ಫೀಫಾ ವಿಶ್ವಕಪ್: ಬ್ರೆಜಿಲ್ vs ಸ್ವಿಟ್ಜರ್ ಲ್ಯಾಂಡ್- Live Score

ಮಾಸ್ಕೋ, ಜೂ. 17: ಫೀಫಾ ವಿಶ್ವಕಪ್ 2018ರ ಗ್ರೂಪ್ ಹಂತದ ಕಾದಾಟಕ್ಕಾಗಿ ಭಾನುವಾರ ಬ್ರೆಜಿಲ್ ಮತ್ತು ಸ್ವಿಟ್ಜರ್ ಲ್ಯಾಂಡ್ ತಂಡಗಳು ಮೈದಾನಕ್ಕಿಳಿದಿವೆ. ಎರಡೂ ತಂಡಗಳಲ್ಲಿ ಬ್ರೆಜಿಲ್ ಬಲಿಷ್ಟವಾದರೂ ಪಂದ್ಯಾಟ ಹೇಗೂ ತಿರುವು ಪಡೆದುಕೊಳ್ಳಬಹುದು.
(ಪಂದ್ಯದ Live Score ಕೆಳಗಿದೆ. Live ಕಾಮೆಂಟರಿ, ಸ್ಕೋರ್ ಕಾರ್ಡ್ ವಿವರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ)
ರೊಸ್ತೊವ್-ಆನ್-ಡಾನ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಗ್ರೂಪ್ ಇಯ ಈ ಪಂದ್ಯಾಟ ಕುತೂಹಲ ಮೂಡಿಸಿದೆ. ಕಾರಣ ಬ್ರೆಜಿಲ್ ಮತ್ತು ಸ್ವಿಟ್ಜರ್ ಲ್ಯಾಂಡ್ ಈ ಎರಡೂ ತಂಡಗಳು ವಿಶ್ವ ರ್ಯಾಂಕಿಂಗ್ ನಲ್ಲಿ 10ರೊಳಗಿವೆ. ಬ್ರೆಜಿಲ್ ಪರ ಸ್ಟಾರ್ ಆಟಗಾರ ನೇಮರ್ ಅವರು ಇಂದು ಕಣಕ್ಕಿಳಿದಿದ್ದಾರೆ.
ಫೀಫಾ ಕೋಕಾಕೋಲಾ ರ್ಯಾಂಕಿಂಗ್ ನಲ್ಲಿ ಬ್ರೆಜಿಲ್ ಅಗ್ರ 2ನೇ ಸ್ಥಾನದಲ್ಲಿದ್ದು, ಸ್ವಿಟ್ಜರ್ ಲ್ಯಾಂಡ್ 6ನೇ ಸ್ಥಾನದಲ್ಲಿದೆ. ಅತೀ ಹೆಚ್ಚುಬಾರಿ ವಿಶ್ವಕಪ್ ಜಯಿಸಿದ ಹೆಗ್ಗಳಿಕೆ ಬ್ರೆಜಿಲ್ ನದ್ದಾದ್ದರಿಂದ ಇಂದಿನ ಗೆಲ್ಲುವ ತಂಡವಾಗಿ ಬ್ರೆಜಿಲ್ ಕಾಣಿಸಿಕೊಂಡಿದೆ. ಆದರೆ ವಿಜೇತ ತಂಡವಾಗಿ ಇಂದು ಸ್ವಿಟ್ಜರ್ ಲ್ಯಾಂಡ್ ಹೊರಹೊಮ್ಮಿದರೂ ಅಚ್ಚರಿಯಿಲ್ಲ.
ಭಾನುವಾರದ ದ್ವಿತೀಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ ಮೆಕ್ಸಿಕೋ 1-0 ಅಂತರದ ಜಯ ಸಾಧಿಸಿದ್ದು, ಫುಟ್ಬಾಲ್ ನಲ್ಲಿ ಆ ಹೊತ್ತಿನ ಕಾದಾಟವೇ ಮುಖ್ಯ ಹೊರತು ವಿಶ್ವ ರ್ಯಾಂಕಿಂಗ್ ಅಲ್ಲ ಎನ್ನುವುದಕ್ಕೆ ಆ ಫಲಿತಾಂಶವೇ ಸಾಕ್ಷಿಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications