
ಝಾಗ್ರೆಬ್: ನ್ಯಾಷನಲ್ ಲೀಗ್‌ನಲ್ಲಿ ಸ್ವೀಡನ್ ಮತ್ತು ಪೋರ್ಚುಗಲ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರೊವೇಷಿಯಾದ ಮಿಡ್‌ಫೀಲ್ಡರ್ ಮಾರ್ಸೆಲೊ ಬ್ರೋಜೋವಿಕ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಶುಕ್ರವಾರ (ನವೆಂಬರ್ 14) ಈ ವಿಚಾರವನ್ನು ಫೆಡರೇಶನ್ ತಿಳಿಸಿದೆ.
ಬುಧವಾರ ಟರ್ಕಿ ವಿರುದ್ಧದ ಪಂದ್ಯದ ವೇಳೆ ಕ್ರೊವೇಷಿಯಾದ ನಾಯಕ ಡೊಮಾಗೊಜ್ ವಿದಾಗೆ ಕೊರೊನಾ ಪಾಸಿಟಿವ್ ಬಂದಿದ್ದು ಕಂಡು ಬಂದಿತ್ತು. ಪಂದ್ಯ ನಡೆಯುತ್ತಿದ್ದಾಗ ಹಾಫ್ ಟೈಮ್‌ನಲ್ಲಿ ವಿದಾಗೆ ಕೊರೊನಾ ಸೋಂಕಿರುವುದು ಕಂಡು ಬಂದಿತ್ತು. ಆ ಬಳಿಕ ಅವರನ್ನು ಪಂದ್ಯದಿಂದ ಹೊರಗಿಡಲಾಗಿತ್ತು.
ಬ್ರೋಜೋವಿಕ್‌ಗೆ ಕೋವಿಡ್-19 ಪಾಸಿಟಿವ್ ಇರುವುದನ್ನು ಫೆಡರೇಶನ್, ಕ್ಲಬ್‌ನ ಗಮನಕ್ಕೂ ತಂದಿದೆ. ನೇಶನ್ಸ್ ಲೀಗ್ ಗ್ರೂಪ್ 3ಯಲ್ಲಿರುವ ಕ್ರೊವೇಷಿಯಾ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ 3 ಅಂಕ ಕಲೆ ಹಾಕಿದೆ. ಮೊದಲ ಸ್ಥಾನದಲ್ಲಿ ಪೋರ್ಚುಗಲ್ ಮತ್ತು ಫ್ರಾನ್ಸ್ ಇವೆ.
ಈಜಿಪ್ಟ್ ರಾಷ್ಟ್ರೀಯ ತಂಡದ ಆಟಗಾರ, ಲಿವರ್‌ಪೂಲ್‌ನ ಸ್ಟಾರ್ ಸ್ಟ್ರೈಕರ್ ಮೊಹಮ್ಮದ್ ಸಲಾಗೂ ಕೊರೊನಾ ಪಾಸಿಟಿವ್ ಬಂದಿದ್ದು ಇತ್ತೀಚೆಗೆ ವರದಿಯಾಗಿತ್ತು.