ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೋಲಿನ ಮಳೆಯಲ್ಲಿ ಗೆದ್ದ ಬೆಂಗಳೂರು

ಗೋವಾ, ಡಿಸೆಂಬರ್ 13: ಕ್ಲಿಟನ್ ಸಿಲ್ವಾ (29ನೇ ನಿಮಿಷ), ಎರಿಕ್ ಹಾರ್ಥಲು (51ನೇ ನಿಮಿಷ), ದಿಮಾಸ್ ಡೆಲ್ಗಾಡೊ (53ನೇ ನಿಮಿಷ) ಮತ್ತು ಸುನಿಲ್ ಛೆಟ್ರಿ (65ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಬೆಂಗಳೂರು ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ 7ನೇ ಅವೃತ್ತಿಯಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಬೃಹತ್ ಜಯ ಗಳಿಸಿದೆ. ಕೇರಳ ಬ್ಲಾಸ್ಟರ್ಸ್ ಪರ ರಾಹುಲ್ ಕೆಪಿ (17ನೇ ನಿಮಿಷ) ಹಾಗೂ ಜೋರ್ಡನ್ ಮರ್ರೆ (61ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ನಾಯಕ ಸುನಿಲ್ ಛೆಟ್ರಿ ಪೆನಾಲ್ಟಿ ಅವಕಾಶವೊಂದನ್ನು ಕೈ ಚೆಲ್ಲದೇ ಇರುತ್ತಿದ್ದರೆ ಬೆಂಗಳೂರು ಮತ್ತೊಂದು ಗೋಲನ್ನು ಗಳಿಸಿರುತ್ತಿತ್ತು. ಈ ಜಯದೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು.
ಪ್ರಥಮಾರ್ಧದಲ್ಲಿ ಸಮಬಲ: ಕೇರಳ ಬ್ಲಾಸ್ಟರ್ಸ್ ಪರ ರಾಹುಲ್ ಪೆಪಿ (17ನೇ ನಿಮಿಷ) ಹಾಗೂ ಬೆಂಗಳೂರು ಎಫ್ ಸಿ ಪರ ಕ್ಲಿಟನ್ ಸಿಲ್ವಾ (29ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ ದಕ್ಷಿಣದ ಡರ್ಬಿ ಎನಿಸಿರುವ ಪಂದ್ಯದ ಪ್ರಥಮಾರ್ಧದಲ್ಲಿ ಬೆಂಗಳೂರು ಮತ್ತು ಕೇರಳ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದವು.

ಸಮಬಲಗೊಳಿಸಿದ ಸಿಲ್ವಾ
29ನೇ ನಿಮಿಷದಲ್ಲಿ ಕ್ಲಿಟನ್ ಸಿಲ್ವಾ ಗಳಿಸಿದ ಗೋಲಿನಿಂದ ಬೆಂಗಳೂರು ಯಶಸ್ಸು ಕಂಡಿತು. ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಪೆನಾಲ್ಟಿ ವಲಯದಲ್ಲಿ ಕೇರಳದ ಆಟಗಾರ ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾದಾಗ ಕ್ಲಿಟನ್ ಸುಲಭವಾಗಿ ಚೆಂಡನ್ನು ಗೋಲ್ ಬಾಕ್ಸ್ ಗೆ ತಳ್ಳಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು.

ಮುನ್ನಡೆದ ಕೇರಳ
ಕೇರಳ ಅದ್ಭುತವಾದ ಆಟ ಪ್ರದರ್ಶಿಸಿತು, ಪರಿಣಾಮ ರಾಹುಲ್ ಕೆಪಿ 17ನೇ ನಿಮಿಷದಲ್ಲಿ ಅದ್ಭುತ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಕೇರಳದ ಬಾಕ್ಸ್ ನಲ್ಲಿ ಬೆಂಗಳೂರಿಗೆ ಫ್ರೀ ಕಿಕ್ ಅವಕಾಶ. ಆದರೆ ಇದಕ್ಕೆ ಬೆಂಗಲೂರು ಆಟಗಾರರು ಸ್ಪಂದಿಸುವುದಕ್ಕೆ ಮುನ್ನ ಕೇರಳದ ಗ್ಯಾರಿ ಹೂಪರ್ ಚೆಂಡನ್ನು ನಿಯಂತ್ರಿಸಿ ಸುಮಾರು 60ರಿಂದ 70 ಅಡಿಗಳ ವರೆಗೆ ಒಂಟಿಯಾಗಿ ಕೊಂಡೊಯ್ದರು. ನಂತರ ಚೆಂಡನ್ನು ರಾಹುಲ್ ನಿಯಂತ್ರಣಕ್ಕೆ ನೀಡಿದರು. ರಾಹುಲ್ ಬಂದ ವೇಗದಲ್ಲೇ ಚೆಂಡನ್ನು ಗೋಲ್ ಬಾಕ್ಸ್ ಗೆ ನೇರವಾಗಿ ತುಳಿದರು. ಗುರ್ಪ್ರೀತ್ ಸಿಂಗ್ ಸಂಧೂ ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಕೇರಳಕ್ಕೆ 1-0 ಮುನ್ನಡೆ.

