For Quick Alerts
ALLOW NOTIFICATIONS  
For Daily Alerts
 

ZIM vs PAK: ಪಾಕ್‌ಗೆ ಮುಖಭಂಗ: ಮೂರನೇ ಪಂದ್ಯ ಗೆದ್ದ ಜಿಂಬಾಬ್ವೆ

ಪಾಕಿಸ್ತಾನ ಟಿ20 ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ವಿರುದ್ಧ ಸೋಲು ಕಂಡಿದೆ. ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ 2 ವಿಕೆಟ್‌ಗಳಿಂದ ಮಾಜಿ ಚಾಂಪಿಯನ್‌ ಪಾಕ್‌ ತಂಡವನ್ನು ಮಣಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿತು. ಪಾಕ್‌ ಮೊದಲಿನ ಎರಡೂ ಪಂದ್ಯಗಳನ್ನು ಗೆದ್ದಿದ್ದರಿಂದ ಸರಣಿಯನ್ನು ವಶಕ್ಕೆ ಪಡೆಯಿತು. ಜಿಂಬಾಬ್ವೆ ಕೊನೆಯ ಪಂದ್ಯ ಗೆದ್ದು ತವರಿನಲ್ಲಿ ಮಾನವನ್ನು ಉಳಿಸಿಕೊಂಡಿತು.

ಈ ಸರಣಿಯಲ್ಲಿ ಪಾಕ್‌ ತಂಡದ ಸ್ಟಾರ್ ಆಟಗಾರರಿಬ್ಬರು ಬ್ಯಾಟ್ ಮಾಡಿರಲಿಲ್ಲ. ಸ್ಟಾರ್ ಬ್ಯಾಟರ್‌ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್‌ ತಂಡದಿಂದ ಹೊರಗುಳಿದಿದ್ದರು. ಯುವ ತಂಡವನ್ನು ಸಲ್ಮಾನ್ ಆಘಾ ಮುನ್ನಡೆಸಿದ್ದರು. ಮೂರನೇ ಪಂದ್ಯದಲ್ಲಿ ಪಾಕ್‌ ಸೋತ ಬಳಿಕ ಟೀಕೆಗೆ ಗುರಿಯಾಯಿತು. ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 132 ರನ್‌ ಸೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಜಿಂಬಾಬ್ವೆ 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 133 ರನ್‌ ಸೇರಿಸಿ ಭರ್ಜರಿ ಜಯ ದಾಖಲಿಸಿತು.

Zimbabwe Stuns Pakistan with Thrilling 2-Wicket Victory in Final T20 Match

ಬ್ಯಾಟರ್‌ಗಳ ವೈಫಲ್ಯ

ಪಾಕ್‌ ಪರ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಸಾಹಿಬ್ಜಾದಾ ಫರ್ಹಾನ್, ಒಮೈರ್ ಯೂಸುಫ್, ಉಸ್ಮಾನ್ ಖಾನ್ ಡಬಲ್‌ ಡಿಜಿಟ್ ಮುಟ್ಟಲಿಲ್ಲ. ಪಾಕ್‌ ಪರ ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ಅಘಾ (32), ತಯ್ಯಬ್ ತಾಹಿರ್ (21), ಖಾಸಿಮ್ ಅಕ್ರಮ್ (20), ಅರಾಫತ್ ಮಿನ್ಹಾಸ್ (ಅಜೇಯ 22), ಅಬ್ಬಾಸ್ ಅಫ್ರಿದಿ (15) ಕೊಂಚ ಎದುರಾಳಿ ಬೌಲರ್‌ಗಳನ್ನು ಕಾಡಿದರು. ಪರಿಣಾಮ ಪಾಕ್‌ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಕಾರಣವಾಯಿತು.

ಬ್ರಿಯಾನ್ ಅಮೋಘ ಆಟ

ಜಿಂಬಾಬ್ವೆ ತಂಡದ ಆರಂಭಿಕ ಬ್ರಿಯಾನ್ ಬೆನೆಟ್ ಅಮೋಘ ಇನಿಂಗ್ಸ್‌ ಕಟ್ಟಿದರು. ಇವರು ಮೊದಲ ವಿಕೆಟ್‌ಗೆ ಥಡಿವನಾಶೆ ಮರುಮಣಿ (15) ಜೊತೆಗೂಡಿ 20 ಎಸೆತಗಳಲ್ಲಿ 40 ರನ್‌ ಸಿಡಿಸಿದರು. ಇನ್ನು ಎರಡನೇ ವಿಕೆಟ್‌ಗೆ ಡಿಯೋನ್ ಮೈಯರ್ಸ್ ಅವರೊಂದಿಗೆ 33 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಬೆನೆಟ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 43 ರನ್‌ ಸಿಡಿಸಿ ಔಟ್ ಆದರು. ನಾಯಕ ಸಿಕಂದರ್ ರಾಜ್ 19 ರನ್‌ ಸಿಡಿಸಿ ಜಯದಲ್ಲಿ ಮಿಂಚಿದರು. ತಂಡಕ್ಕೆ ಅಗತ್ಯ ರನ್‌ಗಳನ್ನು ಟಿನೊಟೆಂಡಾ ಮಾಪುಸಾ, ರಿಚರ್ಡ್ ನಾಗರಾವ ಕಲೆ ಹಾಕಿದರು.

Zimbabwe Stuns Pakistan with Thrilling 2-Wicket Victory in Final T20 Match

ದಕ್ಷಿಣ ಆಫ್ರಿಕಾ ಪ್ರವಾಸ

ಜಿಂಬಾಬ್ವೆ ಪ್ರವಾಸದ ನಂತರ ಪಾಕ್ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಈ ಪ್ರವಾಸದಲ್ಲಿ ಪಾಕಿಸ್ತಾನ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಟಿ 20 ಪಂದ್ಯಗಳ ಸರಣಿ ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯ ಬಳಿಕ ಉಭಯ ದೇಶಗಳ ನಡುವೆ ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ ಅಡಿಯಲ್ಲಿ ಎರಡು ಟೆಸ್ಟ್‌ ನಡೆಯಲಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಸರಣಿ ಮಹತ್ವದಾಗಿದೆ.

Story first published: Friday, December 6, 2024, 6:30 [IST]
Other articles published on Dec 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+