Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಂಪಿಯನ್ ತಂಡದ ನೈಜ ಚಾಂಪಿಯನ್ ವಿದಾಯ

ಬಾರ್ಸಿಲೋನಾ, ಜೂ.25: ವಿಶ್ವಕಪ್, ಯುರೋ ಕಪ್ ಹೀಗೆ ಎಲ್ಲಾ ಟೂರ್ನಿಗಳಲ್ಲೂ ಕಳೆದ ನಾಲ್ಕು ವರ್ಷ ಸ್ಪೇನ್ ತಂಡ ಮಿಂಚಲು ಕಾರಣರಾಗಿದ್ದ ಆಟಗಾರ ಡೇವಿಡ್ ವಿಲ್ಲಾ ಇನ್ಮುಂದೆ ಸ್ಪೇನ್ ತಂಡದಲ್ಲಿರುವುದಿಲ್ಲ. ವಿಶ್ವಕಪ್ ನ ಕೊನೆ ಲೀಗ್ ಪಂದ್ಯದ ಜತೆಗೆ ತಮ್ಮ ವೃತ್ತಿ ಬದುಕಿಗೂ ವಿಲ್ಲಾ ವಿದಾಯ ಹಾಡಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಸ್ಪೇನ್ ತಂಡ ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸ್ಪೇನ್‌ ತಂಡವು ಆಸ್ಟ್ರೇಲಿಯ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲ ಗೋಲು ದಾಖಲಿಸಿದ ವಿಲ್ಲಾ[ಸ್ಪಾನೀಷ್ ಉಚ್ಚಾರಣೆ: ಡಾವಿಡ್ ವಿಯಾ] ಪಂದ್ಯದ ನಂತರ ಕಣ್ಣೀರಿಡುತ್ತಾ ಮೈದಾನದಿಂದ ಹೊರನಡೆದರು.[ಟೂರ್ನಿಯಿಂದ ಚಾಂಪಿಯನ್ ಸ್ಪೇನ್ ಔಟ್]

ಸ್ಪೇನ್ ಪರವಾಗಿ 97ನೆ ಪಂದ್ಯಗಳನ್ನು ಆಡಿದ್ದ ವಿಲ್ಲಾ ತನ್ನ 59ನೇ ಅಂತಾರಾಷ್ಟ್ರೀಯ ಗೋಲು ದಾಖಲಿಸಿ ವಿದಾಯ ಹೇಳಿದರು. ಈ ಪಂದ್ಯವನ್ನು ಸ್ಪೇನ್ 3-0 ಅಂತರದಿಂದ ಗೆದ್ದುಕೊಂಡಿತ್ತು. ವಿಶ್ವಕಪ್ ಟೂರ್ನಿಯ ಮೊದಲೆರಡು ಲೀಗ್ ಪಂದ್ಯಗಳಲ್ಲಿ ವಿಲ್ಲಾ ಆಡಿದ್ದರೆ ಹಾಲಿ ಚಾಂಪಿಯನ್ ಗಳಿಗೆ ಈ ಗತಿ ಬರುತ್ತಿರಲಿಲ್ಲ ಎಂದು ಅಭಿಮಾನಿಗಳು ಗೊಣಗಿದ್ದರಲ್ಲೂ ಸತ್ಯವಿದೆ. ವಿಲ್ಲ ಸೂಪರ್ ಸ್ಟ್ರೈಕರ್ ಅಗಿದ್ದರು.

ವಿದಾಯದ ಪಂದ್ಯದಲ್ಲಿ ಮೊದಲ ಗೋಲು

ವಿದಾಯದ ಪಂದ್ಯದಲ್ಲಿ ಮೊದಲ ಗೋಲು

ಮೊದಲಾರ್ಧದ ಕೊನೆಯ ಹಂತದಲ್ಲಿ ಕೋಚ್ ವಿನ್ಸೆಂಟ್ ಡಿ ಬಾಸ್ಕ್‌ರಿಂದ ಬದಲಿ ಆಟಗಾರನಾಗಿ ಮೈದಾನಕ್ಕಿಳಿದಿದ್ದ ವಿಲ್ಲ ತನ್ನ ವಿದಾಯದ ಪಂದ್ಯದಲ್ಲಿ ಏಕೈಕ ಗೋಲನ್ನು ದಾಖಲಿಸಿದರು. ಸತತ ಎರಡು ಪಂದ್ಯಗಳನ್ನು ಸೋತಿದ್ದ ಸ್ಪೇನ್ ಪ್ರತಿಷ್ಠೆಯ ಪಂದ್ಯವನ್ನು ಗೆದ್ದುಕೊಂಡು ವಿಶ್ವಕಪ್‌ಗೆ ವಿದಾಯ ಹೇಳಿತು.

