ಚಿತ್ರಗಳು ː ಕಾನ್ಫೆಡರೇಷನ್ಸ್ ಕಪ್ ಗೆದ್ದ ಯುವ ಜರ್ಮನಿ ತಂಡ
ಸೈಂಟ್ ಪೀಟರ್ಸ್ ಬರ್ಗ್, ಜು 03: ಚಿಲಿ ತಂಡವನ್ನು 1-0 ಅಂತರದಿಂದ ಸೋಲಿಸಿದ ವಿಶ್ವ ಚಾಂಪಿಯನ್ ಜರ್ಮನಿ ತಂಡಕ್ಕೆ ಕಾನ್ಫೆಡರೇಷನ್ಸ್ ಕಪ್ ತನ್ನದಾಗಿಸಿಕೊಂಡಿದೆ.
ಭಾನುವಾರದಂದು ನಡೆದ ಫೈನಲ್ ಪಂದ್ಯದಲ್ಲಿ 20ನೇ ಮಿಷದಲ್ಲಿ ಲಾರ್ಸ್ ಸ್ಟಿಂಡಲ್ ಬಾರಿಸಿದ ಏಕೈಕ ಗೋಲಿನ ಸಹಾಯದಿಂದ ಜರ್ಮನಿ ಚೊಚ್ಚಲ ಕಪ್ ಗೆದ್ದುಕೊಂಡಿದೆ. ಮುಂದಿನ ವರ್ಷ ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ ಗೆ ಕಾನ್ಫೆಡರೇಷನ್ ಕಪ್ ಮುನ್ನುಡಿಯಾಗಿದೆ.
ಚಿಲಿ ತಂಡದಲ್ಲಿ ಅಲೆಕ್ಸಿಸ್ ಸ್ಯಾಂಚೆಜ್, ಅರ್ತುರೊ ವಿದಾಲ್,ಎಡ್ವಾರ್ಡೋ ವರ್ಗಸ್ ರಂಥ ಪ್ರಭಾವಿ ಆಟಗಾರರಿದ್ದರೂ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಚಿಲಿ ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ ಜರ್ಮನಿಯ ಮಾರ್ಕ್ ಅಂಡ್ರೆ ಟೆರ್ ಸ್ಟೇಗನ್ ಅವರು ಪಂದ್ಯಶ್ರೇಷ್ಠ ಎನಿಸಿಕೊಂಡರು.
ಗೋಲ್ ಕೀಪರ್ ಬ್ರಾವೋ ಅವರ ಉತ್ತಮ ಪ್ರದರ್ಶನದ ಮೂಲಕ ಸೆಮಿಫೈನಲ್ ನಲ್ಲಿ ಪೋರ್ಚುಗಲ್ ತಂಡವನ್ನು ಸೋಲಿಸಿದ್ದ ಚಿಲಿ ಕಳೆದ ಮೂರು ವರ್ಷಗಳಲ್ಲಿ ಮೂರನೇ ಪ್ರಮುಖ ಫೈನಲ್ ಗೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಯುವ ಪಡೆ
ಚಿಲಿ ತಂಡವನ್ನು 1-0 ಅಂತರದಿಂದ ಸೋಲಿಸಿ, ಕಾನ್ಫಡರೇಶನ್ ಕಪ್ ಗೆದ್ದ ಸಂಭ್ರಮದಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡ.

ಕಣ್ಣೀರಿಟ್ಟ ವಿದಾಲ್
ಚಿಲಿಯ ಸ್ಟಾರ್ ಆಟಗಾರ ವಿದಾಲ್ ಅವರು ಕಣ್ಣೀರಿಟ್ಟು, ಮೈದಾನದಿಂದ ಹೊರಕ್ಕೆ ಹೋಗುವ ದೃಶ್ಯ.

ಜರ್ಮನಿಗೆ ಹೆಚ್ಚು ಪ್ರಶಸ್ತಿ
ಚಿನ್ನದ ಚೆಂಡು ಗೆದ್ದ ಜೂಲಿಯನ್ ಡ್ರಾಕ್ಸಲರ್, ಗೋಲ್ಡನ್ ಗ್ಲೋವ್ಸ್ ಗೆದ್ದ ಚಿಲಿಯ ಕ್ಲಾಡಿಯೋ ಬ್ರೊ ಹಾಗೂ ಚಿನ್ನದ ಬೂಟು ಗೆದ್ದ ಜರ್ಮನಿಯ ತಿಮೊ ವರ್ನರ್.

ಚಿಲಿಗೆ ಕೈಕೊಟ್ಟ ಅದೃಷ್ಟ
ಚಿಲಿ ಡಿಫೆಂಡರ್ ಗೋಂಝಾಲೊ ಹಾಗೂ ಜರ್ಮನಿಯ ಟಿಮೊ ವೆರ್ನರ್ ನಡುವಿನ ಘರ್ಷಣೆ ಹಾಗೂ ವಿಡಿಯೋ ರೆಫರೆನ್ಸ್ ಕೂಡಾ ಚಿಲಿ ಪಾಲಿಗೆ ಪೆನಾಲ್ಟಿ ತರಲಿಲ್ಲ. ಚಿತ್ರದಲ್ಲಿ ಮಧ್ಯದಲ್ಲಿ ಚಿಲಿಯ ಸ್ಯಾಂಚೆಸ್.

ರೊನಾಲ್ಡೊ ಪಡೆಗೆ ಮೂರನೇ ಸ್ಥಾನ
ಮೂರನೆ ಹಾಗೂ ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮೆಕ್ಸಿಕೋವನ್ನು ಸೋಲಿಸಿದ ಪೋರ್ಚುಗಲ್ ಮೂರನೇ ಸ್ಥಾನ ಗಳಿಸಿತು.
Note: All images taken from Confederations CupFIFA Official Twitter handle- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications