Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್ 2019: ಕ್ಲಬ್ ವೈರತ್ವ ಬದಿಗಿಟ್ಟು ನೆರವಿಗೆ ಮುಂದಾದ ಜಿಂಗಾನ್

Clubs set rivalry aside, offer recovering Jhingan a helping hand

ಮುಂಬೈ, ನವೆಂಬರ್ 14: ಒಂದು ತಿಂಗಳ ಹಿಂದೆ ಅಭ್ಯಾಸ ಪಂದ್ಯದ ವೇಳೆ ಕಾಲಿನ ಮುಂಭಾಗದ ಮೂಳೆ ಕಟ್ಟು ಭಾಗಶಃ ಹರಿದು ಹೋಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕೇರಳ ಬ್ಲಾಸ್ಟರ್ಸ್ ತಂಡದ ಡಿಫೆಂಡರ್ ಸಂದೇಶ್ ಜಿಂಗಾನ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ನಡೆದ 2022 ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ಮುನ್ನ, ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧ ಭಾರತ ತಂಡ ಅಭ್ಯಾಸ ಪಂದ್ಯವನ್ನಾಡುವ ವೇಳೆ ಜಿಂಗಾನ್ ಅವರ ಹಿಮ್ಮಡಿ ಉಳುಕಿ ಮೂಳೆ ಕಟ್ಟು ಹರಿದುಹೋಗಿತ್ತು.

ಕೊಚ್ಚಿಗೆ ಹೋಗುವುದಕ್ಕೆ ಮುನ್ನ ಜಿಂಗಾನ್ ಮೂರು ತಿಂಗಳಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಅವರು ಕೊಚ್ಚಿ ತಂಡವನ್ನು ಸೇರಿಕೊಳ್ಳಬಹುದು. ತಂಡಗಳ ನಡುವಿನ ವೈರತ್ವ ಫೂರ್ಬಲ್ ನಲ್ಲಿ ಸಹಜವವಾಗಿರುತ್ತದೆ. ಅಂಗಣದಲ್ಲಿರುವ ವೈರುತ್ವ ಹೆಚ್ಚು ಕಾಲ ಉಳಿಯುವಂತದ್ದಲ್ಲ. 26 ವರ್ಷದ ಈ ಆಟಗಾರನಿಗಾಗಿ ಎಲ್ಲ ಕ್ಲಬ್ ಗಳು ಒಂದಾಗಿ ನೆರವಿಗೆ ಬಂದಿವೆ.

''ನಾನು ಶಸ್ತ್ರ ಚಿಕಿತ್ಸೆ ಆದಾಗಿನಿಂದ ಮುಂಬೈನಲ್ಲಿರುವ ಮುಂಬೈ ಸಿಟಿ ಎಫ್ ಸಿ ತಂಡದ ಅಪಾರ್ಟ್ಮೆಂಟ್ ನಲ್ಲಿ ತಂಗಿರುವೆ. ಅವರು ಉತ್ತಮ ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಬೆಂಗಳೂರು ಎಫ್ ಸಿ ಕೂಡ ಕರ್ನಾಟಕದ ಬಳ್ಳಾರಿಯಲ್ಲಿರುವ ತಮ್ಮ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯಲು ಆಹ್ವಾನಿಸಿದ್ದಾರೆ. ಎಟಿಕೆ ಕೂಡಾ ಕೋಲ್ಕೊತಾಕ್ಕೆ ಆಹ್ವಾನಿಸಿತ್ತು. ಈ ರೀತಿಯ ಸಹಾಯ ನನ್ನನು ವಿನೀತನನ್ನಾಗಿ ಮಾಡಿದೆ. ಅಂಗಣದಲ್ಲಿನ ವೈರತ್ವದ ಹೊರತಾಗಿ ಕ್ಲಬ್ ನ ಹಿತೈಷಿಗಳು, ಫುಟ್ಬಾಲ್ ಪ್ರೇಮಿಗಳು ಎಲ್ಲ ಕಡೆ ಇರುತ್ತಾರೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಯಿತು. ಗಾಯಗೊಂಡು ಒಬ್ಬ ಕ್ರೀಡಾಪಟುವಿನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ನನಗೆ ಸಿಕ್ಕ ಪ್ರೋತ್ಸಾಹಕ್ಕೆ ಚಿರಋಣಿ. ನನ್ನ ನೆರವಿಗೆ ಬಂದ ಫುಟ್ಬಾಲ್ ಕುಟುಂಬಕ್ಕೆ ನಾನು ಚಿರಋಣಿ,'' ಎಂದು ಜಿಂಗಾನ್ ಹೇಳಿದ್ದಾರೆ.

2014ರ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಉದಯೋನ್ಮುಖ ಆಟಗಾರ ಎನಿಸಿದ್ದ ಜಿಂಗಾನ್ ಈಗ ಲಘು ಅಭ್ಯಾಸದ ಕಡೆಗೆ ಯೋಚಿಸಿ ನಂತರ ತಂಡ ಸೇರಿಕೊಳ್ಳುವುದರಬಗ್ಗೆ ಗಮನ ಹರಿಸಬೇಕಾಗಿದೆ.

Clubs set rivalry aside, offer recovering Jhingan a helping hand

''ಶಸ್ತ್ರ ಚಿಕಿತ್ಸೆಯ ನಂತರ ದೇಹವನ್ನು ಸಮತೋಲನದಲ್ಲಿಡಲು ಜಿಮ್ ನಲ್ಲಿ ಕೆಲಸ ಮಾಡಬೇಕಾಗಿದೆ. ಈಗ ಎರಡು ಹಂತಗಳು ಪೂರ್ಣಗೊಂಡಿವೆ. ಈಗ ನಾನು ದೇಹ ಯಾವ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂಬುದನ್ನು ತಾಳ್ಮೆಯಿಂದ ನೋಡಬೇಕಾಗಿದೆ,'' ಎಂದು ಭಾರತ ತಂಡದ ಡಿಫೆಂಡರ್ ಹೇಳಿದ್ದಾರೆ.

ಸೆಂಟರ್ ಬ್ಯಾಕ್ ಆಟಗಾರ ಹಂತ ಹಂತವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ತಂಡಕ್ಕೆ ಹಿಂದಿರುಗುವ ಬಗ್ಗೆ ಅವರು ತುರ್ತಾಗಿ ದಿನಾಂಕವನ್ನು ಪ್ರಕಟಿಸುತ್ತಿಲ್ಲ. '' ಆರಂಭದಲ್ಲಿ ನಾನು ಈ ಋತುವಿನ ಕೊನೆಯಲ್ಲಿ ತಂಡವನ್ನು ಸೇರಿಕೊಳ್ಳಬೇಕೆಂದಿದ್ದೆ. ಆದರೆ ಕಾಲು ನೋವು ಗುಣವಾಗಲು ಸುಮಾರು ಆರರಿಂದ ಒಂಬತ್ತು ತಿಂಗಳು ಬೇಕಾಗುತ್ತದೆ,'' ಎಂದು ಜಿಂಗಾನ್ ಹೇಳಿದರು.

''ಈ ಋತುವಿನ ಕೊನೆಯಲ್ಲಿ ಅಥವಾ ಜೂನ್ ನಲ್ಲಿ ಅಥವಾ ಮುಂದಿನ ಐಎಸ್ ಎಲ್ ನ ಆರಂಭದಲ್ಲಿ ತಂಡವನ್ನು ಸೇರಿಕೊಳ್ಳುತ್ತೇನೆಂದು ಹೇಳಲು ಕಷ್ಟ. ಆದರೆ ನನ್ನ ಫುಟ್ಬಾಲ್ ಅಭಿಮಾನಿಗಳು, ಕುಟುಂಬದವರು ಹಾಗೂ ಫುಟ್ಬಾಲ್ ಹಿತೈಷಿಗಳಿಗೆ ನಾನು ಮತ್ತೆ ಅಂಗಣದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಈ ಮೂಲಕ ತಿಳಿಸಬಲ್ಲೆ. ತಂಡಕ್ಕೆ ಮರಳುವ ಬಗ್ಗೆ ತುರ್ತು ಕ್ರಮ ಕೈಗೊಳ್ಳುವುದಿಲ್ಲ, ಇನ್ನೂ ಉತ್ತಮ ಆಟಗಾರನಾಗಿ, ಉತ್ತಮ ವ್ಯಕ್ತಿಯಾಗಿ ಮತ್ತೆ ಅಂಗಣದಲ್ಲಿ ಕಾಣಿಸಿಕೊಳ್ಳಲಿದ್ದೇನೆ,'' ಎಂದರು.

Story first published: Thursday, November 14, 2019, 13:15 [IST]
Other articles published on Nov 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+