ಕೋಪಾ ಅಮೆರಿಕಾ 2021: ಪೆರು ವಿರುದ್ಧ ಬ್ರೆಜಿಲ್‌ಗೆ ಭರ್ಜರಿ ಜಯ

ರಿಯೋ ಡಿ ಜನೈರೋ: ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿರುವ ಎಸ್ಟಾಡಿಯೋ ನಿಲ್ಟನ್ ಸ್ಯಾಂಟೋಸ್ ಅರೆನಾದಲ್ಲಿ ಶುಕ್ರವಾರ (ಜೂನ್ 18) ನಡೆದ ಕೋಪಾ ಅಮೆರಿಕಾ ಗ್ರೂ 'ಎ' ಪಂದ್ಯದಲ್ಲಿ ಪೆರು ವಿರುದ್ಧ ಬ್ರೆಜಿಲ್ ಭರ್ಜರಿ 4-0ಯ ಗೆಲುವು ದಾಖಲಿಸಿದೆ.
ಬ್ರೆಜಿಲ್‌ನ ಅಲೆಕ್ಸ್ ಸ್ಯಾಂಡ್ರೋ 12ನೇ ನಿಮಿಷದಲ್ಲಿ, ನೇಮರ್ 68ನೇ ನಿಮಿಷದಲ್ಲಿ, ಎವರ್ಟನ್ ರಿಬೈರೊ 89ನೇ ನಿಮಿಷದಲ್ಲಿ, ರಿಚಾರ್ಲಿಸನ್ 90+3ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಭರ್ಜರಿ ಗೆಲುವಿಗೆ ಪೆರುವಿನ ಹೀನಾಯ ಸೋಲಿಗೆ ಕಾರಣರಾದರು.
ಬ್ರೆಜಿಲ್ ತಂಡಕ್ಕೆ ಟೂರ್ನಿಯ ಎರಡನೇ ಗೆಲುವಿದು. ಈ ಪಂದ್ಯದ ಬಳಿಕ ಬ್ರೆಜಿಲ್ ತಂಡ ಗ್ರೂಪ್ 'ಎ' ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಗಟ್ಟಿಯಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಕೊಲಂಬಿಯಾ 4, ವೆನೆಜುವೆಲಾ 1 ಅಂಕದೊಂದಿಗೆ ತೃತೀಯ ಸ್ಥಾನದಲ್ಲಿದೆ.
ಗ್ರೂಪ್ 'ಬಿ'ಯಲ್ಲಿ ಪೆರಗ್ವೆ 3, ಅರ್ಜೆಂಟೀನಾ 1, ಚಿಲಿ 1 ಅಂಕದೊಂದಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ.
Story first published: Friday, June 18, 2021, 8:25 [IST]
Other articles published on Jun 18, 2021
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications