ಮೇಲ್ ಟುಡೇ ನೀಡಿದ ವರದಿಯ ಪ್ರಕಾರ ಪೋರ್ಚುಗಲ್ ನಾಯಕ ಮತ್ತು ಜುವೆಂಟಸ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊಗೆ ಮತ್ತೆ ಕೋವಿಡ್-19 ಪಾಸಿಟಿವ್ ದೃಢವಾಗಿದೆ. ಈ ಮೂಲಕ ಮುಂದಿನ ವಾರ ಬಾರ್ಸಿಲೋನಾ ವಿರುದ್ಧದ ತನ್ನ ಕ್ಲಬ್ನ ಚಾಂಪಿಯನ್ಸ್ ಲೀಗ್ ಪಂದ್ಯಗಳಲ್ಲಿ ರೊನಾಲ್ಡೊ ಭಾಗವಹಿಸುವುದು ಅನುಮಾನವಾಗಿದೆ.
35 ರ ಹರೆಯದ ರೊನಾಲ್ಡೊ ಅಕ್ಟೋಬರ್ 13 ರಂದು ಕೊರೊನಾ ಪರೀಕ್ಷೆ ನಡೆಸಿ ಪಾಸಿಟಿವ್ ದೃಢವಾಗಿತ್ತು. ಪರಿಣಾಮ ಸ್ವೀಡನ್ ವಿರುದ್ಧದ ಅಕ್ಟೋಬರ್ 14 ರ ಯುಇಎಫ್ಎ ನೇಷನ್ಸ್ ಲೀಗ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಆ ಸಮಯದಲ್ಲಿ, ರೊನಾಲ್ಡೊ ಯಾವುದೇ ರೋಗಲಕ್ಷಣಗಳನ್ನು ಕಾಣಿಸಿಕೊಂಡಿರಲಿಲ್ಲ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೋರ್ಚುಗಲ್ನ ಫುಟ್ಬಾಲ್ ಫೆಡರೇಶನ್ ಹೇಳಿದೆ.
ಕೋವಿಡ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ಆಟಗಾರನು ಆಡಲು ಅರ್ಹನಾಗಲು ಪಂದ್ಯಕ್ಕೆ ಕನಿಷ್ಠ ಒಂದು ವಾರದ ಮೊದಲು ಆಟಗಾರನು ಕೋವಿಡ್-19 ನೆಗೆಟಿವ್ ಆಗಿರಬೇಕು ಎಂದು ಯುಇಎಫ್ಎ ನಿಯಮಗಳು ಹೇಳುತ್ತವೆ ಎಂದು ವರದಿಗಳು ಸೂಚಿಸುತ್ತವೆ.
ಈ ಮೊದಲು ಅಕ್ಟೋಬರ್ 13ರಂದು, ರೊನಾಲ್ಡೊ ಅವರ ಸಕಾರಾತ್ಮಕ ಫಲಿತಾಂಶದಿಂದಾಗಿ ಪೋರ್ಚುಗಲ್ ತಂಡದ ಉಳಿದವರು ಪರೀಕ್ಷೆಗಳಿಗೆ ಒಳಗಾಗಿದ್ದರು ಎಂದು ಫೆಡರೇಶನ್ ಹೇಳಿದೆ, ಆದರೆ ಅವರೆಲ್ಲರೂ ನೆಗೆಟಿವ್ ಪರೀಕ್ಷೆ ನಡೆಸಿದ್ದರು ಮತ್ತು ಸ್ವೀಡನ್ ಪಂದ್ಯಕ್ಕೆ ಲಭ್ಯವಾಗುತ್ತಾರೆ.