For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ vs ಅಫ್ಘಾನಿಸ್ತಾನ: 2ನೇ ಏಕದಿನ ಪಂದ್ಯ: Live ಸ್ಕೋರ್ ಹಾಗೂ ಆಡುವ ಬಳಗ

Zimbabwe vs Afghanistan ODI series 2022: 2nd match Live score and playing XI

ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ವೈಟ್‌ ಬಾಲ್ ಸರಣಿಯಲ್ಲಿ ಆಡುತ್ತಿದೆ. ಇಂದು ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಜಿಂಬಾಬ್ವೆ ತಂಡ ಮೊದಲಿಗೆ ಬ್ಯಾಟಿಂಗ್ ಆರಂಭಿಸಿದೆ.

ಇನ್ನು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಅಪ್ಘಾನಿಸ್ತಾನ ತಂಡ ಈ ಪಂದ್ಯದಲ್ಲಿಯೂ ಈ ಹಿಂದಿನ ಪಂದ್ಯದಲ್ಲಿ ಆಡಿದ್ದ ಬಳಗದೊಂದಿಗೆ ಕಣಕ್ಕಿಳಿದಿದೆ. ಇನ್ನು ಆತಿಥೇಯ ಜಿಂಬಾಬ್ವೆ ತಂಡ ಕುಡ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.

Live ಸ್ಕೋರ್‌ಪಟ್ಟಿ ಹೀಗಿದೆ:

1
53855

ಇನ್ನು ಈ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದ ಅಫ್ಘಾನಿಸ್ತಾನ ತಂಡ ಭರ್ಜರಿ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ರಹ್ಮತ್ ಹಾಗೂ ನಾಯಕ ಹಶ್ಮತುಲ್ಲಾ ಶಹಿದಿ ಅವರ ಅದ್ಭುತ ಜೊತೆಯಾಟದ ಕಾರಣದಿಂದಾಗಿ ದೊಡ್ಡ ಮೊತ್ತವನ್ನು ಪೇರಿಸಿತ್ತು. ನಿಗದಿತ 50 ಓವರ್‌ಗಳಲ್ಲಿ ಅಫ್ಘಾನಿಸ್ತಾನ 276 ರನ್‌ಗಳನ್ನು ಗಳಿಸಿತ್ತು. ಆದರೆ ಇದನ್ನು ಬೆನ್ನಟ್ಟಲು ಜಿಂಬಾಬ್ವೆ ತಂಡ ವಿಫಲವಾಗಿತ್ತು. ನಿಗದಿತ 50 ಓವರ್‌ಗಳಲ್ಲಿ ಜಿಂಬಾಬ್ವೆ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 216 ರನ್‌ಗಳಿಸಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಮೊಹಮ್ಮದ್ ನಬಿ ನಾಲ್ಕು ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮಿಂಚಿದ್ದರು.

ಹೀಗಾಗಿ ಮತ್ತೊಮ್ಮೆ ಇಂಥಾದ್ಧೇ ಪ್ರದರ್ಶನ ನೀಡಲು ಪ್ರವಾಸಿ ಅಫ್ಘಾನಿಸ್ತಾನ ಗುರಿಯಿಟ್ಟುಕೊಂಡಿದೆ. ಆದರೆ ಆತಿಥೇಯ ತಂಡ ಕೂಡ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಸರ್ವ ಪ್ರಯತ್ನ ನಡೆಸುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಈ ಏಕದಿನ ಸರಣಿಯ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಕೂಡ ಆಯೋಜನೆಯಾಗಲಿದೆ. ಈ ಎಲ್ಲಾ ಪಂದ್ಯಗಳು ಕೂಡ ಹರಾರೆಯಲ್ಲಿಯೇ ನಡೆಯಲಿದೆ.

ಆಡುವ ಬಳಗ ಹೀಗಿದೆ
ಜಿಂಬಾಬ್ವೆ: ಇನ್ನೋಸೆಂಟ್ ಕೈಯಾ, ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಡೊನಾಲ್ಡ್ ತಿರಿಪಾನೊ, ಟೆಂಡೈ ಚಟಾರಾ, ತನಕಾ ಚಿವಂಗಾ, ಬ್ಲೆಸ್ಸಿಂಗ್ ಮುಜರಬಾನಿ
ಬೆಂಚ್: ಡಿಯೋನ್ ಮೈಯರ್ಸ್, ಐನ್ಸ್ಲೆಯ್ ಮಡ್ನೋಜ್, ತಕುದ್ಲೋವಾಶ್, ತಕುದ್ಲೋವಾಶ್ , ಲ್ಯೂಕ್ ಜೊಂಗ್ವೆ

ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ಇಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್
ಬೆಂಚ್: ಶಾಹಿದುಲ್ಲಾ ಕಮಾಲ್, ಜಿಯಾ-ಉರ್-ರೆಹಮಾನ್, ಇಕ್ರಮ್ ಅಲಿಖಿಲ್, ರಿಯಾಜ್ ಹಸನ್, ಯಾಮಿನ್ ಅಹ್ಮದ್ಝೈ

Story first published: Monday, June 6, 2022, 13:14 [IST]
Other articles published on Jun 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+