ಕೋಪಾ ಅಮೆರಿಕಾ: ಕೊಲಂಬಿಯಾ ವಿರುದ್ಧ ಫೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಮೆಸ್ಸಿ ಪಡೆ

ರಿಯೋ ಡಿ ಜನೈರೋ, ಜುಲೈ 7: ಕೋಪಾ ಅಮೆರಿಕಾ ಫುಟ್ಬಾಲ್ ಟೂರ್ನಿ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಕೊಲಂಬಿಯಾ ವಿರುದ್ಧದ ಸೆಮಿಫೈನಲ್ ಕಾದಾಟದಲ್ಲಿ ಫೆನಾಲ್ಟಿ ಶೂಟೌಟ್‌ನಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಕೋಪಾ ಅಮೆರಿಕಾದ ಫೈನಲ್ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿದೆ.
ಅರ್ಜೆಂಟಿನಾ ತಂಡದ ಈ ಗೆಲುವಿನಲ್ಲಿ ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿನೆಜ್ ಹೀರೋ ಆಗಿ ಮಿಂಚಿದರು. ಫೆನಾಲ್ಟಿ ಶೂಟೌಟ್‌ನಲ್ಲಿ ಮೂರು ಗೋಲ್‌ಗಳನ್ನು ಅರ್ಜೆಂಟಿನಾ ತಂಡದ ಗೋಲ್‌ಕೀಪರ್ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು ತಂಡದ ಗೆಲುವಿಗೆ ಕಾರಣವಾಯಿತು. ಈ ಮೂಲಕ 1993ರ ನಂತರ ಅರ್ಜೆಂಟಿನಾ ಈ ಮಹತ್ವದ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರುವಲ್ಲಿ ವಿಫಲವಾಗಿದೆ. ಈಗ ಆ ಅವಕಾಶ ಮೆಸ್ಸಿ ಬಳಗದ ಮುಂದಿದೆ.
ಭಾನುವಾರ ಈ ಫೈನಲ್ ಪಂದ್ಯ ನಡೆಯಲಿದ್ದು ಲಿಯೋನೆಸ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡಕ್ಕೆ ಹಾಲಿ ಚಾಂಪಿಯನ್ ಬ್ರೆಝಿಲ್ ಕಠಿಣ ಸವಾಲನ್ನು ಒಡ್ಡಲಿದೆ. ಯಾರು ಚಾಂಪಿಯನ್ ಪಟ್ಟಕ್ಕೇರಲಿದ್ದಾರೆ ಎಂಬುದು ಆ ಕಾದಾಟದಲ್ಲಿ ಸ್ಪಷ್ಟವಾಗಲಿದೆ.
ಇದಕ್ಕೂ ಮುನ್ನ ಸೋಮವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಪೆರು ಹಾಗೂ ಹಾಲಿ ಚಾಂಪಿಯನ್ ಬ್ರೆಜಿಲ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬ್ರೆಝಿಲ್ ಪೆರು ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಪ್ರತಿಷ್ಟಿತ ಟೂರ್ನಿಯ ಫೈನಲ್ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications