ಭಾರತದ ಫುಟ್ಬಾಲ್ ವೆಬ್ ಸೈಟಿಗೆ ಕನ್ನ ಹಾಕಿದ ಪಾಕಿಸ್ತಾನಿಗಳು!
ನವದೆಹಲಿ, ಮೇ 10: ಭಾರತೀಯ ಫುಟ್ಬಾಲ್ ಫೆಡರೆಷನ್ (ಎಐಎಫ್ಎಫ್)ನ ಅಧಿಕೃತ ವೆಬ್ ಸೈಟಿಗೆ ಪಾಕಿಸ್ತಾನಿಗಳು ಕನ್ನ ಹಾಕಿದ್ದಾರೆ. ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆ ಪಡೆದಿರುವ ಭಾರತದ ಗೂಢಾಚಾರಿ ಕುಲಭೂಷಣ್ ವಿರುದ್ಧ ಪೋಸ್ಟ್ ಹಾಕಲಾಗಿದೆ.
ಮಂಗಳವಾರ (ಮೇ 09) ರಂದು ಕನ್ನ ಹಾಕಿದ ಪಾಕಿಸ್ತಾನ ಮೂಲದ ಹ್ಯಾಕರ್ಸ್, ಸಂದೇಶವೊಂದನ್ನು ಬಿಟ್ಟು ನಿಮಗೆ ಕುಲಭೂಷಣ್ ವಾಪಸ್ ಬೇಕೇ? ನಿಮಗೆ ಇದು ನಮ್ಮ ಕೊಡುಗೆ ಎಂದು ಕುಲಭೂಷಣ್ ಚಿತ್ರವನ್ನು ಹಾಕಲಾಗಿದೆ.

ಆದರೆ, ಬುಧವಾರ (ಮೇ 10)ದಂದು ವೆಬ್ ಸೈಟ್ ಮತ್ತೆ ಸಮಸ್ಥಿತಿಗೆ ಬಂದಿದೆ. ಈ ಬಗ್ಗೆ ಎಐಎಫ್ಎಫ್ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದೆ.
ಭಾರತದ ಗುಪ್ತಚರ ಸಂಸ್ಥೆ RAW ಪರವಾಗಿ ಪಾಕಿಸ್ತಾನದಲ್ಲಿದ್ದುಕೊಂಡು ಗೂಢಾಚಾರಿಕೆ ನಡೆಸಿದ ಆರೋಪದ ಮೇಲೆ ಕುಲಭೂಷಣ್ ಯಾದವ್ ಅವರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ನಂತರ ಕುಲಭೂಷಣ್ ಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.
ಆದರೆ, ಇದರ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟಿಗೆ ಭಾರತ ಮೇಲ್ಮನವಿ ಸಲ್ಲಿಸಿದ್ದು, ಯಾದವ್ ಅವರ ಗಲ್ಲುಶಿಕ್ಷೆಗೆ ತಡೆ ಸಿಕ್ಕಿದೆ.
Story first published: Wednesday, January 3, 2018, 10:06 [IST]
Other articles published on Jan 3, 2018
Read in English: AIFF website hacked
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications