ಫೆಬ್ರವರಿ 17ರಿಂದ ಭಾರತದಲ್ಲಿ ಫೀಫಾ ಯು-17 ಮಹಿಳಾ ವಿಶ್ವಕಪ್ ಆರಂಭ

ನವದೆಹಲಿ: ಫೀಫಾ ಅಂಡರ್ 17 ಮಹಿಳಾ ವಿಶ್ವಕಪ್ ಟೂರ್ನಿ ಭಾರತದಲ್ಲಿ 2021ರ ಫೆಬ್ರವರಿ 17ರಿಂದ ಆರಂಭವಾಗಲಿದೆ. ಫೆಬ್ರವರಿ 17ಕ್ಕೆ ಚಾಲನೆಗೊಳ್ಳುವ ಅಂಡರ್ 17 ಮಹಿಳಾ ವಿಶ್ವಕಪ್ ಟೂರ್ನಿಯ 7ನೇ ಆವೃತ್ತಿ ಮಾರ್ಚ್ 7ರ ಭಾನುವಾರ ಕೊನೆಗೊಳ್ಳಲಿದೆ.
ಟೂರ್ನಿಯನ್ನು 2020ರ ನವೆಂಬರ್ 2ರಿಂದ 21ರ ವರೆಗೆ ನಡೆಸಲು ಯೋಚಿಸಲಾಗಿತ್ತು. ಆದರೆ ಕೊರೊನಾವೈರಸ್ ಕಾರಣ ಟೂರ್ನಿ ಮುಂದಿನ ವರ್ಷ ಫೆಬ್ರವರಿಗೆ ಮುಂದೂಡಲ್ಪಟ್ಟಿದೆ. ಸ್ಪೇನ್ ತಂಡ ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ಸ್ ಆಗಿದೆ. 2018ರಲ್ಲಿ ಸ್ಪೇನ್ ತನ್ನ ಮೊದಲ ಟ್ರೋಫಿ ಗೆದ್ದಿತ್ತು.
ಪ್ರತಿಷ್ಠಿತ ಟೂರ್ನಿಯ ಪಂದ್ಯಗಳು ಭುವನೇಶ್ವರ್‌ನ ಕಳಿಂಗ ಸ್ಟೇಡಿಯಂ, ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ, ಗುವಾಹಟಿಯ ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂ, ಅಹ್ಮದಾಬಾದ್‌ನ ಏಕ ಅರೇನಾ ಮತ್ತು ನವಿ ಮುಂಬೈಯ ಡಿವೈ ಪಾಟಿಲ್ ಸ್ಟೇಡಿಯಂಗಳಲ್ಲಿ ನಡೆಯಲಿವೆ.
ಭಾರತ, ಜಪಾನ್, ನಾರ್ತ್ ಕೊರಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಜರ್ಮನಿ, ಸ್ಪೇನ್ ಸೇರಿ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿವೆ. ಟೂರ್ನಿಯ ಇನ್ನುಳಿದ ತಂಡಗಳು ಇನ್ನಷ್ಟೇ ಹೆಸರಿಸಲ್ಪಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications