ಫೀಫಾ ವಿಶ್ವಕಪ್ ಭವಿಷ್ಯ ಹೇಳಲಿದೆ 'ಅಚಿಲ್ಸ್' ಹೆಸರಿನ ಈ ಬೆಕ್ಕು!

ಸೇಂಟ್ ಪೀಟರ್ಸ್ ಬರ್ಗ್, ಜೂ. 10: ಸುಮಾರು 8 ವರ್ಷಗಳಿಗೆ ಹಿಂದೆ ಫೀಫಾ ವಿಶ್ವಕಪ್ ನಲ್ಲಿ ಗೆಲ್ಲುವ ತಂಡವನ್ನು ಭವಿಷ್ಯ ಹೇಳಿ ಪೌಲ್ ಹೆಸರಿನ ಅಕ್ಟೋಪಸ್ ಸಕ್ಕತ್ ಫೇಮಸ್ ಆಗಿತ್ತು. ಈ ಬಾರಿ ರಷ್ಯಾ ಫೀಫಾ ವರ್ಲ್ಡ್ ಕಪ್ ನ ಭವಿಷ್ಯ ನುಡಿಯುವ ಸರದಿ ಅಚಿಲ್ಸ್ ಹೆಸರಿನ ಬಿಳಿ ಬೆಕ್ಕಿಗೆ ಬಂದೊದಗಿದೆ.
ಅಚಿಲ್ಸ್ ಗೆ ಕಿವಿ ಕೇಳಿಸುವುದಿಲ್ಲ. ಆದರೆ ಈ 2018ರ ಫೀಫಾ ವಿಶ್ವಕಪ್ ನಲ್ಲಿ ಗೆಲ್ಲುವ ತಂಡವನ್ನು ಅಚಿಲ್ಸ್ ಹೇಳಲಿದೆ. ಅಷ್ಟೇ ಅಲ್ಲ ರಷ್ಯಾ ಫುಟ್ಬಾಲ್ ವಿಶ್ವಕಪ್ ಪಂದ್ಯಾಟದ ಅಧಿಕೃತ ಭವಿಷ್ಯಕಾರನಾಗಿ ಅಚಿಲ್ಸ್ ಕಾರ್ಯ ನಿರ್ವಹಿಸಲಿದೆ.
2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಫೀಫಾ ವಿಶ್ವಕಪ್ ನಲ್ಲಿ ನಿಖರ ಭವಿಷ್ಯ ನುಡಿದಿದ್ದ ಪೌಲ್ ಹೆಸರಿನ ಅಕ್ಟೋಪಸ್ ಬಹಳ ಜನಪ್ರಿಯವಾಗಿತ್ತು. ಆ ಸಂದರ್ಭ ಭವಿಷ್ಯ ಹೇಳಲು ಪೌಲ್ ಗೆ ಆಹಾರ ತುಂಬಿದ ಎರಡು ಪೆಟ್ಟಿಗೆಗಳನ್ನು ನೀಡಲಾಗಿತ್ತು. ಇದೇ ರೀತಿ ಅಚಿಲ್ಸ್ ಗೂ ತಂಡಗಳ ಬಾವುಟಗಳಿರುವ ಬೌಲ್ ಗಳನ್ನು ನೀಡಿ ಭವಿಷ್ಯ ಕೇಳಲಾಗುತ್ತದೆ.
'ರಷ್ಯಾದಲ್ಲಿನ ಫೀಫಾ ವಿಶ್ವಕಪ್ ಪಂದ್ಯಗಳ ಭವಿಷ್ಯ ಕೇಳಲು ಈ ಬಾರಿ ಅಚಿಲ್ಸ್ ಎಂಬ ಬಿಳಿ ಬಣ್ಣದ ಬೆಕ್ಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬೆಕ್ಕಿಗೆ ಕಿವಿ ಕೇಳುವುದಿಲ್ಲ. ಈ ಬಾರಿ ಅದು ಹೇಳುವ ಭವಿಷ್ಯದ ಪ್ರಕಾರವೇ ಫಲಿತಾಂಶಗಳು ಬರಬಹುದು ಎಂಬ ನಿರೀಕ್ಷೆ ಇದೆ' ಎಂದು ಪಶುವೈದ್ಯೆಯಾಗಿರುವ ಅನ್ನಾ ಕಸತ್ಕಿನಾ ಹೇಳಿದ್ದಾರೆ.
ಮಾತು ಬಾರದ ಪ್ರಾಣಿಗಳಿಗೆ ಅದ್ಹೇಗೆ ಭವಿಷ್ಯ ಗೊತ್ತಾಗುತ್ತದೆ ಎಂಬುದೇ ಗೊತ್ತಿಲ್ಲ. ಅದರಲ್ಲೂ 2010ರ ಫೀಪಾ ವಿಶ್ವಕಪ್ ಸಂದರ್ಭ ಜರ್ಮನಿ ತಂಡ ಆಡಿದ 13 ಪಂದ್ಯಗಳಲ್ಲಿ 11 ಫಲಿತಾಂಶಗಳು ಪೌಲ್ ಅಕ್ಟೋಪಸ್ ಹೇಳಿದ ರೀತಿಯೇ ಫಲಿತಾಂಶಗಳು ಬಂದಿದ್ದವು. ಇದಲ್ಲದೆ ಫೈನಲ್ ನಲ್ಲಿ ಸ್ಪೇನ್ ಗೆಲ್ಲಲಿದೆ ಎಂದಿದ್ದ ಪೌಲ್ ಭವಿಷ್ಯವೂ ನಿಜವಾಗಿತ್ತು.
ಹೀಗೆ ಜನಪ್ರಿಯಗೊಂಡಿದ್ದ ಭವಿಷ್ಯಕಾರ ಅಕ್ಟೋಪಸ್ ಪೌಲ್ ಬಗ್ಗೆ ಇನ್ನೊಂದು ಕುತೂಹಲಕಾರಿ ಸಂಗತಿಯಿದೆ. ಅದೇನೆಂದರೆ 26 ಜನವರಿ 2008ರಂದು ಜನಿಸಿದ್ದ ಪೌಲ್, 26 ಅಕ್ಟೋಬರ್ 2010ರಂದು ಸಾವನ್ನಪ್ಪಿತ್ತು. ಈ ಬಾರಿ ಪೌಲ್ ಜಾಗವನ್ನು ಆವರಿಸಿಕೊಂಡಿರುವ ಅಚಿಲ್ಸ್ ಕುತೂಹಲಕೆರಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications