Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಚಕ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಬ್ರೆಜಿಲ್ ಗೆ 2-0ಯ ಜಯ

Brazil vs Costa Rica, FIFA World Cup 2018: Brazil 2-0 Costa Rica

ಮಾಸ್ಕೋ, ಜೂ. 22: ಫಿಟ್ಬಾಲ್ ಅಭಿಮಾನಿಗಳ ಕುತೂಹಲ ಕೆರಳಿಸಿದ್ದ ಫೀಫಾ ವಿಶ್ವಕಪ್ ಕೋಸ್ಟರಿಕಾ-ಬ್ರೆಜಿಲ್ ನಡುವಣ ಕಾದಾಟದಲ್ಲಿ ಬ್ರೆಜಿಲ್ 2-0 ಅಂತರದ ಗೆಲುವು ದಾಖಲಿಸಿದೆ. ಇತ್ತಂಡಗಳ ಭರ್ಜರಿ ಸೆಣಸಾಟದ ಅಂತಿಮ ಕ್ಷಣದಲ್ಲಿ ಬ್ರೆಜಿಲ್ ಎರಡು ಗೋಲ್ ಸಿಡಿಸಿ ಗೆಲುವನ್ನು ಸಂಭ್ರಮಿಸಿತು.

ಸ್ಕೋರ್ ಕಾರ್ಡ್

ಇ ಗ್ರೂಪಿನ ಈ ಪಂದ್ಯದಲ್ಲಿ ಆರಂಭದಿಂದಲೂ ಎರಡೂ ತಂಡಗಳು ಗೋಲ್ ಗಾಗಿ ಬಹಳಷ್ಟು ಸೆಣಸಾಟ ನಡೆಸಿದ್ದವು. ದ್ವಿತೀಯಾರ್ಧದಲ್ಲಿ ಬ್ರೆಜಿಲ್ ಗೋಲ್ ಬಾರಿಸಿ ಗೆಲುವು ಸಾಧಿಸಿತು. 90+1ನೇ ನಿಮಿಷದಲ್ಲಿ ಬ್ರೆಜಿಲ್ ನ ಫಿಲಿಪ್ ಕೌಟಿನ್ಹೊ ಅವರು ಮೊದಲ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ತಂದುಕೊಟ್ಟರು.

ಅದಾಗಿ 90+7ನೇ ನಿಮಿಷದಲ್ಲಿ ಬ್ರೆಜಿಲ್ ಸ್ಟಾರ್ ಆಟಗಾರ ನೇಮರ್ ಎರಡನೇ ಗೋಲ್ ಬಾರಿಸಿ ಬ್ರೆಜಿಲ್ ಗೆಲುವಲ್ಲಿ ಪಾಲುದಾರರಾದರು. ಪಂದ್ಯದ ಪ್ರಥಮಾರ್ಧದಲ್ಲಿ ಕೋಲ್ ದಾಖಲಾಗದೆ ದ್ವಿತೀಯಾರ್ಧದಲ್ಲಿ ಅದೂ ಹೆಚ್ಚುವರಿ ನಿಮಿಷ ಸೇರ್ಪಡಿಸಿದ ಅವಧಿಯಲ್ಲಿ ಗೋಲ್ ದಾಖಲಿಸಿ ಗೆಲ್ಲುವ ಮೂಲಕ ಬ್ರೆಜಿಲ್ ಗಮನ ಸೆಳೆಯಿತು.

Story first published: Saturday, June 23, 2018, 10:34 [IST]
Other articles published on Jun 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+