5 Unbreakable World Cup Records: ಮೆಸ್ಸಿ, ರೊನಾಲ್ಡೊ ಕೈಯಲ್ಲೂ ಮುರಿಯಲಾಗದ ಫುಟ್ಬಾಲ್ ವಿಶ್ವಕಪ್‌ನ 5 ದಾಖಲೆಗಳು
23ನೇ ಆವೃತ್ತಿಯ ಫಿಫಾ ವಿಶ್ವಕಪ್ ಆರಂಭವಾಗಿದೆ. ಈ ಬಾರಿಯ ವಿಶ್ವಕಪ್ ಫುಟ್ಬಾಲ್‌ನ್ನು ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ದೇಶಗಳು ಆಯೋಜಿಸುತ್ತಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 48 ದೇಶಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು 12 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಈ ವೇಳೆ ಅಭಿಮಾನಿಗಳ ಕಣ್ಣು ಸ್ಟಾರ್ ಆಟಗಾರರ ಮೇಲೆ ನೆಟ್ಟಿದೆ.
ವಿಶ್ವ ಫುಟ್ಬಾಲ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅರ್ಜೆಂಟೀನಾ ಲಿಯೋನೆಲ್, ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ, ಬ್ರೆಜಿಲ್ ತಂಡದ ನೇಮರ್ ಕಣಕ್ಕೆ ಇಳಿಯಲಿದ್ದಾರೆ. ಈ ಆಟಗಾರರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ತಯಾರಾಗಿದ್ದಾರೆ. ಈ ಸ್ಟಾರ್ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸುವ ಕನಸು ಹೊಂದಿದ್ದಾರೆ. ಲಿಯೊನೆಲ್ ಮೆಸ್ಸಿ ಹಾಗೂ ರೊನಾಲ್ಡೊ ಕಣಕ್ಕೆ ಇಳಿಯುತ್ತಲೇ ದೊಡ್ಡ ದಾಖಲೆ ಬರೆಯಲಿದ್ದಾರೆ.

ಮೆಸ್ಸಿ ಹಾಗೂ ರೊನಾಲ್ಡೊ ತಮ್ಮ ತಮ್ಮ ತಂಡಗಳ ಪರ ಕಣಕ್ಕೆ ಇಳಿಯುತ್ತಿದ್ದಂತೆ 6ನೇ ಫಿಫಾ ವಿಶ್ವಕಪ್ ಆಡಿದ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಅರ್ಜೆಂಟೀನಾ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದ್ದು, ಪೋರ್ಚುಗಲ್ ಮೊದಲ ಪ್ರಶಸ್ತಿಯ ಕನಸಿನಲ್ಲಿದೆ. ಆದರೆ ಸ್ಟಾರ್ ಆಟಗಾರರು ದೊಡ್ಡ ದೊಡ್ಡ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರೂ, ಫುಟ್ಬಾಲ್ ವಿಶ್ವಕಪ್‌ನಲ್ಲಿ ಆ ಐದು ದಾಖಲೆಗಳನ್ನು ಮುರಿಯುವುದು ಕಷ್ಟ ಎನಿಸುತ್ತದೆ.
