ಫೀಫಾ ವಿಶ್ವಕಪ್ 2018: ಕೋಸ್ಟರಿಕಾ vs ಸರ್ಬಿಯಾ - Live Score

ಮಾಸ್ಕೋ, ಜೂ. 17: ಫೀಫಾ ವಿಶ್ವಕಪ್ ಪಂದ್ಯಾಟದಲ್ಲಿ ಇಂದು ಕೋಸ್ಟರಿಕಾ ಮತ್ತು ಸರ್ಬಿಯಾ ತಂಡಗಳು ಎದುರಾಗಿವೆ. ಸರ್ಬಿಬಿಯಾ ಸ್ಟಾರ್ ಆಟಗಾರ ಬ್ರಾನಿಸ್ಲಾವ್ ಇವನೋವಿಕ್ ಅವರ ಆಟದ ಮೇಲೆ ಸರ್ಬಿಯಾದ ಸೋಲು-ಗೆಲುವು ಅವಲಂಬಿಸಿದ್ದು, ಗ್ರೂಪ್ ಇಯ ಈ ಪಂದ್ಯ ಕುತೂಹಲ ಮೂಡಿಸಿದೆ.
(ಪಂದ್ಯದ Live Score, ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ)
ಫೀಫಾ ಕೋಕಾಕೋಲಾ ಅಂಕಪಟ್ಟಿಯನ್ನು ಗಮಸಿಸಿದೆ ಕೋಸ್ಟರಿಕಾ ಕೊಂಚ ಬಲಿಷ್ಟವಾಗಿ ಕಾಣುತ್ತಿದೆ. ಆದರೆ ಪಂದ್ಯ ಹೇಗೆ ಬೇಕಾದರೂ ತಿರುವು ಪಡೆದುಕೊಳ್ಳಬಹುದು. ರ್ಯಾಂಕಿಂಗ್ ನಲ್ಲಿ ಕೋಸ್ಟರಿಕಾ 23ನೇ ಸ್ಥಾನದಲ್ಲಿದ್ದರೆ, ಸರ್ಬಿಯಾ 34ನೇ ಸ್ಥಾನದಲ್ಲಿದೆ.
ಕೋಸ್ಟರಿಕಾ ತಂಡವನ್ನು ಕೀಲರ್ ನವಸ್ - ಜಾನಿ ಅಕೋಸ್ಟಾ, ಜಿಯಾನ್ಕಾರ್ಲೊ ಗೊನ್ಜಾಲೆಜ್, ಆಸ್ಕರ್ ಡುವಾರ್ಟೆ, ಫ್ರಾನ್ಸಿಸ್ಕೊ ಕ್ಯಾಲ್ವೊ - ಕ್ರಿಸ್ಟಿನ್ ಗ್ಯಾಂಬೋವಾ, ಸೆಲ್ಸೊ ಬೋರ್ಜೆಸ್, ಬ್ರಿಯಾನ್ ರುಯಿಜ್ - ಡೇವಿಡ್ ಗುಜ್ಮನ್, ಜೋಹಾನ್ ವೆನೆಗಾಸ್, ಮಾರ್ಕೋಸ್ ಉರೆನಾ ಪ್ರತಿನಿಧಿಸುತ್ತಿದ್ದಾರೆ.
ಇತ್ತ ಸರ್ಬಿಯಾ ತಂಡದಲ್ಲಿ ವ್ಲಾಡಿಮಿರ್ ಸ್ಟೋಝೋವಿಕ್ - ಡ್ಸುಕೊ ಟೋಸಿಕ್, ಬ್ರಾನಿಸ್ಲಾವ್ ಇವನೊವಿಕ್, ಅಲೆಕ್ಸಾಂಡರ್ ಕೊಲೊರೊವ್ - ನಿಕೋಲಾ ಮಿಲೆನ್ಕೋವಿಕ್, ಲ್ಯೂಕಾ ಮಿಲಿವೊಜೆವಿಕ್, ಡ್ಸುನ್ ಟಾಡಿಕ್, ಸೆರ್ಗೆಜ್ ಮಿಲಿಂಕೊವಿಕ್-ಸಾವಿಕ್, ನೆಮಂಜ ಮಾಟಿಕ್ - ಆಡಮ್ ಲಜಜಿಕ್, ಅಲೆಕ್ಸಾಂಡರ್ ಮಿಟ್ರೋವಿಕ್ ಕಣಕ್ಕಿಳಿಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications