ಫೀಫಾ ವಿಶ್ವಕಪ್: ಬಲಿಷ್ಟ ಬೆಲ್ಜಿಯಂ vs ಪನಾಮ - Live Score

ಮಾಸ್ಕೋ, ಜೂ. 18: ಫೀಫಾ ವಿಶ್ವಕಪ್ ಪಂದ್ಯದಲ್ಲಿ ಇಂದು ಬಲಿಷ್ಟ ಬೆಲ್ಜಿಯಂ ಮತ್ತು ಪನಾಮ ತಂಡಗಳು ಮುಖಾಮುಖಿಯಾಗಿವೆ. ಬೆಲ್ಜಿಯಂ ಸ್ಟಾರ್ ಆಟಗಾರ ಡೆಡ್ರಕ್ ಬೊಯಟಾ ಅವರು ಇಂದಿನ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಯಿದೆ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಜಿ ಗ್ರೂಪ್ ನ ಪಂದ್ಯಕ್ಕಾಗಿ ರಷ್ಯಾದ ಫಿಷ್ಟ್ ನಲ್ಲಿ ಇತ್ತಂಡಗಳು ಕಣಕ್ಕಿಳಿದಿದ್ದು ಫೀಫಾ ರ್ಯಾಂಕಿಂಗ್ ನಿಟ್ಟಿನಲ್ಲಿ ಬೆಲ್ಜಿಯಂ ಅತ್ಯಂತ ಬಲಿಷ್ಟ ತಂಡ. ಕೋಕಾಕೋಲಾ ಫೀಫಾ ರ್ಯಾಂಕಿಂಗ್ ನಲ್ಲಿ ಬೆಲ್ಜಿಯಂ 3ನೇ ಸ್ಥಾನದಲ್ಲಿದ್ದು, ಪನಾಮ 55ನೇ ಸ್ಥಾನದಲ್ಲಿದೆ.
ಬೆಲ್ಜಿಯಂ ಪರ ಥೈಬೌಟ್ ಕೋರ್ಟ್ಯೋಯಿಸ್; ಟೋಬಿ ಆಲ್ಡರ್ವೀರೆಲ್ಡ್, ಡೆಡ್ರಿಕ್ ಬೊಯಟಾ, ಜಾನ್ ವೆರ್ಟೊಂಗನ್; ಥಾಮಸ್ ಮ್ಯುನಿಯರ್, ಆಕ್ಸೆಲ್ ವಿಟ್ಸೆಲ್, ಕೆವಿನ್ ಡಿ ಬ್ರುಯಿನ್, ಯಾನ್ನಿಕ್ ಕರಾಸ್ಕೊ; ಈಡನ್ ಅಪಾಯ (ಕ್ಯಾಪ್ಟನ್); ಡ್ರೈಸ್ ಮೆರ್ಟೆನ್ಸ್, ರೋಮೆಲು ಲುಕಾಕು. ತರಬೇತುದಾರ: ರಾಬರ್ಟೋ ಮಾರ್ಟಿನೆಜ್ (ಇಎಸ್ಪಿ) ಪಂದ್ಯವನ್ನಾಡುತ್ತಿದ್ದಾರೆ.
ಪನಾಮ ತಂಡದಿಂದ ಜೇಮೀ ಪೆನೆಡೋ; ಮೈಕಲ್ ಅಮೀರ್ ಮುರಿಲ್ಲೋ, ಫಿಡೆಲ್ ಎಸ್ಕೋಬರ್, ರೋಮನ್ ಟಾರ್ರೆಸ್ (ಕ್ಯಾಪ್ಟನ್), ಎರಿಕ್ ಡೇವಿಸ್; ಗೇಬ್ರಿಯಲ್ ಗೊಮೆಜ್; ಎಡ್ಗರ್ ಜೋಯೆಲ್ ಬಾರ್ಸೆನಾಸ್, ಅರ್ಮಾಂಡೋ ಕೂಪರ್, ಅನೈಬಲ್ ಗೊಡೊಯ್, ಜೋಸ್ ಲೂಯಿಸ್ ರೊಡ್ರಿಗಜ್; ಬ್ಲಾಸ್ ಪೆರೆಜ್. ತರಬೇತುದಾರ: ಹೆರ್ನಾನ್ ಡರಿಯೊ ಗೊಮೆಜ್ (COL) ಕಣಕ್ಕಿಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications