Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅರ್ಜೆಂಟೀನಾ ಫುಟ್ಬಾಲ್ ಪ್ರೇಮಕ್ಕೆ ಫೇಮಸ್ ಪೇಂಟಿಂಗೇ ಬದಲಾಯ್ತು!

Argentina Football Club, Diego Maradona is God, Lionel Messi is Adam

ಬ್ಯೂನಸ್ ಏರ್ಸ್, ಎ. 26: ಈ ಚಿತ್ರವನ್ನೇ ಒಮ್ಮೆ ತದೇಕಚಿತ್ತದಿಂದ ದಿಟ್ಟಿಸಿ. ಕಣ್ಣುಗಳನ್ನು ಕೊಂಚ ಜೂಮ್ ಮಾಡಿ ನೋಡಿದರೆ ನಿಮಗೆ, 'ಈ ಚಿತ್ರವನ್ನು ಎಲ್ಲೋ ನೋಡಿದ್ದಂಗಿದ್ಯಲ್ಲ..' ಅನ್ನಿಸಬಹುದು.

ನೀವು ನೆಟ್ಟಿಗರಾದರೆ 'ಕ್ರಿಯೇಶನ್ ಆಫ್ ಆಡಮ್' ಅಂತ (ಇಂಗ್ಲೀಷಿನಲ್ಲಿ) ಟೈಪಿಸಿ ಹುಡುಕಾಡಿ ಸಾಕು; ಇಂಥದ್ದೇ ಒಂದು ಚಿತ್ರ ನಿಮ್ಮ ಕಣ್ಣಮುಂದೆ ನಿಲ್ಲುತ್ತದೆ. ಆದರೆ ಅಲ್ಲಿ ಸಿಕ್ಕುವ ಚಿತ್ರದಲ್ಲೂ ಇದರಲ್ಲೂ ಅದೇನೋ ಅದಲುಬದಲಾದಂತೆ ಕಾಣಿಸುತ್ತದೆ. ಅಂದಹಾಗೆ ಅರ್ಜೆಂಟೀನಾದ ಫುಟ್ಬಾಲ್ ಕ್ಲಬ್‌ವೊಂದರಲ್ಲಿ ಮಾತ್ರ ಕಾಣಸಿಗುವ ವಿಚಿತ್ರ ಚಿತ್ರವಿದು!

ಹೇಳಿಕೇಳಿ 'ಫುಟ್ಬಾಲ್ ಹುಚ್ಚರ ದೇಶ'ವೆಂದೇ ಖ್ಯಾತಿಯಾದ ಅರ್ಜೆಂಟೀನಾದ ಬ್ಯೂನಸ್ ಏರ್ಸ್ ನ ಬರಾಕಾಸ್ ಜಿಲ್ಲೆಯ ಸ್ಪೋರ್ಟಿವೋ ಪೆರೆರ ಫುಟ್ಬಾಲ್ ಕ್ಲಬ್‌ನಲ್ಲಿ ಇಂಥದ್ದೊಂದು ಅಪರೂಪದ ಚಿತ್ರವಿದೆ. ಒರಿಜಿನಲ್ ಚಿತ್ರದಲ್ಲಿ ದೇವರು ಮೊದಲ ಪುರುಷ ಆಡಮ್‌ಗೆ ಜೀವ ನೀಡುತ್ತಿರುವ ಚಿತ್ರವಿದೆ.

Argentina Football Club, Diego Maradona is God, Lionel Messi is Adam

ಅಂದರೆ ದೇವರು ಆಡಮ್ ಕೈ ಮುಟ್ಟುತ್ತಿರುವಂತೆ ಇಲ್ಲಿ ಚಿತ್ರಿಸಲಾಗಿದೆ. ಖ್ಯಾತ ಚಿತ್ರಕಾರ ಮೈಖೆಲೆಂಜೆಲೋ ಗೀಚಿದ ಅದ್ಭುತ, ವಿಶ್ವವಿಖ್ಯಾತ ಚಿತ್ರವಿದು. ಆದರೆ ಸ್ಪೋರ್ಟಿವೋ ಪೆರೆರ ಕ್ಲಬ್‌ನಲ್ಲಿರುವ ಚಿತ್ರದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದೆ.

ಇಲ್ಲಿ ದೇವರ ಜಾಗದಲ್ಲಿ ಫುಟ್ಬಾಲ್ ಪ್ರೇಮಿಗಳ ಆರಾದ್ಯ ದೈವ ಡಿಗೋ ಮರಡೋನಾ ಇದ್ದರೆ, ಆಡಮ್‌ನ ಜಾಗದಲ್ಲಿ ಲಿಯೋನೆಲ್ ಮೆಸ್ಸಿಯನ್ನು ಚಿತ್ರಿಸಲಾಗಿದೆ. ಮೂಲ ಚಿತ್ರದಲ್ಲಿರುವ ದೇವರ ಉಡುಪೂ ಇಲ್ಲಿ ಬದಲಾಗಿದೆ. ಬೆತ್ತಲು ಮೈಯ ಆಡಮ್ ಜಾಗದಲ್ಲಿರುವ ಮೆಸ್ಸಿ ಅರ್ಜೆಂಟೀನಾ ಜೆರ್ಸಿಯೊಂದಿಗೆ ನಗು ಬೀರುತ್ತಿದ್ದಾನೆ!

ಸ್ಪೋರ್ಟಿವೋ ಪೆರೆರ ಕ್ಲಬ್‌ನೊಳಗೆ ಈ ಚಿತ್ರವನ್ನು ಬೃಹದಾಕಾರಲ್ಲಿ ಚಿತ್ರಿಸಿರುವ ಕಲಾವಿದ ಸಾಂಟಿಯಾಗೋ ಬಾರ್ಬಿಟೋ ಈ ಬಗ್ಗೆ ಪ್ರತಿಕ್ರಿಯಿಸಿ, 'ಫುಟ್ಬಾಲ್ ಕ್ರೀಡೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಒಂದುವೇಳೆ ಮರಡೋನಾ ಅವರು ಮೆಸ್ಸಿಗೆ ಸಂದೇಶ ರವಾನಿಸಿದರೆ ಹೇಗಿರುತ್ತಿತ್ತು ಎಂದು ಕಲ್ಪಸಿ ಇದನ್ನು ಬರೆದಿದ್ದೇನೆ' ಎಂದಿದ್ದಾರೆ.

ಏನಾದರೂ ಹೀಗೊಂದು ಕಲ್ಪನೆಯಡಿಯಲ್ಲಿ ಚಿತ್ರ ಬರೆದು ಫುಟ್ಬಾಲ್ ಕ್ರೀಡೆಯೆಡೆಗಿನ ಅಭಿಮಾನ, ಪ್ರೀತಿ ತೋರ್ಪಡಿಸಿದ ಕಲಾವಿದ ಕೈಗಳಿಗೊಂದು ಕೈ ಮುಗಿಯಲೇಬೇಕುಅನ್ನಿ. ಫುಟ್ಬಾಲ್ ಫ್ಯಾನ್ ಕಲಾವಿದನೊಬ್ಬನ ಕೈಗೆ ಫೇಮಸ್ ಚಿತ್ರವೊಂದು ಸಿಕ್ಕುಬಿಟ್ಟರೆ ಹೇಗೆಲ್ಲ ಬದಲಾಗಿಬಿಡುತ್ತದೆ ಅನ್ನುವುದಕ್ಕೆ ಈ ಚಂದದ ಹುಚ್ಚಾಟವೇ ಉದಾಹರಣೆ!

Story first published: Thursday, April 26, 2018, 18:08 [IST]
Other articles published on Apr 26, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+