Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್‌ ಚಾಂಪಿಯನ್‌ಷಿಪ್‌: ಡ್ರೀಮ್ ಯುನೈಟೆಡ್‌ ವಿರುದ್ಧ ಎಫ್‌ಸಿ ಬೆಂಗಳೂರು 3-1 ಅಂತರದ ಜಯ

FC Bengaluru United

ಎಫ್.ಸಿ ಬೆಂಗಳೂರು ಯುನೈಟೆಡ್ ತಂಡ ಬಿಡಿಎಫ್ಎ ಸೂಪರ್ ಡಿವಿಜನ್ ಚಾಂಪಿಯನ್‌ಶಿಪ್‌ನಲ್ಲಿ ಡ್ರೀಮ್ ಯುನೈಟೆಡ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.

ಲಾಲ್ರ್ಂಮ್ಜುವಾ ಖಿಯಾಂಗ್ಟೆ (25ನೇ ನಿಮಿಷ), ಶಾಜನ್ ಫ್ರಾಂಕ್ಲಿನ್ (57ನೇ ನಿಮಿಷ), ಹಾಗೂ ಮೊಹಮ್ಮದ್ ಧೌ (88ನೇ ನಿಮಿಷ) ಎಫ್.ಸಿ ಬೆಂಗಳೂರು ಯುನೈಟೆಡ್ ಪರ ಗೋಲು ಗಳಿಸಿದರು.

ಆರಂಭದಲ್ಲಿ ಎರಡೂ ತಂಡಗಳು ಗೋಲು ಗಳಿಸುವ ಅವಕಾಶವನ್ನು ನಿರ್ಮಿಸುವಲ್ಲಿ ವಿಫಲವಾದವು. 15 ನೇ ನಿಮಿಷದಿಂದ ಎಫ್.ಸಿ ಬೆಂಗಳೂರು ಯುನೈಟೆಡ್ ಪಂದ್ಯದ ಮೇಲೆ ಹಿಡಿತ ಸಾಧಿಸಲಾರಂಭಿಸಿ ಉತ್ತಮ ಅವಕಾಶಗಳನ್ನು ನಿರ್ಮಿಸಿಕೊಂಡಿತು. ಆಕ್ರಮಣಕಾರಿ ಆಟವಾಡಿದ ಇರ್ಫಾನ್ ಯೆರ್ವಾಡ್, ಶಾಜಾನ್ ಫ್ರಾಂಕ್ಲಿನ್, ಎನಾಮ್ ಕೆ ಜೈರ್ವಾ ಅವರಿಗೆ ಗೋಲು ಗಳಿಸಲಾಗಲಿಲ್ಲ. ಅಂತಿಮವಾಗಿ 25 ನೇ ನಿಮಿಷದಲ್ಲಿ ಎಫ್‌ಸಿ ಬೆಂಗಳುರು ಗೋಲಿನ ಖಾತೆ ತೆರೆಯಿತು. ಲಾಲ್ರಾಂಮ್ಜುವಾ ಕಿಯಾಂಗ್ಟೆ ಫ್ರೀ ಕಿಕ್ ಮೂಲಕ ತಂಡದ ಪರ ಮೊದಲ ಗೋಲು ಗಳಿಸಿ ಮುನ್ನಡೆ ನೀಡಿದರು.

ಎಫ್.ಸಿ ಬೆಂಗಳೂರು ಯುನೈಟೆಡ್‌ ತಂಡದ ಡಿಫೆನ್ಸ್ ವಿಭಾಗದಲ್ಲಿ ಕಂಡು ಬಂದ ಪ್ರಮಾದಗಳಿಂದಾಗಿ ಕೆಲ ಹೊತ್ತಿನಲ್ಲೇ ಡ್ರೀಮ್ ಯುನೈಟೆಡ್ ಗೋಲು ಗಳಿಸಿ ಸಮಬಲ ಸಾಧಿಸಿತು.

ಪ್ರಥಮಾರ್ಧದಲ್ಲಿ ಕೊಂಚ ಎಡವಿದ ಎಫ್ ಸಿ ಬೆಂಗಳೂರು ಯುನೈಟೆಡ್ ದ್ವಿತೀಯಾರ್ಧದಲ್ಲಿ ತನ್ನ ನೈಜ ಆಟ ಪ್ರದರ್ಶಿಸಿತು. 57ನೇ ನಿಮಿಷದಲ್ಲಿ ರಾಕೇಶ್ ಪ್ರಧಾನ್ ನೀಡಿದ ನೇರ ಪಾಸನ್ನು ನಿಯಂತ್ರಿಸುವಲ್ಲಿ ಗೋಲ್ ಕೀಪರ್ ವಿಫಲರಾದರು, ಆಗ ಫ್ರಾಂಕ್ಲಿನ್ ಸುಲಭವಾಗಿ ಗೋಲು ಗಳಿಸಿ ತಂಡಕ್ಕೆ 2-1 ರ ಮುನ್ನಡೆ ನೀಡಿದರು.

ಸ್ವಲ್ಪ ಹೊತ್ತು ಆಕ್ರಮಣಕಾರಿ ಆಟ ನಿಂತು, ತಾಳ್ಮೆಯ ಆಟಕ್ಕೆ ಇತ್ತಂಡಗಳು ಮನಮಾಡಿದವು. ಈ ನಡುವೆ ಬೆಂಗಳೂರು ತಂಡ ಕೆಲವು ಸುಲಭ ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಯಿತು, ಆದರೆ 88 ನೇ ನಿಮಿಷದಲ್ಲಿ ಮೊಹಮ್ಮದ್ ಧೌ ಎದುರಾಳಿಯ ಡಿಫೆನ್ಸ್ ವಿಭಾಗದ ವೈಫಲ್ಯವನ್ನು ಸದುಪಯೋಗಪಡಿಸಿಕೊಂಡು ತಂಡದ ಪರ ಮೂರನೇ ಗೋಲು ಗಳಿಸಿ 3-1 ಅಂತರದಲ್ಲಿ ಜಯ ತಂದಿತ್ತರು.

Story first published: Monday, November 7, 2022, 22:37 [IST]
Other articles published on Nov 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+