ದಕ್ಷಿಣದ ಡರ್ಬಿ
ದಕ್ಷಿಣದ ಬಲಿಷ್ಠ ತಂಡಗಳಾದ ಬೆಂಗಳೂರು ಎಫ್ ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡ ಪರಸ್ಪರ ಮುಖಾಮುಖಿಯಾಗುವುದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೊಮ್ಮೆ ದಕ್ಷಿಣದ ಡರ್ಬಿ ಕಾಣುವ ಅವಕಾಶ. ಮೂರನೇ ಪಂದ್ಯದಿಂದ ತನ್ನ ಆಟದ ಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡಿರುವ ಬೆಂಗಳೂರು ಆಕ್ರಮಣಕಾರಿ ಆಟದಿಂದ ಲಾಭ ಪಡೆದಿತ್ತು; ಮೊದಲ ಎರಡು ಪಂದ್ಯಗಳಲ್ಲಿ 12 ಶಾಟ್ ದಾಖಲಿಸಿದ್ದ ಬೆಂಗಳೂರು ನಂತರದ ಎರಡು ಪಂದ್ಯಗಳಲ್ಲಿ 32 ಶಾಟ್ ದಾಖಲಿಸಿತ್ತು. ಇದರಿಂದಾಗಿ ಉದಾಂತ್ ಸಿಂಗ್ ಗೋಲು ಗಳಿಸಲು ಸಾಧ್ಯವಾಯಿತು.

ಡಿಫೆನ್ಸ್ ವಿಭಾಗದಲ್ಲಿ ಬೆಂಗಳೂರು ಹಿನ್ನೆಡೆ
ಬೆಂಗಳೂರು ಗಳಿಸಿರುವ 5 ಗೋಲುಗಳಲ್ಲಿ ನಾಲ್ಕು ಗೋಲು ಸೆಟ್-ಪೀಸ್ ಮೂಲಕ ದಾಖಲಾಗಿತ್ತು. ಡಿಫೆನ್ಸ್ ವಿಭಾಗದಲ್ಲಿ ಬೆಂಗಳೂರು ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡಿರುವುದು ಸ್ಪಷ್ಟ. ನಾಲ್ಕು ಗೋಲುಗಳನ್ನು ಬೆಂಗಳೂರು ಎದುರಾಳಿ ತಂಡಕ್ಕೆ ನೀಡಿದೆ. ಕೇರಳ ಕೂಡ ಡಿಫೆನ್ಸ್ ವಿಭಾಗದಲ್ಲಿ ವೈಫಲ್ಯ ಕಂಡಿದೆ,. ಗ್ಯಾರಿ ಹೂಪರ್ ಅವರ ಆಗಮನ ಕೇರಳದ ಮನೋಬಲವನ್ನು ಹೆಚ್ಚಿಸಿರುವುದು ಸ್ಪಷ್ಟ. ಕೇರಳಕ್ಕೆ ಇಲ್ಲಿ ಜಯ ಗಳಿಸಬೇಕಾಗಿದೆ, ಏಕೆಂದರೆ ಒಂದು ವೇಳೆ ವಿಫಲವಾದರೆ ಮೊದಲ ಬಾರಿಗೆ ಮೊದಲ ಐದು ಪಂದ್ಯಗಳಲ್ಲಿ ಜಯ ಕಾಣದಂತಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications