ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score

ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದೆ. ಮೊದಲ ಟೆಸ್ಟ್ ಪಂದ್ಯ ಬುಲಾವಾಯೋದಲ್ಲಿರುವ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆರಂಭಗೊಂಡಿದೆ. ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದುಕೊಂಡಿದೆಯಾದರೂ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಹೆಚ್ಚಿನ ಅವಧಿಯ ಪಂದ್ಯ ನಡೆದಿಲ್ಲ.
ಮೊದಲ ದಿನ 51 ಓವರ್‌ಗಳ ಪಂದ್ಯ ಮಾತ್ರವೇ ನಡೆದಿದ್ದು ವೆಸ್ಟ್ ಇಂಡೀಸ್ ಆರಂಭಿಕರು ಅದ್ಭುತ ಆರಂಭವನ್ನು ನೀಡಿದ್ದಾರೆ. ನಾಯಕ ಕ್ರೇಗ್ ಬ್ರಾಥ್‌ವೇಟ್ ಹಾಗೂ ಟಗೆನರೈನ್ ಚಂದರ್‌ಪಾಲ್ ಉತ್ತಮ ಆರಂಭವನ್ನು ನೀಡಿದ್ದು ಇಬ್ಬರು ಕೂಡ ಅಜೇಯ ಅರ್ಧಶತಕ ಸಿಡಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದರು. ಇಬ್ಬರು ಆಟಗಾರರು ಕೂಡ ತಲಾ 55 ರನ್‌ಗಳನ್ನು ಬಾರಿಸಿ ಎರಡನೇ ದಿನದಾಟವನ್ನು ಮುಂದುವರಿಸಲಿದ್ದಾರೆ. ಎರಡನೇ ದಿನದಾಟದ ಆರಂಭಕ್ಕೂ ಮಳೆ ಅಡ್ಡಿಯಾಗಿದ್ದು ಪಂದ್ಯ ತಡವಾಗಿ ಆರಂಭವಾಗಿದೆ.
Live ಸ್ಕೋರ್ ಹೀಗಿದೆ:
ವೆಸ್ಟ್ ಇಂಡೀಸ್ ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಾದರಿಯಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯುವಲ್ಲಿಯೂ ವಿಫಲವಾಗಿದ್ದ ವಿಂಸೀಸ್ ತಂಡ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿಯೂ ಕಳಪೆ ಪ್ರದರ್ಶನ ನೀಡಿತ್ತು. ಇತ್ತ ಜಿಂಬಾಬ್ವೆ ತಂಡದಲ್ಲಿ ಒಟ್ಟು 5 ಆಟಗಾರರು ಈ ಪಂದ್ಯದ ಮೂಲಕ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
ಜಿಂಬಾಬ್ವೆ ಆಡುವ ಬಳಗ: ಇನೊಸೆಂಟ್ ಕೈಯಾ, ತನುನುರ್ವಾ ಮಕೋನಿ, ಚಾಮು ಚಿಭಾಭಾ, ಕ್ರೇಗ್ ಎರ್ವಿನ್ (ನಾಯಕ), ಗ್ಯಾರಿ ಬ್ಯಾಲೆನ್ಸ್, ತಫಡ್ಜ್ವಾ ತ್ಸಿಗಾ (ವಿಕೆಟ್ ಕೀಪರ್), ಬ್ರಾಂಡನ್ ಮಾವುಟಾ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ರಿಚರ್ಡ್ ನ್ಗರವ
ಬೆಂಚ್: ಮಿಲ್ಟನ್ ಶುಂಬಾ, ಜಾಯ್ಲಾರ್ಡ್ ಗುಂಬಿ, ಡೊನಾಲ್ಡ್ ತಿರಿಪಾನೊ, ತನಕಾ ಚಿವಂಗಾ, ಕುಡ್ಜಾಯ್ ಮೌಂಜೆ
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟ್ಯಾಗೆನರಿನ್ ಚಂದ್ರಪಾಲ್, ರೇಮನ್ ರೈಫರ್, ಜೆರ್ಮೈನ್ ಬ್ಲಾಕ್‌ವುಡ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ಜೋಶುವಾ ಡ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಕೆಮರ್ ರೋಚ್
ಬೆಂಚ್: ಎನ್ಕ್ರುಮಾ ಬೊನ್ನರ್, ಶಾನನ್ ಗೇಬ್ರಿಯಲ್, ಜೋಮೆಲ್ ವಾರಿಕನ್, ಡೆವೊನ್ ಥಾಮಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications