For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮತ್ತೆ ಸೋತ ಚೆನ್ನೈಯಿನ್, ಎಟಿಕೆಗೆ ಜಯ ತಂದ ವಿಲಿಯಮ್ಸ್

By Isl Media
ATK edge past Chennaiyin FC in hard-fought battle

ಚೆನ್ನೈ, ಅಕ್ಟೋಬರ್ 30: ಡೇವಿಡ್ ವಿಲಿಯಮ್ಸ್ 48ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಮಾಜಿ ಚಾಂಪಿಯನ್ ಎಟಿಕೆ ತಂಡ ಇನ್ನೊಂದು ಮಾಜಿ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ತನ್ನ ಜಯದ ಓಟವನ್ನು ಮುಂದುವರಿಸಿದೆ.

ವಿಲಿಯಮ್ಸ್ ಗಳಿಸಿದ ಗೋಲು ಇಂಡಿಯನ್ ಸೂಪರ್ ಲೀಗ್ ನಲ್ಲಿ 1,000ನೇ ಗೋಲಾಗಿತ್ತು. ಮೊದಲ ಪಂದ್ಯದಲ್ಲಿ ಸೋತ ನಂತರ ಎಟಿಕೆ ತಂಡಕ್ಕೆ ಇದು ಸತತ ಎರಡನೇ ಜಯವಾಗಿದೆ. ಚೆನ್ನೈ ಸತತ ಮೂರನೇ ಪಂದ್ಯದಲ್ಲೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಚೆನ್ನೈಯಿನ್ ತಂಡ ಈ ಬಾರಿಯ ಐಎಸ್ ಎಲ್ ನಲ್ಲಿ ಚೇತರಿಸಿಕೊಳ್ಳಬಲ್ಲದು ಎಂದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ, ಮೇಲಕ್ಕೇರುವ ಬದಲು ತಂಡ ಕೆಳಮುಖದ ಪ್ರಯಾಣ ಆರಂಭಿಸಿರುವುದು ಚೆನ್ನೈ ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿರುವುದು ಸಹಜ. ಆದರೆ ಚೆನ್ನೈಯಿನ್ ಪುಟಿದೇಳುವ ಸಾಮರ್ಥ್ಯ ಹೊಂದಿದೆ. ಚೆನ್ನೈಯಿನ್ ಆಟಗಾರರು ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿರುವುದು ಸೋಲಿಗೆ ಪ್ರಮುಖ ಕಾರಣ. ಇದುವರೆಗೂ ಮನೆಯಂಗಣದಲ್ಲಿ ಹೆಚ್ಚಿನ ತಂಡಗಳು ಯಶಸ್ಸು ಕಂಡಿವೆ. ಹಾಗೆ ನೋಡಿದರೆ, ಚೆನ್ನೈಯಿನ್ ಇನ್ನೂ ಕಳೆದ ಬಾರಿಯ ಆಘಾತದಿಂದ ಚೇತರಿಸಿಕೊಳ್ಳಬೇಕಿದೆ.

ಸಮಬಲದ ಪ್ರಥಮಾರ್ಧ
ಎಟಿಕೆ ತಂಡ ಚೆನ್ನೈಯಿನ್ ವಿರುದ್ಧ ಪ್ರಥಮಾರ್ಧದಲ್ಲಿ ಪ್ರಭುತ್ವ ಸಾಧಿಸಿತ್ತು, ಆದರೆ ಗೋಲು ಗಳಿಸುವಲ್ಲಿ ವಿಫಲವಾಯಿತು. ಪಂದ್ಯ ಆರಂಭಗೊಂಡ ಮೂರನೇ ನಿಮಿಷದಲ್ಲಿ ಚೆನ್ನೈ ತಂಡಕ್ಕೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು.ನೆರಿಜುಸ್ ವಾಲ್ಸ್ಕಿಸ್ ಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು, ಆದರೆ ಗುರಿ ತಪ್ಪಿತ್ತು. ಡ್ರಾಗೊಸ್ ಫಿರ್ರ್ಚುಲೆಸ್ಕ್ಯೂ ಬಲ ಭಾಗದಲ್ಲಿ ಬಂದ ಚೆಂಡನ್ನು ಉತ್ತಮ ರೀತಿಯಲ್ಲಿ ಪಾಸ್ ಮಾಡಿದರು. ಎಡ್ವಿನ್ ವನ್ಸ್ಪುಲ್ ಇನ್ನೂ ಉತ್ತಮ ರೀತಿಯಲ್ಲಿ ನಿರ್ಜುಸ್ ಗೆ ನೀಡಿದರು. ಮೇಲಿನಿಂದ ಸಾಗಿ ಬಂದ ಚೆಂಡನ್ನು ಹೆಡರ್ ಮೂಲಕ ಗೋಲು ಗಳಿಸಲೆತ್ನಿಸಿದರು, ಅದು ಉತ್ತಮ ಅವಕಾಶವೂ ಆಗಿತ್ತು. ಆದ್ರೆ ನಿರ್ಜುಸ್ ಅವರ ತಲೆಗೆ ತಗುಲಿದ ಚೆಂಡು ಗೋಲ್ ಬಾಕ್ಸ್ ನ ಅಂಚಿಂದ ಮೇಲೆ ಸಾಗಿ ಹೋಯಿತು.

ATK edge past Chennaiyin FC in hard-fought battle

ಮಾಜಿ ಚಾಂಪಿಯನ್ನರ ಹೋರಾಟ
ಚೆನ್ನೈಯಿನ್ ಎಫ್ ಸಿ ತಂಡ ಎಟಿಕೆ ವಿರುದ್ಧ ಆಡುವ ಮೂಲಕ ಇಂಡಿಯನ್ ಸೂಪರ್ ಲೀಗ್ ನ ಮಾಜಿ ಚಾಂಪಿಯನ್ನರು ಹೋರಾಟಕ್ಕೆ ಸಜ್ಜಾದರು. ಬೆಂಗಳೂರು ಎಫ್ ಸಿ ಚಾಂಪಿಯನ್ ಪಟ್ಟ ಗೆಲ್ಲೋದಕ್ಕೆ ಮೊದಲು ಈ ಎರಡು ತಂಡಗಳ ನಡುವೆ ಐಎಸ್ ಎಲ್ ಟ್ರೋಫಿ ಹಂಚಿಕೆಯಾಗಿತ್ತು. ಚೆನ್ನೈಯಿನ್ ಎಫ್ ಸಿ ಗೋಲಿಲ್ಲದೆ ಈ ಬಾರಿಯ ಆರಂಭ ಕಂಡಿದೆ, ಗೋವಾ ವಿರುದ್ಧ ಮೂರು ಗೋಲು ನೀಡಿದರೂ ಒಂದೂ ಗೋಲನ್ನು ಗಳಿಸಿರಲಿಲ್ಲ. ಮುಂಬೈ ಸಿಟಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಗೋಲಿಲ್ಲದೆ ಡ್ರಾ ಕಂಡಿತು. ಈಗ ಮನೆಯಂಗಣದಲ್ಲಿ ಮೊದಲ ಗೋಲು ಹಾಗೂ ಮೊದಲ ಜಯದ ನಿರೀಕ್ಷೆಯೊಂದಿಗೆ ಅಂಗಣಕ್ಕೆ ಇಳಿಯಿತು. ಎಟಿಕೆ ತಂಡದ ಪ್ರದರ್ಶನವನ್ನು ಗಮನಿಸಿರುವ ಚೆನ್ನೈಯಿನ್ ಕೋಚ್ ತಮ್ಮ ಆಟಗಾರರಲ್ಲಿ ಸುಧಾರಣೆ ಕಾಣುವಂತೆ ಎಚ್ಚರಿಸಿದ್ದಾರೆ.

ಎಟಿಕೆ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಆರು ಗೋಲು ಗಳಿಸಿ ಪ್ರಭುತ್ವ ಸಾಧಿಸಿದೆ. ಹೈದರಾಬಾದ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಆ ಪಂದ್ಯದಲ್ಲಿ ಡೇವಿಡ್ ವಿಲಿಯಮ್ಸ್ ಹಾಗೂ ಎಡು ಗಾರ್ಸಿಯಾ ತಲಾ ಎರಡು ಗೋಲು ಗಳಿಸಿ ಜಯದ ರೂವಾರಿ ಎನಿಸಿದ್ದರು.

Story first published: Wednesday, October 30, 2019, 22:06 [IST]
Other articles published on Oct 30, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+