ಪಾಕಿಸ್ತಾನ: 6 ವರ್ಷಗಳ ನಂತರ ಮತ್ತೆ ಕ್ರಿಕೆಟ್ ಆರಂಭ
ಲಾಹೋರ್, ಮೇ 21: ತೀವ್ರ ಎಚ್ಚರಿಕೆ ನಡುವೆಯೂ ದಿಟ್ಟತನ ತೋರಿ ಕ್ರಿಕೆಟ್ ಪಂದ್ಯ ಆಯೋಜಿಸಿರುವ ಪಿಸಿಬಿ ಧೈರ್ಯ ಮೆಚ್ಚಲೇಬೇಕು. ಜೊತೆಗೆ ಯುದ್ಧಭೂಮಿಯಂತಿರುವ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಬಂದಿರುವ ಜಿಂಬಾಬ್ವೆ ತಂಡ ಸ್ಥೈರ್ಯಕ್ಕೆ ಶಭಾಷ್. ಸುಮಾರು 6 ವರ್ಷಗಳ ನಂತರ ಶುಕ್ರವಾರದಂದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದೆ. [ನ್ಯಾಯಾಲಯದ ಮೆಟ್ಟಿಲೇರಿದ ಪಾಕ್ ಕಳಪೆ ಪ್ರದರ್ಶನ]
ಅಂತಾರಾಷ್ಟ್ರೀಯ ಆಟಗಾರರ ಸಂಸ್ಥೆ ಹಾಗೂ ವಿದೇಶಿ ವ್ಯವಹಾರ ಸಚಿವಾಲಯ ಭದ್ರತೆಯ ಕುರಿತು ಎಚ್ಚರಿಕೆ ನೀಡಿದ ಹೊರತಾಗಿಯೂ ಜಿಂಬಾಬ್ವೆ ತಂಡ ಧೈರ್ಯ ಮಾಡಿ ಪಾಕಿಸ್ತಾನಕ್ಕೆ ಕಾಲಿಟ್ಟಿದೆ. ಶುಕ್ರವಾರ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.
ರಾತ್ರಿ 7 ಗಂಟೆ ನಂತರ ಪಂದ್ಯದ
2009ರಲ್ಲಿ ಲಾಹೋರ್‌ನಲ್ಲೇ ಶ್ರೀಲಂಕಾ ಕ್ರಿಕೆಟ್ ತಂಡ ಸ್ಟೇಡಿಯಂನತ್ತ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಶಸ್ತ್ರಸಜ್ಜಿತ ಉಗ್ರಗಾಮಿಗಳು ದಾಳಿ ನಡೆಸಿ ಲಂಕಾ ಆಟಗಾರರನ್ನು ಗಾಯಗೊಳಿಸಿದ್ದರು. [ಶ್ರೀಲಂಕಾ ಆಟಗಾರರ ಮೇಲೆ ಗುಂಡಿನ ದಾಳಿ]

ಸುಮಾರು ಏಳು ಜನ ಪಾಕಿಸ್ತಾನಿ ನಾಗರಿಕರು ಹತರಾಗಿದ್ದರು. ಈ ಕರಾಳ ಘಟನೆ ನಂತರ ವಿಶ್ವದ ಯಾವ ಕ್ರಿಕೆಟ್ ತಂಡಗಳೂ ಪಾಕಿಸ್ತಾನಕ್ಕೆ ತೆರಳಲಿಲ್ಲ. ಬಾಂಗ್ಲಾದೇಶ ಎರಡು ಬಾರಿ ತನ್ನ ಪಾಕ್ ಪ್ರವಾಸವನ್ನು ರದ್ದುಪಡಿಸಿತ್ತು.
ಕರಾಚಿಯ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಬಳಿ ಬಾಂಬ್ ದಾಳಿ ನಂತರ ನ್ಯೂಜಿಲೆಂಡ್ ತಂಡ ಕೂಡಾ ಪಾಕ್ ನತ್ತ ಮುಖ ಮಾಡಿರಲಿಲ್ಲ. 2011ರ ವಿಶ್ವಕಪ್ ಆತಿಥ್ಯ ವಹಿಸಿದ್ದ ಪಾಕಿಸ್ತಾನ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಪಂದ್ಯವಾಡಿತ್ತು.
ಅಫ್ರಿದಿ ಆಕರ್ಷಣೆ: ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಶಾಹಿದ್ ಅಫ್ರಿದಿ ನೇತೃತ್ವದ ತಂಡದ ಪ್ರದರ್ಶನವನ್ನು ಎದುರು ನೋಡುತ್ತಿದ್ದಾರೆ. ಜಿಂಬಾಬ್ವೆ ಕೂಡಾ ಒಂದು ವರ್ಷದ ಹಿಂದೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಆಡಿದ್ದು, ಈಗ ಹೇಗೆ ಆಡುತ್ತದೆ ನೋಡಬೇಕಿದೆ. 10 ದಿನಗಳ ಪಾಕ್ ಪ್ರವಾಸದಲ್ಲಿರುವ ಝಿಂಬಾಬ್ವೆ 2 ಪಂದ್ಯಗಳ ಟ್ವೆಂಟಿ-20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.

ಅಂತಾರಾಷ್ಟ್ರೀಯ ಪಂದ್ಯಗಳು ನಡೆಯದಿದ್ದರೂ ದೇಶಿ ಟೂರ್ನಿಗಳು ನಿರಂತರವಾಗಿ ನಡೆದಿವೆ. ಇಲ್ಲಿನ ಪಿಚ್ ಬ್ಯಾಟಿಂಗ್ ಸ್ವರ್ಗವಾಗಿದ್ದು, ದಿನದ ಉಷ್ಣಾಂಶ 43 ಡಿಗ್ರಿಯಿದೆ. ಪಾಕ್ ತಂಡ ಸಯೀದ್ ಅಜ್ಮಲ್ ಹಾಗೂ ಉಮರ್ ಗುಲ್ ಅನುಪಸ್ಥಿತಿಯಲ್ಲಿ ಆಡಲಿದ್ದು, ವಹಾಬ್ ರಿಯಾಝ್ ಬೌಲಿಂಗ್ ದಾಳಿಯ ನೇತೃತ್ವ ವಹಿಸಿದ್ದಾರೆ.
ಸುಮಾರು 3,000ಕ್ಕೂ ಅಧಿಕ ಶಸ್ತ್ರಧಾರಿ ಪೊಲೀಸರ ರಕ್ಷಣೆಯಲ್ಲಿ ಗಡಾಫಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಹೊಸ ಶುಭಾರಂಭಕ್ಕೆ ಕಾತುರದಿಂದ ಕಾದಿದೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications