For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಅಟ್ಯಾಕಿಂಗ್ ಸ್ಟಾರ್ ಗಳಿಂದ ಆಕರ್ಷಿಸಿದೆ ಎಚ್ ಗ್ರೂಪ್

2018 World Cup Group H Preview: Attacking Stars Should Decide Tight Race

ನವದೆಹಲಿ, ಜೂ. 14: ಫೀಫಾ ವಿಶ್ವಕಪ್ ಕಾದಾಟಕ್ಕಾಗಿ ಸಜ್ಜಾಗಿರುವ ವಿವಿಧ ಗ್ರೂಪ್ ಗಳಲ್ಲಿ ಅಟ್ಯಾಕಿಂಗ್ ಆಟಗಾರರಿರುವ ಗ್ರೂಪ್ ಆಗಿ ಎಚ್ ಗುರುತಿಸಿಕೊಂಡಿದೆ. ಪೋಲ್ಯಾಂಡ್, ಕೊಲಂಬಿಯಾ, ಸೆನೆಗಲ್ ಮತ್ತು ಜಪಾನ್ ತಂಡಗಳು ಗ್ರೂಪ್ ಎಚ್ ನಲ್ಲಿದ್ದು, ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಬಲ್ಲ ಗುಂಪಿದು.

ಜೂನ್ 14ರಿಂದ ಆರಂಭವಾಗಿ ಜುಲೈ 15ರ ವರೆಗೆ ಒಟ್ಟು 32 ತಂಡಗಳು ಫುಟ್ಬಾಲ್ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದು, ಕ್ರೀಡಾಭಿಮಾನಿಗಳಿಗೆ ಒಂದು ತಿಂಗಳವರೆಗೆ ಫುಟ್ಬಾಲ್ ರಸದೌತಣ ದೊರೆಯಲಿದೆ. ಗ್ರೂಪ್ ಎಚ್ ಪಂದ್ಯಾಟಗಳಲ್ಲಿ ಸೆನೆಗಲ್-ಕೊಲಂಬಿಯಾ ಕಾದಾಟ ಹೆಚ್ಚು ಕುತೂಹಲಕಾರಿಯಾದುದು.

ಇರುವ ತಂಡಗಳಲ್ಲಿ ಕೊಂಚ ದುರ್ಬಲ ತಂಡವೆಂದರೆ ಜಪಾನ್. ಆದರೆ ಈ ಬಾರಿಯ ವಿಶ್ವಕಪ್ ನಲ್ಲಿ ಜಪಾನ್ ಹೇಗೆ ಪ್ರದರ್ಶನ ನೀಡಲಿದೆಯೆಂದು ಈಗಲೇ ಹೇಳುವಂತಿಲ್ಲ. ಒಟ್ಟಿನಲ್ಲಿ ಪೋಲ್ಯಾಂಡ್ ನ ರೋಬರ್ಟ್ ಲೇವಂಡೋಸ್ಕಿ ಮತ್ತು ಸೆನೆಗಲ್ ನ ಸ್ಯಾಡಿಯೋ ಮಾನೆ ಅವರಂಥ ಪ್ರತಿಭಾವಂತ ಆಟಗಾರರಿರುವುದರಿಂದ ಗ್ರೂಪ್ ಎಚ್ ಹೆಚ್ಚು ಮಹತ್ವದ್ದಾಗಿದೆ.

ಎಚ್ ಗುಂಪಿನಲ್ಲಿ ಜೂನ್ 19ರಂದು ಕೊಲಂಬಿಯಾ-ಜಪಾನ್, ಪೋಲ್ಯಾಂಡ್-ಸೆನೆಗಲ್, ಜೂನ್ 24ರಂದು ಜಪಾನ್-ಸೆನೆಗಲ್, ಪೋಲ್ಯಾಂಡ್-ಕೊಲಂಬಿಯಾ, ಜೂನ್ 28ರಂದು ಜಪಾನ್-ಪೋಲ್ಯಾಂಡ್, ಸೆನೆಗಲ್-ಕೊಲಂಬಿಯಾ ತಂಡಗಳು ಸೆಣಸಾಡಲಿವೆ.

Story first published: Friday, June 15, 2018, 13:22 [IST]
Other articles published on Jun 15, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+