Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್‌ ಚಾಂಪಿಯನ್‌ಷಿಪ್‌: ಡೆಕ್ಕನ್‌ ವಿರುದ್ಧ ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ ಗೆಲುವು

Bengaluru FC United

ಪ್ರಸಕ್ತ ನಡೆಯುತ್ತಿರುವ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಹಾಲಿ ಚಾಂಪಿಯನ್‌ ಎಫ್‌ಸಿ ಬೆಂಗಳೂರು ಯುನೈಟೆಡ್‌ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ್ದು, ಎಫ್‌ಸಿ ಡೆಕ್ಕನ್‌ ವಿರುದ್ಧದ ಪಂದ್ಯದಲ್ಲಿ 3-0 ಗೋಲಿನಿಂದ ಜಯ ಗಳಿಸಿದೆ.

ಎರಡು ಬಾರಿ ಚಾಂಪಿಯನ್‌ ಎಫ್‌ಸಿ ಬೆಂಗಳೂರು ಯುನೈಟೆಡ್‌ ಆರಂಭದಲ್ಲಿ ನಿದಾನಗತಿಯ ಆಟ ಆರಂಭಿಸಿದರೂ ಗೋಲು ಗಳಿಸುವ ಅವಕಾಶಗಳನ್ನು ನಿರ್ಮಿಸತೊಡಗಿತು. ಮನ್ವೀರ್‌ ಸಿಂಗ್‌ (25ನೇ ನಿಮಿಷ), ಮೊಹಮ್ಮದ್‌ ಖೌ (27ನೇ ನಿಮಿಷ) ಮತ್ತು ಇರ್ಪಾನ್‌ ಯೆರ್ವಾಡ್‌ (72ನೇ ನಿಮಿಷ) ಎಫ್‌ಸಿಬಿಯು ಪರ ಗೋಲು ಗಳಿಸಿದರು.

ಇದುವರೆಗೂ ಉತ್ತಮ ಪ್ರದರ್ಶನ ತೋರುತ್ತಿರುವ ಎಫ್‌ಸಿ ಬೆಂಗಳೂರು ಯುನೈಟೆಡ್‌ ಆರಂಭದಿಂದಲೂ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿತ್ತು. ಆರಂಭದ ಕೆಲವು ತಪ್ಪುಗಳ ನಂತರ ಎಫ್‌ಸಿ ಬೆಂಗಳೂರು ಯುನೈಟೆಡ್‌ ಹಲವು ಅವಕಾಶಗಳನ್ನು ನಿರ್ಮಿಸಿದರೂ ಅದಕ್ಕೆ ಅಂತಿಮ ರೂಪ ನೀಡುವಲ್ಲಿ ವಿಫಲವಾಗಿತ್ತು. ಮೊಹಮ್ಮದ್‌ ಧೌ ಅವರಿಗೆ ಆರಂಭದಲ್ಲೇ ಗೋಲು ಗಳಿಸಲು ಎರಡು ಬಾರಿ ಅವಕಾಶ ಸಿಕ್ಕಿತ್ತು. ಆದರೆ ಅವರು ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲರಾದರು.

25ನೇ ನಿಮಿಷದಲ್ಲಿ ಎಫ್‌ಸಿಬಿಯು ಅಂತಿಮವಾಗಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ಯಶಸ್ವಿಯಾಯಿತು. ಎಫ್‌ಸಿ ಡೆಕ್ಕನ್‌ ಮಿಡ್‌ಫೀಲ್ಡ್‌ ವಿಭಾಗದಿಂದ ಶಾಜನ್‌ ಫ್ರಾಂಕ್ಲಿನ್‌ ಉತ್ತಮ ರೀತಿಯಲ್ಲಿ ಪಾಸ್‌ ನೀಡಿದರು. ಮನ್ವೀರ್‌ ಸಿಂಗ್‌ ಯಾವುದೇ ಪ್ರಮಾದ ಎಸಗದೆ ಚೆಂಡನ್ನು ನೆಟ್‌ಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಎರಡು ನಿಮಿಷ ಕಳೆಯುತ್ತಿದ್ದಂತೆ ಮೊಹಮ್ಮದ್‌ ಧೌ, ಹಿಂದೆ ತಪ್ಪಿದ ಅವಕಾಶಗಳಿಂದ ಪಾಠ ಕಲಿತು ಈ ಬಾರಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಅಶೋಕ್‌ ಸಿಂಗ್‌ ಮೂಲಕ ಮಿಡ್‌ಫೀಲ್ಡ್‌ ವಿಭಾಗದಲ್ಲಿ ದೊರೆತ ಪಾಸ್‌ ಮೊಹಮ್ಮದ್‌ ಧೌ ಅವರ ನಿಯಂತ್ರಣಕ್ಕೆ ಸಿಕ್ಕಿತು. ಸುಲಭವಾಗಿ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ನೀಡಿದರು.

ದ್ವಿತಿಯಾರ್ಧಲ್ಲಿ ಎಫ್‌ಸಿ ಬೆಂಗಳೂರು ತಾಳ್ಮೆಯ ಆಟವಾಡಿತು. ಆರಂಭದಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಲಿಲ್ಲ. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದರು ದ್ವಿತಿಯಾರ್ಧದ ಹೆಚ್ಚಿನ ಅವಧಿಯು ಗೋಲಿಲ್ಲದೆ ಸಾಗಿತು. ಆದರೆ ಈ ಋತುವಿನಲ್ಲಿ ಎಫ್‌ಸಿಬಿಯು ಪರ ಉತ್ತಮ ರೀತಿಯಲ್ಲಿ ತಂಡದ ಪರ ಗೋಲು ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದ ಇರ್ಫಾನ್‌ ರೆರ್ವಾಡ್‌ 72ನೇ ನಿಮಿಷದಲ್ಲಿ ಶಾಜನ್‌ ಫ್ರಾಂಕ್ಲಿನ್‌ ನೀಡಿದ ಪಾಸ್‌ ಮೂಲಕ ಅದ್ಭುತ ಗೋಲು ಗಳಿಸಿ ತಂಡಕ್ಕೆ 3-0 ಮುನ್ನಡೆ ನೀಡಿದರು.

ಆ ನಂತರ ಕೆಲವು ಅವಕಾಶಗಳು ಸಿಕ್ಕರೂ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಎಫ್‌ಸಿ ಬೆಂಗಳೂರು ಯುನೈಟೆಡ್‌ 3-0 ಗೋಲುಗಳ ಅಂತರದಲ್ಲಿ ಗೆದ್ದು ಅಜೇಯವಾಗಿ ಮುಂದೆ ಸಾಗಿತು.

Story first published: Wednesday, November 2, 2022, 12:28 [IST]
Other articles published on Nov 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+