ಖ್ಯಾತ ಫುಟ್ಬಾಲ್ ತಂಡಗಳ ಕಲರ್ಫುಲ್ ಜೆರ್ಸಿಯ ಕಂಡೀರಾ..?

ನವದೆಹಲಿ, ಮೇ 29: ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ ಇಲ್ಲಿ ಹಾಕಿಗಿಂತಲೂ ಕ್ರಿಕೆಟ್ ಗೆ ಅಭಿಮಾನಿಗಳು ಜಾಸ್ತಿ. ಅದೇ ನೀವು ಅರ್ಜೆಂಟೀನಾ, ಫ್ರಾನ್ಸ್, ಬ್ರೆಜಿಲ್, ಪೋರ್ಚುಗಲ್ ನಂತ ದೇಶಗಳಿಗೆ ಬಂದರೆ ಅಲ್ಲಿ ಫುಟ್ಬಾಲ್ ದೇ ಪಾರಮ್ಯ.
ಅತೀ ಹೆಚ್ಚು ಹುಚ್ಚು ಅಭಿಮಾನಿಗಳಿರುವ ಕ್ರೀಡೆಯಾಗಿ ಫುಟ್ಬಾಲ್ ಗೆ ಅಗ್ರ ಸ್ಥಾನವಿದೆ. ಇನ್ನೇನು ರಷ್ಯಾದಲ್ಲಿ ನಡೆಯಲಿರುವ 2018 ಫೀಫಾ ವರ್ಲ್ಡ್ ಕಪ್ ಫುಟ್ಬಾಲ್ ಗೆ ಎರಡು ವಾರವಷ್ಟೇ ಬಾಕಿಯಿದ್ದು, ಫುಟ್ಬಾಲ್ ಆಟ ಮೆತ್ತಗೆ ಕಾವೇರುತ್ತಿದೆ. ಜೂನ್ 14ರಿಂದ ಜುಲೈ 15ರ ವರೆಗೆ ಫೀಫಾ ಹಬ್ಬ ನಡೆಯಲಿದೆ.
ವರ್ಲ್ಡ್ ಕಪ್ ನಂತ ಪ್ರತಿಷ್ಠಿತ ಕ್ರೀಡಾಕೂಟಗಳು ಬಂದಾಗ ಮುಖ್ಯವಾಗಿ ಫುಟ್ಬಾಲ್ ನಂತ ಕ್ರೀಡೆಗಳಲ್ಲಿ ಕಿಟ್ ಪ್ರಮುಖ ಆಕರ್ಷಣೆಯಾಗಿರುತ್ತವೆ. 'ಕಿಟ್' ಅಂದರೆ ಫುಟ್ಬಾಲ್ ಆಟಗಾರರು ಧರಿಸುವ ಸಮವಸ್ತ್ರ. ಈ ಬಾರಿಯೂ ಖ್ಯಾತ ತಂಡಗಳು ತಮ್ಮದೇ ವಿಭಿನ್ನ ಶೈಲಿಯ ಜೆರ್ಸಿಯೊಂದಿಗೆ ಗಮನ ಸೆಳೆಯುತ್ತಿವೆ. ಕೆಲವು ಹೆಸರಾಂತ ತಂಡಗಳು (ಅಭಿಮಾನಿಗಳನ್ನೂ ಸೇರಿಸಿ) ಈ ಬಾರಿಯ ಫುಟ್ಬಾಲ್ ನಲ್ಲಿ ಧರಿಸುತ್ತಿರುವ ದಿರಿಸಿನ ಬಗ್ಗೆ ಪುಟಾಣಿ ಮಾಹಿತಿ ಇಲ್ಲಿದೆ..

ಅರ್ಜೆಂಟೀನಾ
ಅಡಿಡಾಸ್ ಬ್ರ್ಯಾಂಡ್ ನ ಜೆರ್ಸಿಯನ್ನು ಅರ್ಜೆಂಟೀನಾ ಹೊರತಂದಿದೆ. ಲಿಯೋನೆಲ್ ಮೆಸ್ಸಿ ಮೆರಗಿನ ಅರ್ಜೆಂಟೀನಾ ಈ ಬಾರಿ ಜೆರ್ಸಿ ಬಣ್ಣವನ್ನು ಬದಲಿಸಿದೆ. ಕಪ್ಪು ಬಣ್ಣದ ಅರ್ಜೆಂಟೀನಾ ಜೆರ್ಸಿಯಲ್ಲಿ ಬಿಳಿ ರೇಖೆಗಳ ಚಿತ್ತಾರವಿದೆ.

ಸ್ಪೇನ್
ಅರೆರೆ! ಇದೇನಪ್ಪಾ; ಫುಟ್ಬಾಲ್ ಲೇಖನದಲ್ಲಿ ಕ್ರಿಕೆಟಿಗ ರೋಹಿತ್ ಶರ್ಮ ಕಾಣಿಸಿಕೊಂಡಿದ್ದಾರೆ ಅಂತ ಕಣ್ ಕಣ್ ಬಿಡಬೇಡಿ. ನಾವಿಲ್ಲಿ ಜೆರ್ಸಿಯ ಬಗ್ಗೆ ಮಾತನಾಡುತ್ತಿದ್ದೇವೆ, ಬರೀ ಜೆರ್ಸಿಯನ್ನಷ್ಟೇ ಗಮನಿಸಿ. ಫುಟ್ಬಾಲ್ ಲೋಕದಲ್ಲಿ ಹೆಸರುವಾಸಿಯಾಗಿರುವ ಸ್ಪೇನ್ ವಿಶ್ವಕಪ್ ಪಂದ್ಯಾಟಕ್ಕೆ ಸಂಬಂಧಿಸಿ ಕಣ್ಸೆಳೆಯುವ ಜೆರ್ಸಿ ಬಿಡುಗಡೆ ಮಾಡಿರುವ ಜೆರ್ಸಿಯಿದು. ಖ್ಯಾತ ಅಡಿಡಾಸ್ ಕಂಪನಿ ಇದನ್ನು ಹೊರ ತಂದಿದೆ.

ಪೋರ್ಚುಗಲ್
ಫುಟ್ಬಾಲ್ ಬಲಾಡ್ಯ ತಂಡವಾಗಿರುವ ಪೋರ್ಚುಗಲ್ ತನ್ನ ಬಹುದಿನದ ಜೊತೆಗಾರ ಪ್ರತಿಷ್ಠಿತ ನೈಕ್ ಕಂಪನಿಯಿಂದ ವಿಶೇಷ ದಿರಿಸು ಹೊರ ತಂದಿದೆ. ಬಿಳಿ ಬಣ್ಣದಲ್ಲಿರುವ ದಿರಿಸು ಆಕರ್ಷಕವಾಗಿದೆ.

ರಷ್ಯಾ
ಅತಿಥೇಯ ರಷ್ಯಾ ತಂಡ 2018ರ ವರ್ಲ್ಡ್ ಕಪ್ ಗಾಗಿ ವಿಭಿನ್ನ ರೀತಿಯ ಜೆರ್ಸಿ ಪರಿಚಯಿಸಿದೆ. ವಿ ನೆಕ್ ರೀತಿಯ ಕೆಂಪು-ಬಿಳಿ ಬಣ್ಣದ ಜೆರ್ಸಿಯನ್ನು ಅಡಿಡಾಸ್ ಕಂಪನಿ ಹೊರತಂದಿದೆ.

ಐಸ್ ಲ್ಯಾಂಡ್
ಮೊದಲ ಬಾರಿಗೆ ವಿಶ್ವ ಕಪ್ ನಲ್ಲಿ ಪಾಲ್ಗೊಳ್ಳುತ್ತಿರುವ ಐಸ್ ಲ್ಯಾಂಡ್ 2018ರ ವರ್ಲ್ಡ್ ಕಪ್ ಗಾಗಿ ಹೊರ ತಂದಿರುವ ಜೆರ್ಸಿ ಕಡು ನೀಲಿ ಬಣ್ಣದಲ್ಲಿದ್ದು ಆಕರ್ಷಕವಾಗಿದೆ. ತೋಳಿನ ಬಳಿ ವಿಭಿನ್ನ ರೀತಿ ಚಿತ್ತಾರ ಐಸ್ ಲ್ಯಾಂಡ್ ಜೆರ್ಸಿಯಲ್ಲಿದೆ.

ನೈಜೀರಿಯಾ
ಈ ಬಾರಿಯ ಫೀಫಾ ವಿಶ್ವಕಪ್ ಗಾಗಿ ಬೇರೆಬೇರೆ ತಂಡಗಳು ಬಿಡುಗಡೆ ಮಾಡಿರುವ ಜೆರ್ಸಿಗಳಲ್ಲಿ ಹೆಚ್ಚು ಗಮನ ಸೆಳೆದು ಸುದ್ದಿಯಾದ ಜೆರ್ಸಿ ನೈಜೀರಿಯದ್ದು. ಕರೆಂಟ್ ಶಾಕ್ ರೀತಿಯ ವಿಭಿನ್ನ ವಿನ್ಯಾಸ ಇದರಲ್ಲಿದೆ. ನೈಕ್ ಬ್ರ್ಯಾಂಡ್ ಹೊರ ತಂದಿರುವ ಆಕರ್ಷಕ ಜೆರ್ಸಿಯಿದು.

ಬ್ರೆಝಿಲ್
ನೈಕ್ ಬ್ರ್ಯಾಂಡ್ ಕಂಪನಿ ಬಿಡುಗಡೆಗೊಳಿಸಿರುವ ಬ್ರೆಝಿಲ್ ತಂಡದ ಜೆರ್ಸಿ ಈ ಬಾರಿ ಕಡುಗೆಂಪು ಬಣ್ಣದಲ್ಲಿದೆ. ರೌಂಡ್ ನೆಕ್ ನಲ್ಲಿರುವ ಜೆರ್ಸಿ ಸರಳ ಸುಂದರವಾಗಿದೆ.

ಜರ್ಮನಿ
ಬಿಳಿ ಬಣ್ಣದ ಜೆರ್ಸಿಯಲ್ಲಿ ಕಪ್ಪು ಗೆರೆಗಳಿವೆ. ಅಡಿಡಾಸ್ ಬ್ರ್ಯಾಂಡ್ ಹೊರ ತಂದಿರುವ ಜೆರ್ಸಿಯಿದು. ಬಿಳಿ ಬಣ್ಣದಲ್ಲಿರುವ ದಿರಿಸಿನ ಎದೆ ಮತ್ತು ತೋಳಿನ ಭಾಗದಲ್ಲಿ ಕಪ್ಪು ಗೆರೆಗಳ ಚಿತ್ತಾರವಿದೆ.

ಪೋಲ್ಯಾಂಡ್
ಗಾಢ ಬಿಳಿ ಬಣ್ಣದ ಜೆರ್ಸಿಯನ್ನು ಪೋಲ್ಯಾಂಡ್ ಹೊರ ತಂದಿದೆ. ಈ ನೂತನ ಜೆರ್ಸಿಯಲ್ಲಿ ಆಟಗಾರನ ಹೆಸರು ಮತ್ತು ಸಂಖ್ಯೆ ಬೆನ್ನಹಿಂದೆ ಕಡುಗೆಂಪು ಬಣ್ಣದಲ್ಲಿ ಬರೆಯಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications