿಸಿಕೊಂಡಿದ್ದು, ತಂಡವನ್ನು ಪ್ರಕಟಿಸಿದೆ.
ಇಂಗ್ಲೆಂಡಿನ ಸ್ಟಾರ್ ಕ್ರಿಕೆಟಿಗರಾದ ಸ್ಯಾಮ್ ಕರ್ರಾನ್ ಮತ್ತು ಟಾಮ್ ಕರ್ರಾನ್ ಅವರ ಸಹೋದರ ಬೆನ್ ಕುರಾನ್ ಇತ್ತೀಚೆಗಷ್ಟೇ ಜಿಂಬಾಬ್ವೆ ಪರ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರಲ್ಲದೆ, ಜೊನಾಥನ್ ಕ್ಯಾಂಪ್‌ಬೆಲ್, ವಿಕೆಟ್ ಕೀಪರ್-ಬ್ಯಾಟರ್‌ಗಳಾದ ತಡಿವಾನಾಶೆ ಮರುಮಾನಿ ಮತ್ತು ನ್ಯಾಶಾ ಮಾಯಾವೊ, ವೇಗದ ಬೌಲರ್ ಟ್ರೆವರ್ ಗ್ವಾಂಡು, ತಕುಡ್ಜ್ವಾ ಚಟೈರಾ ಹಾಗೂ ನ್ಯೂಮನ್ ನ್ಯಾಮಹುರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಏಳು ಆಟಗಾರರಲ್ಲಿ ಆರು ಆಟಗಾರರು ಈಗಾಗಲೇ ವೈಟ್ ಬಾಲ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ.

ಜಿಂಬಾಬ್ವೆಯ ಟೆಸ್ಟ್ ತಂಡವನ್ನು ಕ್ರೇಗ್ ಎರ್ವಿನ್ ನಾಯಕನ್ನಾಗಿ ಮುನ್ನಡೆಸಲಿದ್ದಾರೆ. ಇವರೊಂದಿಗೆ , ಅನುಭವಿ ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಬ್ಲೆಸ್ಸಿಂಗ್ ಮುಜರಬಾನಿ ಮತ್ತು ರಿಚರ್ಡ್ ನ್ಗರ್ವಾ ಕೂಡ ಟೆಸ್ಟ್ ತಂಡದಲ್ಲಿದ್ದಾರೆ. ಈ ವರ್ಷ ಜುಲೈ ತಿಂಗಳ ಐರ್ಲೆಂಡ್ ವಿರುದ್ಧ ಜಿಂಬಾಬ್ವೆ ಏಕಮಾತ್ರ ಟೆಸ್ಟ್ ಆಡಿತ್ತು. ಈ ವೇಳೆ ತಂಡದಲ್ಲಿದ್ದ ಏಳು ಆಟಗಾರರನ್ನು ಕೈಬಿಟ್ಟಿದೆ.
ಜಿಂಬಾಬ್ವೆಯಲ್ಲಿ 28 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಸರಣಿಯು ಜಿಂಬಾಬ್ವೆ ಕ್ರಿಕೆಟ್‌ಗೆ ಪ್ರಮುಖವಾಗಿದೆ. ಏಕೆಂದರೆ 28 ವರ್ಷಗಳ ನಂತರ ತವರು ನೆಲದಲ್ಲಿ ತನ್ನ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಜಿಂಬಾಬ್ವೆ ಅಯೋಜಿಸಿದೆ. 1996ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಜಿಂಬಾಬ್ವೆ ತವರಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಕೊನೆಯ ಬಾರಿಗೆ ಆಡಿತ್ತು. ಈ ಪಂದ್ಯ ಮಳೆಯಿಂದ ಡ್ರಾ ಆಗಿತ್ತು. ಇದಾದ ನಂತರವೂ ಜಿಂಬಾಬ್ವೆ 2000ರಲ್ಲಿ ನ್ಯೂಜಿಲೆಂಡ್ ಮತ್ತು 2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿದೇಶದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಿತ್ತು.
ಜಿಂಬಾಬ್ವೆ vs ಅಫ್ಘಾನಿಸ್ತಾನ ಟೆಸ್ಟ್ ತಂಡಗಳು
ಜಿಂಬಾಬ್ವೆ ತಂಡ: ಕ್ರೇಗ್ ಎರ್ವಿನ್ (ನಾಯಕ), ಬೆನ್ ಕರ್ರಾನ್, ಬ್ರಿಯಾನ್ ಬೆನೆಟ್, ಜೊನಾಥನ್ ಕ್ಯಾಂಪ್‌ಬೆಲ್, ತಕುಡ್ಜ್ವಾ ಚಟೈರಾ, ಜಾಯ್ಲಾರ್ಡ್ ಗುಂಬಿ, ಟ್ರೆವರ್ ಗ್ವಾಂಡು, ತಕುದ್ಜ್ವಾನಾಶೆ ಕೈಟಾನೊ, ತಡಿವಾನಾಶೆ ಮರುಮಾನಿ, ಬ್ರಾಂಡನ್ ಮಾವುಟಾ, ನ್ಯಾಶಸಿಂಗ್ ಮಯವಾರಾಬ್, ನ್ಯಾಶಸಿಂಗ್ ಮಯಾವಾರಾಬ್, ಡಿ ನ್ಯಾಮುರಿ, ಅಲೆಕ್ಸಾಂಡರ್ ರಾಝಾ, ಸೀನ್ ವಿಲಿಯಮ್ಸ್
ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ (ಉಪನಾಯಕ), ಇಕ್ರಮ್ ಅಲಿಖೈಲ್ (ಡಬ್ಲ್ಯುಕೆ), ಅಫ್ಸರ್ ಝಜೈ (ಡಬ್ಲ್ಯುಕೆ), ರಿಯಾಜ್ ಹಸನ್, ಸೇದಿಕುಲ್ಲಾ ಅಟಲ್, ಅಬ್ದುಲ್ ಮಲಿಕ್, ಬಹೀರ್ ಶಾ ಮೆಹಬೂಬ್, ಇಸ್ಮತ್ ಆಲಂ, ಅಜ್ಮತುಲ್ಲಾ, ಉಮರ್ ಖಾನ್, ಜಿಯಾ ಉರ್ ರೆಹಮಾನ್ ಅಕ್ಬರ್, ಜಹೀರ್ ಶೆಹಜಾದ್, ರಶೀದ್ ಖಾನ್, ಯಮೀನ್ ಅಹ್ಮದ್‌ಜಾಯ್, ಬಶೀರ್ ಅಹ್ಮದ್ ಆಫ್ಘನ್, ನವಿದ್ ಜದ್ರಾನ್ ಮತ್ತು ಫರೀದ್ ಅಹ್ಮದ್ ಮಲಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications