For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

21ನೇ ವಯಸ್ಸಿನಲ್ಲೇ ಮಿಡ್ ಫೀಲ್ಡರ್ ಜವಾಬ್ದಾರಿ ವಹಿಸಿಕೊಂಡ ವಿನೀತ್ ರೈ

By Isl Media
At 21, Vinit mature enough to shoulder midfield burden for Odisha FC

ಭುವನೇಶ್ವರ, ಅಕ್ಟೋಬರ್ 21: ಭಾರತದ ಹೊಸ ಪೀಳೆಗೆಯ ಪ್ರತಿಭಾವಂತ ಆಟಗಾರರಲ್ಲಿ ಮಿಡ್ ಫೀಲ್ಡರ್ ವಿನೀತ್ ರೈ ಈಗಾಗಾಲೇ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಒಡಿಶಾ ಎಫ್‌ಸಿ ತಂಡದ ಪರ ಆಡಲು ಸಜ್ಜಾಗಿರುವ ವಿನೀತ್, ಹೀರೊ ಇಂಡಿಯನ್ ಸೂಪರ್ ಲೀಗ್ ನಲ್ಲಿ ಡೆಲ್ಲಿ ಡೈನಮೋಸ್ ಪರ ಆಡಿದ್ದರು.

21 ವರ್ಷದ ವಿನೀತ್ ಈಗಾಗಲೇ ಹಿರಿಯ ಆಟಗಾರರ ರೀತಿಯಲ್ಲಿ ಭಾರತದ ಫುಟ್ಬಾಲ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಾನು ಮುಂದೇನು ಮಾಡಬೇಕೆಂಬುದರ ಬಗ್ಗೆ ಅಪಾರ ಕಾಲಜಿ ಇಟ್ಟಿರುವ ಆಟಗಾರ. ಕೇವಲ 15 ನೇ ವಯಸ್ಸಿನಲ್ಲೇ ಉನ್ನತ ಹಂತದ ಫುಟ್ಬಾಲ್ ಆಡಲು ಆರಂಭಿಸದಾಗ ಇದು ಸಾಧ್ಯವಾಗುತ್ತದೆ.

''ಆರಂಭದಲ್ಲಿ ನಾನಿರುವ ಕ್ಲಬ್ ನಲ್ಲಿ ಆಡುವ ಅವಕಾಶ ಸಿಗಲಿಲ್ಲ, ಆದರೆ ಒಡಿಶಾ ಕ್ಲಬ್ ಗೆ ನಾನು ಚಿರಋಣಿ ಆಡಿದ್ದೇನೆ. ಇಲ್ಲಿ ನಾನು ಒಬ್ಬ ಆಟಗಾರನಾಗಿ ಬೆಳೆದಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಇಲ್ಲಿಯ ತರಬೇತುದಾರರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ. ಭವಿಷ್ಯದಲ್ಲಿ ನಾನು ಇನ್ನು ಹೆಚ್ಚಿನ ರೀತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸ ಹೊಂದಿದ್ದೇನೆ,'' ಎಂದು ವಿನೀತ್ ಹೇಳಿದರು.
2014-15 ರ ಐ ಲೀಗ್ ನಲ್ಲಿ ಡೆಂಪೋ ಪರ ವಿನೀತ್ ಉತ್ತಮ ಪ್ರದರ್ಶನ ತೋರಿದ್ದು, ಎಲ್ಲದಕ್ಕೂ ನಾಂದಿ ಹಾಡಿತು. 2016 ರಲ್ಲಿ ಕೇರಳ ಬ್ಲಾಸ್ಟರ್ಸ್ ಪರ ಐಎಸ್ ಎಲ್ ಆರಂಭಿಸಿದ ವಿನೀತ್ ನಂತರ ಮಿನರ್ವಾ ಪಂಜಾಬ್ ಪರ ಆಡಿದರು, ನಂತರ ಡೆಲ್ಲಿ ಡೈನಮೋಸ್ ತಂಡವನ್ನು ಸೇರಿಕೊಂಡರು.

ಡೆಲ್ಲಿ ತಂಡವನ್ನು ಸೇರಿಕೊಂಡಾಗಿನಿಂದ ಮೊದಲ ತಂಡದಲ್ಲೇ ಕಾಣಿಸಿಕೊಳ್ಳುತ್ತಿದ್ದು, ಮಿಡ್ ಫೀಲ್ಡ್ ನಲ್ಲಿ ಮಿಂಚುತ್ತಿದ್ದರು. ಅದು ಅವರ ಫೇವರಿಟ್ ವಿಭಾಗವಾಗಿತ್ತು. ಲೀಗ್ ನಲ್ಲಿ ಅವರು ಉತ್ತಮ ಪಾಸ್ ನೀಡುವವರಲ್ಲಿ ಒಬ್ಬರಾಗಿದ್ದರು. ಪ್ರತಿಯೊಂದು ಪಂದ್ಯದದಲ್ಲೂ 40 ಸರಾಸರಿ ಪಾಸ್ ನೀಡುತ್ತಿದ್ದು, ಎಲ್ಲ ಪಂದ್ಯಗಳಲ್ಲೂ ಅವಕಾಶ ಸಿಗದಿದ್ದರೂ, ಅವರ ನಿಖರತೆ ಮಾತ್ರ 82.45 ಪ್ರತಿಶತ ಇರುತ್ತಿತ್ತು. ಇದುವರೆಗೂ ಲೀಗ್ ನಲ್ಲಿ 2000 ನಿಮಿಷಗಳನ್ನು ಅಂಗಣದಲ್ಲಿ ಕಳೆದಿರುವ ವಿನೀತ್, ಒಡಿಶಾ ತಂಡದ ಪರ ಉತ್ತಮ ಪ್ರದರ್ಶನ ತೋರುವ ಆಶಯ ವ್ಯಕ್ತಪಡಿಸಿದ್ದಾರೆ.

