Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ರೊನಾಲ್ಡೋ ವಿರುದ್ಧ ಅತ್ಯಾಚಾರ ಆರೋಪ!

Cristiano Ronaldo accused of rape, lawyers issue denial: Reports

ಲಿಸ್ಬನ್, ಸೆಪ್ಟೆಂಬರ್ 29: ಪೋರ್ಗುಗಲ್ ಮತ್ತು ಯುವೆಂಟಸ್ ಫುಟ್ಬಾಲ್ ಕ್ಲಬ್ ನ ಸ್ಟಾರ್ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೋ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಜರ್ಮನಿಯ ಮ್ಯಾಗಜಿನ್ 'ಡೆರ್ ಸ್ಪೀಗೆಲ್' ಈ ಬಗ್ಗೆ ವರದಿ ಪ್ರಕಟಿಸಿದೆ.

ವರದಿಯ ಪ್ರಕಾರ, 2009ರಲ್ಲಿ ಅಮೆರಿಕಾದ ಲಾಸ್ ವೇಗಸ್ ನ ಹೊಟೇಲ್ ರೂಮೊಂದರಲ್ಲಿ ರೊನಾಲ್ಡೋ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಕ್ಯಾಥರಿನ್ ಮಯೋರ್ಗಾ ಎನ್ನುವ 34ರ ಹರೆಯದ ಮಹಿಳೆಯೊಬ್ಬರು ಆರೋಪಿದ್ದಾರೆ. ಆದರೆ ರೊನಾಲ್ಡೋ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಆರೋಪಿಸುತ್ತಿರುವ ಕ್ಯಾಥರಿನ್ ಮಯೋರ್ಗಾ ಅವರು ಅತ್ಯಾಚಾರ ಮಾಡಿದ ಬಳಿಕ ರೊನಾಲ್ಡೋ ಪ್ರಕರಣವನ್ನು ಮುಚ್ಚಿಡುವಂತೆ ತನಗೆ 375,000 ಯುಎಸ್ ಡಾಲರ್ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ರೊನಾಲ್ಡೋ ಅವರ ಲಾಯರ್ ಸ್ಕರ್ಟ್ಜ್ ಬರ್ಗ್ಮಾನ್ ರೆಕ್ಸಾನ್ವಾಲ್ಟ್ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ತನ್ನ ಸಂಬಂಧಿಕರೊಂದಿಗೆ ರಜೆ ಕಳೆಯಲು ಲಾಸ್ ವೇಗಸ್ ಗೆ ತೆರಳಿದ್ದ ರೊನಾಲ್ಡೋ ಸಂಜೆ ಪಾರ್ಟಿಯೊಂದರಲ್ಲಿ ಮಯೋರ್ಗಾ ಅವರೊಂದಿಗೆ ಕಳೆದಿದ್ದರು. ಈ ವೇಳೆ ರೊನಾಲ್ಡೋ ತನ್ನನ್ನು ಅತ್ಯಾಚಾರ ಮಾಡಿದ್ದಾರೆ ಎಂದು ರೊನಾಲ್ಡೋ ಮೇಲೆ ಗಂಭೀರ ಆರೋಪ ಮಾಡುತ್ತಿರುವ ಮಯೋರ್ಗಾ ಹೇಳಿದ್ದಾರೆ.

ಘಟನೆಯನ್ನು ವಿವರಿಸುತ್ತ ಅಮೆರಿಕಾ ಮೂಲದ ಮಯೋರ್ಗಾ, 'ಆ ಸಂದರ್ಭ ನನ್ನ ಮುಂದೆ ಮೊಣಕಾಲೂರಿದ್ದ ರೊನಾಲ್ಡೋ, ನಾನು ಇದೊಂದು ಪರ್ಸೆಂಟ್ ಗೆ ಹೊರತಾಗಿ ಉಳಿದ 99 ಪರ್ಸೆಂಟ್ ಒಳ್ಳೆಯ ವ್ಯಕ್ತಿಯೇ ಎಂದು ಹೇಳಿದ್ದರು' ಎಂದಿದ್ದಾರೆ.

Story first published: Tuesday, October 2, 2018, 22:33 [IST]
Other articles published on Oct 2, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+