Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!

Champions League pitch invader Kinsey Wolanski fined by UEFA

ಮ್ಯಾಡ್ರಿಡ್‌, ಜೂನ್‌ 06: ಬಾಯ್‌ಫ್ರೆಂಡ್‌ನ ಯೂಟ್ಯೂಬ್‌ ಚಾನಲ್‌ ಬಗ್ಗೆ ಪ್ರಚಾರ ಮಾಡುವ ಉದ್ದೇಶದಿಂದ ಜೂನ್‌ 2ರಂದು ಭಾನುವಾರ ನಡೆದ ಯುಎಫಾ ಚಾಂಪಿಯನ್ಸ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ ಫೈನಲ್‌ ಪಂದ್ಯದ ವೇಳೆ ಮೈದಾನದ ಒಳಗೆ ಸ್ವಿಮ್‌ ಸೂಟ್‌ ಧರಿಸಿ ನುಗ್ಗಿದ್ದ ಮಾಡೆಲ್‌ ಕಿನ್ಸೇ ವೊಲಾನ್‌ಸ್ಕೀಗೆ ಕೇವಲ 11.75 ಲಕ್ಷ ರೂ. (17 ಸಾವಿರ ಅಮೆರಿಕ ಡಾಲರ್‌) ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಟೂರ್ನಿಯ ನೀತಿ ನಿಯಮಗಳ ಉಲ್ಲಂಘನೆ ಅಡಿಯಲ್ಲಿ ಸ್ವಿಮ್‌ ಸೂಟ್‌ ಮಾಡೆಲ್‌ಗೆ ದಂಡ ವಿಧಿಸಲಾಗಿದೆ. ಕಿನ್ಸೇ ಅವರು ಮೈದಾನದ ಒಳ ಹೊಕ್ಕಿದ ಕಾರಣ ಟೊಟೆನ್‌ಹ್ಯಾಮ್‌ ಹಾಟ್‌ಸ್ಪುರ್‌ ಮತ್ತು ಲಿವರ್‌ಪೂಲ್‌ ನಡುವಣ ಹೈ ವೋಲ್ಟೇಜ್‌ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಬಳಿಕ ಭದ್ರತಾ ಸಿಬ್ಬಂದ್ದಿ ಕಿನ್ಸೇ ಅವರನ್ನು ಬಂಧಿಸಿ ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದಿದ್ದರು.

ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಆಸೀಸ್‌ನ ನೇಥನ್‌ ಕೌಲ್ಟರ್‌ ನೈಲ್‌!

ಅಮೆರಿಕ ಮೂಲದ ಮಾಡೆಲ್‌ ಅವರಿಗೆ ಮೈದಾನದ ಒಳ ಹೊಕ್ಕಿದ ಕಾರಣಕ್ಕೆ ಮೊದಲಿಗೆ 4 ಲಕ್ಷ ರೂ. ದಂಡ ವಿಧಿಸಲಾಗಿದ್ದು, ತಮ್ಮ ಪ್ರಿಯಕರನ ಯೂಟ್ಯೂಬ್‌ ಚಾನಲ್‌ ಬಗ್ಗೆ ಪ್ರಚಾರ ಮಾಡಿದ್ದಕ್ಕೆ ಹೆಚ್ಚುವರಿಯಾಗಿ 8 ಲಕ್ಷ ರೂಗಳ ದಂಡವನ್ನು ಯುಎಫಾ ವಿಧಿಸಿದೆ. ತಮ್ಮ ಬಾಯ್‌ಫ್ರೆಂಡ್‌ ರಷ್ಯಾ ಮೂಲದ ಅಮೆರಿಕನ್‌ ಪ್ರಜೆ ವಿಟಾಲಿ ಡೊರೊವೆಸ್ಕೀ ಅವರ ಹೆಸರನ್ನು ಬರೆಯಲಾದ ಸ್ಮಿಮ್‌ ಸೂಟ್‌ ತೊಟ್ಟು ಪಂದ್ಯದ ಪ್ರಥಮಾವಧಿಯ ಮಧ್ಯದಲ್ಲಿ ಕಿನ್ಸೇ ಮೈದಾನದ ಒಳ ಪ್ರವೇಶ ಮಾಡಿದ್ದರು.

ಇಷ್ಟೇ ಅಲ್ಲದೆ ಭವಿಷ್ಯದಲ್ಲಿ ಇದೇ ರೀತಿ ಮತ್ತೊಮ್ಮೆ ಫುಟ್ಬಾಲ್‌ ಪಂದ್ಯವೊಂದರ ವೇಳೆ ಮೈದಾನದ ಒಳಹೊಕ್ಕಿದರೆ ಈಗ ವಿಧಿಸಲಾಗಿರುವ ದಂಡದ ದುಪ್ಪಟ್ಟು ಮೊತ್ತವನ್ನು ತೆರಬೇಕಾಗುತ್ತದೆ ಎಂದು ಇದೇ ವೇಳೆ ಯುಎಫಾ ಕಿನ್ಸೇಗೆ ಎಚ್ಚರಿಕೆ ನೀಡಿದೆ.

ಅಂದಹಾಗೆ ಕಿನ್ಸೇ ಫುಟ್ಬಾಲ್‌ ಮೈದಾನದ ಒಳಹೊಕ್ಕಿ ಮೈದಾನವೆಲ್ಲಾ ಓಡಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಅಷ್ಟೇ ಅಲ್ಲದೆ ಅಮೆರಿಕದ ಮಾಡಲ್‌ಗೆ ಈ ಘಟನೆಯಾದ ಒಮದು ಗಂಟೆ ಒಳಗಾಗಿ 20 ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಗ್ರಾಮ್‌ ಫಾಲೊವರ್ಸ್‌ ಹರಿದು ಬಂದಿದ್ದಾರೆ. ಟ್ವಿಟರ್‌ನಲ್ಲಿ 2.5 ದಶಲಕ್ಷ ಫಾಲೋವರ್ಸ್‌ ರಾತ್ರೋರಾತ್ರಿ ಹಿಂಬಾಲಿಸಿದ್ದಾರೆ ಎಂದು ಖುದ್ದಾಗಿ ಕಿನ್ಸೇ ತಮ್ಮ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಟ್ವೀಟ್‌ ಮಾಡಿದ್ದಾರೆ.

ಚಾಂಪಿಯನ್ಸ್‌ ಲೀಗ್‌ ಫೈನಲ್‌ನಲ್ಲಿ ಲಿವರ್‌ಪೂಲ್ ತಂಡ 2-0 ಗೋಲ್‌ಗಳಿಂದ ಟೊಟೆನ್‌ಹ್ಯಾಮ್‌ ಹಾಟ್‌ಸ್ಪುರ್‌ ವಿರುದ್ಧ ಜಯ ದಾಖಲಿಸಿತ್ತು.

Story first published: Thursday, June 6, 2019, 23:39 [IST]
Other articles published on Jun 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+