ಕುರುಡನೊಬ್ಬ ಫುಟ್ಬಾಲ್ ಆಟ ಸಂಭ್ರಮಿಸುವ ಅಪೂರ್ವ ವಿಡಿಯೋ!

ಮಾಸ್ಕೋ, ಜೂ. 27: ಹುಟ್ಟು ಕುರುಡನೊಬ್ಬನಿಗೆ ನೀವು ವಿವಿಧ ಬಣ್ಣಗಳನ್ನು ವರ್ಣಿಸಬಲ್ಲಿರಾ? ಬಣ್ಣವನ್ನು ವರ್ಣಿಸೋದು ಬಲು ಕಷ್ಟವೇ ಸರಿ. ಆದರೆ ಕಣ್ಣುಕಾಣದ, ಕಿವಿಯೂ ಕೇಳದ ವ್ಯಕ್ತಿಯೊಬ್ಬನಿಗೆ ಬಣ್ಣವನ್ನು ವರ್ಣಿಸುವಷ್ಟೇ ಕಷ್ಟದ ಕೆಲಸವನ್ನು ಫುಟ್ಬಾಲ್ ಪ್ರೇಮಿಯೊಬ್ಬ ಅಪೂರ್ವ ರೀತಿಯಲ್ಲಿ ಮಾಡಿದ್ದಾನೆ.
ಕುರುಡರಿಗೇನು ಆಸೆಯೇ ಇರಬಾರದೆ? ಖಂಡಿತಾ ಮನುಷ್ಯರಾದವರಿಗೆ ಎಲ್ಲರಿಗೂ ಆಸೆಗಳು ಇದ್ದೇಇದೆ. ಆದರೆ ಕುರುಡರ ಎಲ್ಲಾ ಆಸೆಗಳು ನೆರವೇರೋದಕ್ಕೆ ಸಾಧ್ಯವಿಲ್ಲ. ತಾನು ಫುಟ್ಬಾಲ್ ಆಟವನ್ನು ನೋಡಬೇಕು, ಆಡಬೇಕು ಅಂತ ಆಸೆಪಟ್ಟ ಕಣ್ಣು ಕಾಣದ, ಕಿವಿಯೂ ಕೇಳದ ಫುಟ್ಬಾಲ್ ಗೆಳೆಯನಿಗೆ ಕೊಂಬಿಯಾದ ಬೊಗೋಟ ರೆಸ್ಟೋರೆಂಟ್ ನಲ್ಲಿ ಇನ್ನೊಬ್ಬ ಫುಟ್ಬಾಲ್ ಅಭಿಮಾನಿ ವಿಭಿನ್ನ ರೀತಿಯಲ್ಲಿ ಫುಟ್ಬಾಲ್ ಝಲಕ್ ನೀಡಿದ್ದಾನೆ.
ಇಲ್ಲಿ ಫುಟ್ಬಾಲ್ ಆಟವನ್ನು ಸಂಭ್ರಮಿಸಲು ಹಂಬಲಿಸಿದ ಕುರುಡನಿಗೆ ಕೊಲಂಬಿಯಾದ ವ್ಯಕ್ತಿ ತಾವು ಫುಟ್ಬಾಲ್ ಮೈದಾನಕ್ಕಿಳಿದು ಆಡುತ್ತಿರುವಷ್ಟೇ ಚಂದವಾಗಿ ಆಟದ ಅರಿವನ್ನು ನೀಡಿದ್ದಾನೆ. ಕುರುಡ-ಕಿವುಡ ಮತ್ತು ಫುಟ್ಬಾಲ್ ಅಭಿಮಾನಿ ಪರಸ್ಪರ ಮಾತನಾಡಲಿಲ್ಲ. ಮಾತನಾಡಿದರೆ ಇಬ್ಬರಲ್ಲೊಬ್ಬನಿಗೆ ಕೇಳುವುದೂ ಇಲ್ಲಬಿಡಿ. ಬದಲಿಗೆ ಇಬ್ಬರೂ ತಮ್ಮ ಕೈಗಳನ್ನು ಬಳಸಿ ಫುಟ್ಬಾಲ್ ಆಟದ ಕಿಕ್ಕನ್ನು ಸಂಭ್ರಮಿಸುತ್ತಾರೆ. ಕೊಲಿಂಬಿಯಾ ವ್ಯಕ್ತಿಯ ಈ ಪ್ರಯತ್ನ ನೋಡುತ್ತಲೇ ಭಾವನಾತ್ಮಕ ಜೀವಿಗಳ ಕಣ್ಣಂಚು ಖುಷಿಯಲ್ಲಿ ಒದ್ದೆಯಾದರೂ ಅಚ್ಚರಿಯಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications