ಒಬಾಮಾಗೆ ಬೆಲ್ಜಿಯಂ ಪ್ರಧಾನಿ ಭರ್ಜರಿ ಆಫರ್
ಸಾಲ್ವಡಾರ್, ಜೂ.27: ಫೀಫಾ ವಿಶ್ವಕಪ್ ನಲ್ಲಿ ಯುಎಸ್ಎ ತಂಡದ ಯಶಸ್ಸು ಕಂಡು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸಕತ್ ಖುಷಿಯಲ್ಲಿದ್ದಾರಂತೆ. ಲೀಗ್ ಹಂತ ದಾಟಿರುವ ಯುಎಸ್ಎ ಈಗ ನಾಕೌಟ್ ಹಂತದಲ್ಲಿ ಸದ್ದು ಮಾಡುತ್ತಿದೆ. ಈ ನಡುವೆ ಯುಎಸ್ಎ ಎದುರಾಳಿ ತಂಡ ಬೆಲ್ಜಿಯಂನ ಪ್ರಧಾನಿ ಅವರಿಂದ ಒಬಾಮಾಗೆ ಅನಿರೀಕ್ಷಿತ ಚಾಲೆಂಜ್ ಕಮ್ ಆಫರ್ ಬಂದಿದೆ.
ಬೆಲ್ಜಿಯಂ ತಂಡ 16ರ ಹಂತದಲ್ಲಿ ಯುಎಸ್ಎ ತಂಡವನ್ನು ಸೋಲಿಸಲಿದೆ ಎಂಬ ಅತಿಯಾದ ಆತ್ಮವಿಶ್ವಾಸದೊಂದಿಗೆ ಬೆಲ್ಜಿಯಂ ಪ್ರಧಾನಿ ಎಲಿಯೊ ಡಿ ರುಪೊ ಅವರು ಬೆಲ್ಜಿಯಂನ ಶ್ರೇಷ್ಠ ಬೀರ್ ಗಳ ಮೇಲೆ ಬೆಟ್ಟಿಂಗ್ ಮಾಡುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾಗೆ ಓಪನ್ ಚಾಲೆಂಜ್ ಮಾಡಿದ್ದಾರೆ.
ಬೆಲ್ಜಿಯಂ ಪ್ರಧಾನಿ ಅವರು ತಮ್ಮ ಆಯ್ಕೆ ಬಗ್ಗೆ ಹೇಳಿಲ್ಲ. ಅವರಿಗೆ ಸಹಾಯವಾಗಲೆಂದು ಬುಷ್ ಬೀರ್ ಸೇರಿದಂತೆ ಟಾಪ್ 20 ಬೀರ್ ಗಳ ಮಾಹಿತಿಯುಳ್ಳ ಲಿಂಕ್ ಇಲ್ಲಿದೆ
ನಿನ್ನೆ(ಜೂ.26)ಯಿನ್ನೂ ಲೀಗ್ ಹಂತದ ಪಂದ್ಯವಾಳಿಗಳು ಮುಗಿದಿವೆ. ಬೆಲ್ಜಿಯಂ ತಂಡ ಎಚ್ ಗುಂಪಿನಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಗುಂಪಿನ ಅಗ್ರಸ್ಥಾನಿಯಾಗಿದೆ. ಜಿ ಗುಂಪಿನಲ್ಲಿ ಯುಎಸ್ಎ ಎರಡನೇ ಸ್ಥಾನ ಗಳಿಸಿದೆ, ಜರ್ಮನಿ ಗುಂಪಿನ ಅಗ್ರಪಟ್ಟ ಪಡೆದುಕೊಂಡಿದೆ.
ಬೆಲ್ಜಿಯಂ ತಂಡ ತನ್ನ ಕೊನೆ ಲೀಗ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದರೆ, ಯುಎಸ್ಎ ತಂಡ 0-1 ಅಂತರದಲ್ಲಿ ಜರ್ಮನಿಗೆ ಶರಣಾಗಿತ್ತು. ಜುಲೈ 1 ರಂದು ಯುಎಸ್ಎ ತಂಡ ತನ್ನ ನಾಕೌಟ್ ಸ್ಟೇಜ್ ನ ಮೊದಲ ಪಂದ್ಯವನ್ನು ಸಾಲ್ವಡಾರ್ ನಲ್ಲಿ ಬೆಲ್ಜಿಯಂ ವಿರುದ್ಧ ಆಡಲಿದೆ [ನಾಕೌಟ್ ಹಂತದ ವೇಳಾಪಟ್ಟಿ ನೋಡಿ]

ಅಧ್ಯಕ್ಷ ಬರಾಕ್ ಒಬಾಮಾ ಸಕತ್ ಖುಷಿ
ನಾಕೌಟ್ ಹಂತದ ಪಂದ್ಯಕ್ಕೂ ಮುನ್ನ ಒಬಾಮಾಗೆ ಟ್ವೀಟ್ ಮಾಡಿರುವ ಬೆಲ್ಜಿಯಂ ಪ್ರಧಾನಿ ಒಂದು ವೇಳೆ ಯುಎಸ್ಎ ಗೆದ್ದರೆ ಬೆಲ್ಜಿಯನ್ ಬೀರ್ ಆಫರ್ ಮಾಡುವೆ ಎಂದಿದ್ದಾರೆ. ಬೆಲ್ಜಿಯಂ ಕ್ವಾರ್ಟರ್ ಫೈನಲ್ ತಲುಪಲಿದೆ ಬೆಟ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಬೆಲ್ಜಿಯಂ ಪ್ರಧಾನಿ ಟ್ವೀಟ್ ಚಾಲೆಂಜ್
ಬೆಲ್ಜಿಯಂ ಪ್ರಧಾನಿ ಎಲಿಯೊ ಡಿ ರುಪೊ ಅವರು(@eliodirupo) ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ @BarackObama ಗೆ ಚಾಲೆಂಜ್ ಮಾಡಿರುವ ಟ್ವೀಟ್ ಈ ಸಮಯಕ್ಕೆ(6.45) 2149 ರೀಟ್ವೀಟ್ 1038 ಫೇವರೀಟ್ ಆಗಿದೆ.

ಏರ್ ಪೋರ್ಸ್ ಒನ್ ನಲ್ಲಿ ಪಂದ್ಯ ವೀಕ್ಷಣೆ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಏರ್ ಪೋರ್ಸ್ ಒನ್ ನಲ್ಲಿ ಫೀಫಾ ವಿಶ್ವಕಪ್ ನ ಯುಎಸ್ಎ ಹಾಗೂ ಜರ್ಮನಿ ಪಂದ್ಯವನ್ನು ವೀಕ್ಷಣೆ ಮಾಡಿದರು.
ಬೆಲ್ಜಿಯಂ ಪ್ರಧಾನಿ ಫೀಫಾ ಅಪ್ದೇಟ್ಸ್
ಬೆಲ್ಜಿಯಂ ಪ್ರಧಾನಿ ಫೀಫಾ ಅಪ್ದೇಟ್ಸ್ ನೀಡುತ್ತಾ ಬೆಲ್ಜಿಯಂ ತಂಡ ಎಚ್ ಗುಂಪಿನಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಗುಂಪಿನ ಅಗ್ರಸ್ಥಾನಿಯಾಗಿ 9 ಅಂಕ ಗಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕ್ಲಿನ್ಸ್ ಮನ್ ತಂಡದ ಭರ್ಜರಿ ಪ್ರದರ್ಶನ
ಜರ್ಮನಿಯ ದಿಗ್ಗಜ ಮಾಜಿ ಫುಟ್ಬಾಲರ್ ಕ್ಲಿನ್ಸ್ ಮನ್ ಅವರು ಈಗ ಯುಎಸ್ಎ ತಂಡದ ಕೋಚ್ ಆಗಿದ್ದು, ಯುಎಸ್ಎ ತಂಡ ಈ ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ನಾಕೌಟ್ ಹಂತ ತಲುಪಿದೆ.

ಜಿದ್ದಾಜಿದ್ದಿನ ಪಂದ್ಯ ನಿರೀಕ್ಷೆಯಿದೆ
ಫೀಫಾ ಶ್ರೇಯಾಂಕ 11 ರಲ್ಲಿರುವ ಬೆಲ್ಜಿಯಂ ಹಾಗೂ 13ನೇ ಶ್ರೇಯಾಂಕ ಪಡೆದಿರುವ ಯುಎಸ್ಎ ನಾಕೌಟ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಬುಕ್ಕಿಗಳು ಬೆಲ್ಜಿಯಂ ತಂಡ ಯುಎಸ್ಎ ವಿರುದ್ಧ ಗೆಲ್ಲುವ ಭವಿಷ್ಯ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications