For Quick Alerts
ALLOW NOTIFICATIONS  
For Daily Alerts
 

ತಸ್ಕಿನ್ ಅಹ್ಮದ್, ಬ್ಲೆಸಿಂಗ್ ಮುಝರ್ಬಾನಿಗೆ ದಂಡ ವಿಧಿಸಿದ ಐಸಿಸಿ

Zimbabwe vs Bangladesh: Taskin Ahmed, Blessing Muzarabani fined for breaching ICC Code of Conduct

ಹರಾರೆ: ಬಾಂಗ್ಲಾದೇಶದ ಆಟಗಾರ ತಸ್ಕಿನ್ ಅಹ್ಮದ್ ಮತ್ತು ಜಿಂಬಾಬ್ವೆಯ ವೇಗಿ ಬ್ಲೆಸಿಂಗ್ ಮುಝರ್ಬಾನಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದಂಡ ವಿಧಿಸಿದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಇಬ್ಬರಿಗೂ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ.

ಜಿಂಬಾಬ್ವೆ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ಏಕಮಾತ್ರ ಟೆಸ್ಟ್‌ ಪಂದ್ಯ ಆಡುತ್ತಿದೆ. ಈ ಪಂದ್ಯದ ವೇಳೆ ತಸ್ಕಿನ್ ಅಹ್ಮದ್ ಮತ್ತು ಬ್ಲೆಸಿಂಗ್ ಮುಝರ್ಬಾನಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಕೈ ಕೈ ಮಿಲಾಯಿಸಿದ್ದಕ್ಕೆ ಇಬ್ಬರೂ ಐಸಿಸಿ ಕೋಪಕ್ಕೆ ಗುರಿಯಾಗಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 126 ಓವರ್‌ಗೆ 468 ರನ್ ಗಳಿಸಿದೆ. ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 111.5 ಓವರ್‌ಗೆ 276 ರನ್‌ ಗಳಿಸಿ ಹಿನ್ನಡೆ ಅನುಭವಿಸಿದೆ. ಬಾಂಗ್ಲಾದೇಶ ಈಗ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.

ತಸ್ಕಿನ್ ಮತ್ತು ಬ್ಲೆಸಿಂಗ್ ನಡುವಿನ ಈ ಬಿಗುವಿನ ಕ್ಷಣ ಒಮ್ಮೆ ಭಾರತದ ವೇಗಿ ಎಸ್‌ ಶ್ರೀಶಾಂತ್ ಅವರನ್ನು ನೆನಪಿಸಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯವೊಂದರ ವೇಳೆ ಶ್ರೀಶಾಂತ್ ಕೂಡ ಆಂಡ್ರೆ ನೆಲ್ ಎದುರು ಹೀಗೇ ಸಿಡುಕಾಡಿದ್ದನ್ನು ಕ್ರಿಕೆಟ್ ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

Story first published: Saturday, July 10, 2021, 0:26 [IST]
Other articles published on Jul 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+