ಐಎಸ್‌ಎಲ್ 2018: ಬೆಂಗಳೂರು ಎಫ್‌ಸಿ vs ಎಟಿಕೆ ಪಂದ್ಯಗಳಲ್ಲಿ ಬದಲಾವಣೆ

ಬೆಂಗಳೂರು, ಅಕ್ಟೋಬರ್ 11: ಬೆಂಗಳೂರು ಎಫ್‌ಸಿ ಮತ್ತು ಎಟಿಕೆ ತಂಡಗಳ ನಡುವೆ ನಡೆಯಲಿದ್ದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯಗಳಿಗೆ ಸಂಬಂಧಿಸಿ ಸಣ್ಣ ಬದಲಾವಣೆಯಾಗಿದೆ. ಅಕ್ಟೋಬರ್ 31 ಮತ್ತು ಡಿಸೆಂಬರ್ 13ರಂದು ನಡೆಲಿದ್ದ ಪಂದ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ.
ನವೆಂಬರ್ 1ರಂದು ಕಂಠೀರವ ಸ್ಟೇಡಿಯಂನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಲಿರುವುದು ಈ ಬದಲಾವಣೆಗೆ ಕಾರಣ. ಹೀಗಾಗಿ ಅಕ್ಟೋಬರ್ 31ರಂದು ಬೆಂಗಳೂರಿನಲ್ಲಿ ನಡೆಯಲಿದ್ದ ಪಂದ್ಯವನ್ನು ಕೋಲ್ಕತ್ತಾಕ್ಕೆ ಸ್ಥಳಾಂತರಿಸಲಾಗಿದೆ.
ಹಳೆಯ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 31ರಂದು ಬಿಎಫ್‌ಸಿ vs ಎಟಿಕೆ ಪಂದ್ಯ ಬೆಂಗಳೂರಿನಲ್ಲಿ, ಡಿಸೆಂಬರ್ 13ರಂದಿನ ಬಿಎಫ್‌ಸಿ vs ಎಟಿಕೆ ನಡುವಿನ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಬೇಕಿತ್ತು. ಈಗಿನ ವೇಳಾಪಟ್ಟಿಯಂತೆ ಅಕ್ಟೋಬರ್ 31ರ ಪಂದ್ಯ ಕೋಲ್ಕತ್ತಾದಲ್ಲಿ, ಡಿಸೆಂಬರ್ 13ರ ಪಂದ್ಯ ಬೆಂಗಳೂರಿನಲ್ಲಿ ನಿಗದಿಯಾಗಿದೆ.
ಅಕ್ಟೋಬರ್ 31ರ ಪಂದ್ಯ ಬೆಂಗಳೂರು ಎಫ್‌ಸಿ-ಎಟಿಕೆ ತಂಡಗಳ ಪಂದ್ಯ ಕೋಲ್ಕತ್ತಾದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದರೆ, ಡಿಸೆಂಬರ್ 13ರ ಪಂದ್ಯ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications