ಪೋರ್ಚುಗಲ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಚಿಲಿ
ಕಝಾನ್, ಜೂನ್ 29: ಚಿಲಿ ತಂಡದ ಗೋಲ್ ಕೀಪರ್ ಕ್ಲಾಡಿಯೊ ಬ್ರಾವೊ ಅವರು ಮೂರು ಅದ್ಭುತ ಸೇವ್ ಗಳ ಮೂಲಕ ಬಲಿಷ್ಠ ಪೋರ್ಚುಗಲ್ ತಂಡವನ್ನು ಕಾನ್ಫಿಡರೇಷನ್ಸ್ ಕಪ್ ಫುಟ್ಬಾಲ್ ಟೂರ್ನಮೆಂಟ್ ನಿಂದ ಹೊರಗಟ್ಟಿದರು. ಸೆಂಟ್ ಪಿಟ್ಸ್‌ಬರ್ಗ್‌ನಲ್ಲಿ ಭಾನುವಾರ(ಜುಲೈ 2)ದಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಚಿಲಿ ಸಜ್ಜಾಗಲಿದೆ.
ಮೊದಲ ಸೆಮಿಫೈನಲ್ ನಲ್ಲಿ ನಿಯಮಿತ ಹಾಗೂ ಹೆಚ್ಚುವರಿ ಅವಧಿಯಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸುವಲ್ಲಿ ವಿಫಲವಾದವು.

ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಪೋರ್ಚುಗಲ್ ವಿರುದ್ಧ 0-3 ಗೋಲುಗಳಿಂದ ಜಯ ದಾಖಲಿಸಿದ ಚಿಲಿ, ಫೈನಲ್ ಗೇರಿತು. ಇನ್ನೊಂದು ಸೆಮಿಫೈನಲ್ ಪಂದ್ಯ ಸೋಚಿಯಲ್ಲಿ ಗುರುವಾರ ನಡೆಯಲಿದೆ. ಫೈನಲ್ ಹಂತಕ್ಕೇರಿರುವ ಚಿಲಿ ತಂಡ, ಈಗ ಜರ್ಮನಿ ಅಥವಾ ಮೆಕ್ಸಿಕೋವನ್ನು ಎದುರಿಸಲಿದೆ.
ಪೋರ್ಚುಗಲ್ ತಂಡದ ರಿಕಾರ್ಡೊ ಕ್ವರೇಸ್ಮಾ, ಜಾವೊ ಮೌತಿನೊ ಹಾಗೂ ನಾನಿ ಹೀಗೆ ಎಲ್ಲ ಮೂವರು ಆಟಗಾರರು ಒದ್ದ ಚೆಂಡನ್ನು ಚಿಲಿಯ ಗೋಲ್ ಕೀಪರ್ ಕ್ಲಾಡಿಯೋ ಬ್ರಾವೋ ಅವರು ಸೇವ್ ಮಾಡಿ ಹೀರೋ ಆದರು. ಚಿಲಿ ಪರ ಆರ್ಥೊರೊ ವಿದಾಲ್, ಚಾರ್ಲ್ಸ್ ಅರಂಗ್ವಿರ್ ಹಾಗೂ ಅಲೆಕ್ಸಿಸ್ ಸಾಂಚೆಸ್ ಗೋಲು ಬಾರಿಸಿದರು.
Story first published: Wednesday, January 3, 2018, 10:06 [IST]
Other articles published on Jan 3, 2018
Read in English: Claudio Bravo saves it for Chile
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications