ವಿಶ್ವಕಪ್: ಕುತೂಹಲ ಮೂಡಿಸಿದೆ ಮೆಸ್ಸಿ-ರೊನಾಲ್ಡೋ ಮುಖಾಮುಖಿ!

ಮಾಸ್ಕೋ, ಜೂ. 27: ಫುಟ್ಬಾಲ್ ಎಂಬುದು ಎರಡು ತಂಡಗಳ ನಡುವಿನಾಟ. ಆದರೆ ಫೀಫಾದಂತ ಪ್ರತಿಷ್ಠಿತ ಪಂದ್ಯಾಟಗಳ ವಿಚಾರಕ್ಕೆ ಬಂದರೆ ಕೆಲವೊಮ್ಮೆ ಅಲ್ಲಿ ತಂಡಕ್ಕಿಂತಲೂ ವ್ಯಕ್ತಿಗಳೇ ಪ್ರಮುಖ ಗಮನಾರ್ಹ ವಿಚಾರವಾಗಿ ಗೋಚರಿಸುತ್ತಾರೆ. ಈ ಬಾರಿ ಸ್ಟಾರ್ ಆಟಗಾರರಾದ ಲಿಯೋನೆಲ್ ಮೆಸ್ಸಿ-ಕ್ರಿಸ್ಚಿಯಾನೋ ರೊನಾಲ್ಡೋ ಅಪರೂಪದ ಮುಖಾಮುಖಿ ಕುತೂಹಲ ಮೂಡಿಸಿದೆ.
ಮೆಸ್ಸಿ-ರೊನಾಲ್ಡೋ ಇಬ್ಬರನ್ನೂ ಪರಿಗಣಿಸಿದರೆ ಫೀಫಾ ವಿಶ್ವಕಪ್ 2018ರಲ್ಲಿ ಅರ್ಜೆಂಟೀನಾ ಆಟಗಾರ ಮೆಸ್ಸಿಗಿಂತ ಪೋರ್ಚುಗಲ್ ಆಟಗಾರ ರೊನಾಲ್ಡೋ ಅವರೇ ಕೊಂಚ ಗಮನಾರ್ಹ ಸಾಧನೆ ತೋರಿದ್ದಾರೆ. ಪಂದ್ಯಾಟದಲ್ಲಿ ಈವರೆಗೆ ನಾಲ್ಕು ಗೋಲ್ ಕೊಡುಗೆಯನ್ನು ರೊನಾಲ್ಡೋ ತನ್ನ ತಂಡಕ್ಕೆ ನೀಡಿದ್ದಾರೆ. ಇದರಲ್ಲಿ ಎರಡು ಪಂದ್ಯಗಳು ಡ್ರಾಗೊಂಡಿದ್ದರೆ, ಒಂದು ಪಂದ್ಯವನ್ನು ಪೋರ್ಚುಗಲ್ ಗೆದ್ದಿತ್ತು.
ಇತ್ತ ಮೆಸ್ಸಿ ಈವರೆಗಿನ ಪಂದ್ಯಾಟದಲ್ಲಿ ಬಾರಿಸಿದ್ದು ಒಂದೇ ಗೋಲ್. ಮಂಗಳವಾರದ ಮುಕ್ತಾಯಗೊಂಡ ನೈಜೀರಿಯಾ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮೆಸ್ಸಿ ಗೋಲ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಈ ಗೆಲುವಿನ ಮೂಲಕ ಅರ್ಜೆಂಟೀನಾ ಪಂದ್ಯಾಟದಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡಿತ್ತು.
ಎಲ್ಲದಕ್ಕಿಂತ ಮುಖ್ಯ ವಿಚಾರವೆಂದರೆ ಅಂತಾರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ಮೆಸ್ಸಿ-ರೊನಾಲ್ಡೋ ಮುಖಾಮುಖಿಯಾಗಿದ್ದು ಬಹಳ ಕಡಿಮೆ. ಆದರೆ ಈಗ ಮುಖಾಮುಖಿಯಾಗುವುದರಲ್ಲಿದ್ದಾರೆ. ಅದೂ ಫೀಫಾದಂತಹ ಈ ಪ್ರತಿಷ್ಠಿತ ಪಂದ್ಯಾಟದಲ್ಲೇ ಅನ್ನೋದು ವಿಶೇಷ.
ಪೋರ್ಚುಗಲ್ ಒಟ್ಟು 5 ಪಾಯಿಂಟ್ ಗಳನ್ನು ಗಳಿಸಿದ್ದು, ಬಿ ಗ್ರೂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ಅರ್ಜೆಂಟೀನಾಕ್ಕೆ 4 ಪಾಯಿಂಟ್ಸ್ ಗಳು ಲಭಿಸಿವೆ. ಮುಂದಿನ ಪಂದ್ಯದಲ್ಲಿ ಪೋರ್ಚುಗಲ್ ತಂಡ ಉರುಗ್ವೆಯನ್ನು ಸೋಲಿಸಿದರೆ, ಅರ್ಜೆಂಟೀನಾ ತಂಡ ಫ್ರಾನ್ಸ್ ವಿರುದ್ಧ ಗೆದ್ದರೆ ನಾವು ಮೆಸ್ಸಿ-ರೊನಾಲ್ಡೋ ಕಾದಾಟವನ್ನು ಕಣ್ತುಂಬಿಕೊಳ್ಳಲಿದ್ದೇವೆ. ಅಪರೂಪದ ಕ್ಷಣವೊಂದಕ್ಕೆ ಅವಕಾಶ ದೊರೆಯುವಂತಾಗಲಿ ಅಲ್ಲವೆ?
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications