Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೂಪರ್ ಲೀಗ್: ದಕ್ಷಿಣದ ಡರ್ಬಿಯಲ್ಲಿ ಚೆನ್ನೈಯಿನ್, ಕೇರಳ ಫೈಟ್

Battle for hope as Kerala hosts Chennaiyin

ಕೊಚ್ಚಿ, 31, ಜನವರಿ: ದಕ್ಷಿಣ ಭಾರತದ ಬದ್ಧ ಎದುರಾಳಿಗಳಾದ ಚೆನ್ನೈಯಿನ್ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಶನಿವಾರ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಖಾಮುಖಿಯಾಗಲಿದ್ದು, ಇಲ್ಲಿ ಗೆಲ್ಲುವ ತಂಡ ಮಾತ್ರ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ.

14 ಅಂಕಗಳನ್ನು ಗಳಿಸಿರುವ ಕೇರಳ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಎಲ್ಕೋ ಷೆಟ್ಟೋರಿ ಪಡೆಗೆ ಸದ್ಯದ ಪರಿಸ್ಥಿತಿಯಲ್ಲಿ ಮೂರು ಅಂಕಗಳಲ್ಲದೆ ಬೇರೇನೂ ಅಗತ್ಯ ಇರುವುದಿಲ್ಲ.ಇಲ್ಲಿ ಜಯ ಗಳಿಸಿದರೆ ಮಾತ್ರ ಮುನ್ನಡೆವ ಅಸೆ ಜೀವಂತವಾಗಿರಲಿದೆ. 18 ಅಂಕಗಳನ್ನು ಗಳಿಸಿರುವ ಚೆನ್ನೈಯಿನ್ ತಂಡ ಜಯ ಗಳಿಸಿದರೆ ನಾಲ್ಕನೇ ಸ್ಥಾನದಲ್ಲಿರುವ ಒಡಿಶಾ ತಂಡದೊಂದಿಗೆ ಅಂಕ ಹಂಚಿಕೊಳ್ಳಲಿದೆ.

ಲೆಕ್ಕಾಚಾರದ ಪ್ರಕಾರ ಯಾರೊಬ್ಬರೂ ನಾಲ್ಕನೇ ಸ್ಥಾನವನ್ನು ತಲುಪಬಹುದು. ಒಡಿಶಾ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ನಾವೂ ಕೂಡ ಸತತ ಎರಡು ಪಂದ್ಯಗಳನ್ನು ಗೆದ್ದು ಅವರ ಹಿಂದೆ ಇದ್ದೆವು. ಸದ್ಯ ಯಾವುದೇ ತಂಡವು ಅರ್ಹತೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ,'' ಎಂದು ಅಮಾನತುಗೊಂಡಿರುವ ಷೆಟ್ಟೋರಿ ಸ್ಥಾನದಲ್ಲಿದ್ದ ಇಷ್ಫಕ್ ಅಹಮ್ಮದ್ ಹೇಳಿದರು.
ಕೇರಳ ಬ್ಲಾಸ್ಟರ್ಸ್ 2020ನೇ ಸಾಲಿನ ಋತುವನ್ನು ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಉತ್ತಮವಾಗಿಯೇ ಆರಂಭಿಸಿತ್ತು. ಆದರೆ ಗೋವಾ ಮತ್ತು ಜೆಮ್ಷೆಡ್ಪುರ ತಂಡಗಳ ವಿರುದ್ಧ ಸೋಲು ಆನುಭವಿಸುವ ಮೂಲಕ ಹಿನ್ನಡೆ ಆರಂಭಿಸಿತು. ಇಲ್ಲಿ ಮೂರು ಅಂಕ ಗಳಿಸಲಾಗದಿದ್ದರೂ ಒಂದು ಅಂಕವನ್ನವಾದರೂ ಗಳಿಸಿ ಸಮಾಧಾನ ಪಡುವ ಹಂಬಲ ಕೇರಳ ಬ್ಲಾಸ್ಟರ್ಸ್ ತಂಡದ್ದಾಗಿದೆ. ತಂಡದ ಡಿಫೆನ್ಸ್ ವಿಭಾಗ ವೈಫಲ್ಯಗೊಂಡಿರುವುದು ಈ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.

ಸಾಮಾನ್ಯವಾಗಿ ನಾವು ಫಲಿತಾಂಶದ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇವೆ. ನಮ್ಮ ತಂಡ ಉತ್ತಮ ರೀತಿಯಲ್ಲಿ ಫುಟ್ಬಾಲ್ ಆಡುತ್ತಿದೆ. ಬಲಿಷ್ಠ ಗೋವಾ ವಿರುದ್ಧ ಆಡುವುದು ಅಷ್ಟು ಸುಲಭವಲ್ಲ. ಆ ತಂಡ ಶೇ, ಅರವತ್ತರಷ್ಟು ಚೆಂಡನ್ನು ನಿಯಂತ್ರಿಸುತ್ತದೆ. ನಾವು ಪ್ರಮಾದ ಎಸಗಿ ಗೆಲ್ಲಬೇಕಾದ ಪಂದ್ಯಗಳನ್ನು ಕೈ ಚೆಲ್ಲಿರುವೆವು. ಡಿಫೆನ್ಸ್ ವಿಭಾಗ ಹೆಚ್ಚಿನ ಗೋಲು ನೀಡಿತು. ಈಗ ನಾವು ನೈಜ ಆಟವಾಡಿ ಜಯ ಗಳಿಸಬೇಕಾಗಿದೆ,'' ಎಂದು ಇಷ್ಫಕ್ ಹೇಳಿದರು.

ಜೆಮ್ಷೆಡ್ಪುರ ಹಾಗೂ ಹಾಗೂ ಗೋವಾ ತಂಡಗಳು ಪಂದ್ಯ ಮುಗಿಯಲು 10 ನಿಮಿಷಗಳು ಬಾಕಿ ಇರುವಾಗ ಕೇರಳ ವಿರುದ್ಧ ಗೋಲು ಗಳಿಸಿ ಜಯ ಸಾಧಿಸಿದ್ದವು. ವಿಕ್ಟರ್ ಡ್ರೊಬಾರೊವ್ ಅವರ ಅನುಪಸ್ಥಿತಿ ತಂಡವನ್ನು ಕಾಡುವುದು ಸಹಜ.

ಚೆನ್ನೈಯಿನ್ ತಂಡ ನಡೆದು ಬಂದ ಹಾದಿ ಉತ್ತಮವಾಗಿಲ್ಲ. ಇತ್ತೀಚಿನ ಪಂದ್ಯಗಳ ಯಶಸ್ಸು ತಂಡವನ್ನು ಕನಿಷ್ಠ ಈ ಸ್ಥಿತಿಗಾದರೂ ತಂದು ನಿಲ್ಲಿಸಿದೆ. ತನ್ನ ಹಿಂದಿನ ಮೂರು ಪಂದ್ಯಗಳನ್ನು ಗೆದ್ದಿರುವ ಚೆನ್ನೈಯಿನ್, ನಾಲ್ಕು ಗೋಲು ಗಳಿಸಿ ಜೆಮ್ಷೆಡ್ಪುರ ತಂಡವನ್ನು ಹಿಂದಿಕ್ಕಿತು. ನಿರಿಜುಸ್ ವಾಸ್ಕೀಸ್ (10) ಈ ಬಾರಿ ಅತಿ ಹೆಚ್ಚು ಗೋಲು ಗಳಿಸಿರುವ ಆಟಗಾರರೆನಿಸಿದ್ದು ಚೆನ್ನ್ನೈಯಿನ್ ತಂಡದ ಹೆಮ್ಮೆ. ಆಂಡ್ರೆ ಷಿಮುರಿ ಹಾಗೂ ಕ್ರಿವೆಲ್ಲಾರೋ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
''ನಾವು ಉತ್ತಮ ರೀತಿಯಲ್ಲಿ ಎದುರಾಳಿಗಳನ್ನು ನಿಯಂತ್ರಿಸಬಲ್ಲೆವು ಎಂಬುದನ್ನು ತೋರಿಸಿದ್ದೇವೆ. ನಮ್ಮ ತಂಡ ಉತ್ತಮಗೊಳ್ಳುತ್ತಿದೆ.ಇದೇ ರೀತಿಯಲ್ಲಿ ಮುಂದುವರಿದರೆ ನಾವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ.ಇತ್ತಂಡಗಳಲ್ಲಿ ಉತ್ತಮ ರೀತಿಯ ಅಟ್ಯಾಕರ್ಸ್ ಇದ್ದಾರೆ. ಅವರ ಆಕ್ರಮಣವನ್ನು ನಾವು ಚೆನ್ನಾಗಿ ಬಲ್ಲೆವು. ಅದಕ್ಕೆ ಗೌರವವನ್ನೂ ಸಲ್ಲಿಸುವೆವು, ಆದರೆ ನಾವು ಉತ್ತಮವಾಗಿ ಆಡಿದರೆ ಅವರ ವಿರುದ್ಧ ಗೆಲ್ಲುವುದು ನಿಜ,'' ಎಂದು ಚೆನ್ನೈಯಿನ್ ತಂಡದ ಕೋಚ್ ಓವೆನ್ ಕೊಯ್ಲ್ ಹೇಳಿದರು.

Story first published: Friday, January 31, 2020, 20:45 [IST]
Other articles published on Jan 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+