''ಮಿಡ್ ಫೀಲ್ಡರ್ ಗಳು ವೇಗದಲ್ಲಿ ಪರಿವರ್ತನೆ ಹೊಂದುತ್ತಾರೆ, ಇತ್ತೀಚಿನ ದಿನಗಳಲ್ಲಿ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸುತ್ತಿದ್ದೇವೆ, ಇದಕ್ಕೆ ಐಎಸ್ ಎಲ್ ಕಾರಣ, ಉತ್ತಮ ತರಬೇತುದಾರರನ್ನು ನೀಡಿದ್ದೇ ಏಏಏ ರೀತಿಯ ಉತ್ತಮ ಸುಧಾರಣೆಗೆ ಕಾರಣ,'' ಎಂದರು.

At 21, Vinit mature enough to shoulder midfield burden for Odisha FC

''ಅಂಥ ಉನ್ನತ ದರ್ಜೆಯ ತರಬೇತುದಾರರಿಂದ ನಮಗೆ ತರಬೇತಿ ಪಡೆಯಲು ಅವಕಾಶ ಹಾಗೂ ಶ್ರೇಷ್ಠ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿರುವುದೇ ಅದೃಷ್ಟ. ಇದು ನಮಗೆ ಹೊಸತನ್ನು ತಿಳಿದುಕೊಂಡು, ನಮ್ಮ ಆಟದಲ್ಲಿ ಅದನ್ನು ಅಳವಡಿಸಿಕೊಳ್ಳಬಹುದು. ಪ್ರತಿಯೊಂದು ಸಂದರ್ಭದಲ್ಲೂ ಚೆಂಡನ್ನು ನಿಯಂತ್ರಿಸಬೇಕೆಂಬ ಹಂಬಲ, ಇದರಿಂದ ಹೆಚ್ಚಾಗಿ ಆಟದಲ್ಲಿ ತೊಡಗಿಸಿಕೊಳ್ಳಬಹುದು,'' ಎಂದು ವಿನೀತ್ ಹೇಳಿದರು.
ಭಾರತ ತಂಡದ ಪ್ರಧಾನ ಕೋಚ್ ಐಗೊರ್ ಸ್ಟಿಮಾಕ್ ಮಿಡ್ ಫೀಲ್ಡ್ ನಲ್ಲಿ ಉತ್ತಮವಾಗಿ ಆಡುವವರನ್ನೇ ಹೆಚ್ಚು ಬಯಸುತ್ತಾರೆ. ವಿನೀತ್ ಅಂತವರಲ್ಲಿ ಒಬ್ಬರು, ಕ್ರೋಯೇಷಿಯಾದ ಕೋಚ್ ಅವರ ಮೆಚ್ಚುಗೆಗೆ ಪಾತ್ರವಾಗುವ ಸಾಮರ್ಥ್ಯ ವಿನೀತ್ ಅವರಲ್ಲಿದೆ. ಭಾರತ ತಂಡವನ್ನು ಸೇರಿದ ನಂತರ ಸ್ಟಿಮಾಕ್ ಅವರ ಮೋದಲ ಆಯ್ಕೆ ವಿನೀತ್ ಆಗಿತ್ತು.

''ಆ ದ್ರಶ್ಯವನ್ನು ನೋಡಿದಾಗ ಸ್ವಲ್ಪ ಮಟ್ಟಿಗೆ ಅಚ್ಚರಿಯಾಗಿತ್ತು, ಅವರು ಬಂದಾಗಿನಿಂದ ನನಗೆ ಅವಕಾಶ ನೀಡುತ್ತಿದ್ದಾರೆ, ಇದಕ್ಕೆ ನಾನು ಅವರಿಗೆ ಚಿರಋಣಿ ಆಗಿದ್ದೇನೆ. ಅವರ ಸಮ್ಮುಖದಲ್ಲಿ ನಾನು ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿರುವೆ, ಕಠಿಣ ಪ್ರರಿಶ್ರಮದಿಂದ ನನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವೆ,'' ಎಂದು ಟಾಟಾ ಅಕಾಡೆಮಿಯಲ್ಲಿ ಪಳಗಿರುವ ವಿನೀತ್ ಹೇಳಿದರು.

Story first published: Monday, October 21, 2019, 19:28 [IST]
Other articles published on Oct 21, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+