ಒಂದೇ ವಿಶ್ವಕಪ್‌ನಲ್ಲಿ 13 ಗೋಲು
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಹಲವು ಸ್ಟಾರ್ ಆಟಗಾರರು ಅಬ್ಬರಿಸಿದ್ದಾರೆ. ಆದರೆ 1958ರಲ್ಲಿ ನಡೆದಿದ್ದ ಫುಟ್ಬಾಲ್ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡದ ಆಟಗಾರ ಜಸ್ಟ್ ಫಾಂಟೈನ್ ಬರೆದ ದಾಖಲೆಯನ್ನು ಈ ವರೆಗೆ ಯಾವೊಬ್ಬ ಆಟಗಾರ ಮುರಿಯಲು ಸಾಧ್ಯವಾಗಿಲ್ಲ. ಇವರು ಒಂದೇ ಆವೃತ್ತಿಯ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು13 ಗೋಲು ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ವಿಶ್ವಕಪ್ ಗೆದ್ದ ಪೀಲೆ
ಫುಟ್‌ಬಾಲ್ ಸಾಮ್ರಾಟ ಬ್ರೆಜಿಲ್‌ನ ಪೀಲೆ ಅವರ ಹೆಸರಿನಲ್ಲಿ ಹಲವು ದಾಖಲೆಗಳು ಇವೆ. ಅದರಲ್ಲಿ ಹಲವು ದಾಖಲೆಗಳು ಮುರಿಯಬಹುದು. ಆದರೆ ಆ ಒಂದು ದಾಖಲೆಯನ್ನು ಈ ವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. 1958ರ ವಿಶ್ವಕಪ್‌ನಲ್ಲಿ ಪೀಲೆ ಕೇವಲ 17 ವರ್ಷ 249 ದಿನಗಳವರಾಗಿದ್ದಾಗ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಇವರು ಅಮೋಘ ಕಾಲ್ಚಳಕ ಪ್ರದರ್ಶಿಸಿ ಸೆಮಿಫೈನಲ್‌ನಲ್ಲಿ ಹ್ಯಾಟ್ರಿಕ್ ಹಾಗೂ ಫೈನಲ್‌ನಲ್ಲಿ 2 ಗೋಲು ಬಾರಿಸಿ ಮಿಂಚಿದ್ದರು.
ಒಂದೇ ಪಂದ್ಯದಲ್ಲಿ ಗರಿಷ್ಠ ಗೋಲು
ಫುಟ್ಬಾಲ್ ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಹೆಗ್ಗಳಿಕೆ ರಷ್ಯಾದ ಒಲೆಗ್ ಸಾಲೆಂಕೊ ಅವರಿಗೆ ಸಲ್ಲುತ್ತದೆ. ಇವರು 1994ರಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಕ್ಯಾಮರೂನ್ ವಿರುದ್ಧ 5 ಗೋಲುಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದರು.
11 ಸೆಕೆಂಡ್‌ನಲ್ಲಿ ಗೋಲು
ಫುಟ್ಬಾಲ್‌ನಲ್ಲಿ ಈಗಲೂ ಹಲವು ದಾಖಲೆಗಳನ್ನು ಅಳಿಸುವುದು ಅಸಾಧ್ಯವೆನ್ನುವಂತೆ ಇದೆ. ಅದರಲ್ಲಿ ಟರ್ಕಿಯ ಹಕನ್ ಸುಕುರ್ ಅವರ ಈ ಒಂದು ದಾಖಲೆಯನ್ನು ಅಳಿಸುವುದು ತುಂಬಾ ಕಷ್ಟ. ಇವರು 2002ರಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಕೇವಲ 11 ಸೆಕೆಂಡ್‌ಗಳಲ್ಲಿ ಗೋಲು ಬಾರಿಸಿ ಮಿಂಚಿದ್ದರು.
ಮೂರು ವಿಶ್ವಕಪ್ ಗೆದ್ದಿರುವ ಬ್ರೆಜಿಲ್ ದಿಗ್ಗಜ ಪೀಲೆ
ತಮ್ಮ ಅಮೋಘ ಕಾಲ್ಚಳಕದ ಮೂಲಕವೇ ವಿಶ್ವದಲ್ಲಿ ಗುರುತಿಸಿಕೊಂಡಿದ್ದ ಆಟಗಾರ ಬ್ರೆಜಿಲ್ ಆಟಗಾರ ಪೀಲೆ. ಇವರು ಫುಟ್ಬಾಲ್ ವಿಶ್ವಕಪ್‌ನಲ್ಲಿ ಹಲವು ದಾಖಲೆಯನ್ನು ಬರೆದಿದ್ದಾರೆ. ಪೀಲೆ ಬ್ರೆಜಿಲ್ ತಂಡದ ಪರವಾಗಿ ಮೂರು ಬಾರಿ (1958, 1962 ಮತ್ತು 1970) ಫಿಫಾ ವಿಶ್ವಕಪ್ ಟ್ರೋಫಿ ಗೆದ್ದ ತಂಡದ ಸದಸ್ಯರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