ನೋವಿನಿಂದ ಈ ಪಂದ್ಯವಾಡಿದ್ದೇನೆ

ನೋವಿನಿಂದ ಈ ಪಂದ್ಯವಾಡಿದ್ದೇನೆ

ರಾಷ್ಟ್ರೀಯ ತಂಡದ ಮೇಲೆ ನನಗೆ ಅತೀವ ಪ್ರೀತಿ. ತಂಡದೊಂದಿಗೆ ಆಡುವುದು ನನ್ನ ಕನಸಾಗಿತ್ತು. 55 ಹರೆಯದ ತನಕ ಆಡಬೇಕೆಂಬ ಆಸೆಯಿತ್ತು. ಆದರೆ, ಅದು ಸಾಧ್ಯವಿಲ್ಲ ಎಂದು ನನಗೆ ಗೊತ್ತಿದೆ. ವಿಶ್ವಕಪ್‌ನ ಮೊದಲೆರಡು ಪಂದ್ಯಗಳಲ್ಲಿ ಸೋತಾಗ ನನ್ನ ವಿದಾಯದ ಪಂದ್ಯದಲ್ಲಾದರೂ ಚೆನ್ನಾಗಿ ಆಡಬೇಕೆಂದು ನಿರ್ಧರಿಸಿದೆವು. ಈ ವರ್ಷದ ವಿಶ್ವಕಪ್‌ನಲ್ಲಿ ಮೊದಲ ಗೋಲು ದಾಖಲಿಸಿದ್ದಕ್ಕೆ ಸಂತೋಷವಾಗುತ್ತಿದೆ. ಸ್ಪೇನ್ ಜನತೆ ನಮ್ಮ ಮೇಲೆ ಭಾರೀ ನಿರೀಕ್ಷೆ ಇಟ್ಟಿದ್ದರು. ಇದೀಗ ಬರಿಗೈಯಲ್ಲಿ ತವರಿಗೆ ತೆರಳುವಂತಾಗಿದ್ದು ಬೇಸರ ತಂದಿದೆ ಎಂದು ವಿಲ್ಲ ಹೇಳಿದ್ದಾರೆ

ವಿಲ್ಲ ಸ್ಪೇನ್‌ನ ಅಗ್ರಮಾನ್ಯ ಆಟಗಾರ

ವಿಲ್ಲ ಸ್ಪೇನ್‌ನ ಅಗ್ರಮಾನ್ಯ ಆಟಗಾರ

2008ರ ಯುರೋಪಿಯನ್ ಚಾಂಪಿಯನ್ ಹಾಗೂ 2010ರ ಫಿಫಾ ವಿಶ್ವಕಪ್‌ನಲ್ಲಿ ಟಾಪ್ ಗೋಲ್ ಸ್ಕೋರರ್ ಎನಿಸಿಕೊಂಡಿದ್ದ ವಿಲ್ಲ ಸ್ಪೇನ್‌ನ ಅಗ್ರಮಾನ್ಯ ಆಟಗಾರ.

 ಪ್ರಮುಖ ತಂಡಗಳಲ್ಲಿ ಆಡಿರುವ ವಿಲ್ಲಾ

ಪ್ರಮುಖ ತಂಡಗಳಲ್ಲಿ ಆಡಿರುವ ವಿಲ್ಲಾ

32 ವರ್ಷ ವಯಸ್ಸಿನ ಸ್ಪಾನಿಷ್ ತಾರೆ ಡೇವಿಡ್ ವಿಲ್ಲ ಸ್ಯಾಂಚೇಜ್ ಸ್ಫೋರ್ಟಿಂಗ್ ಜಿಯಾನ್, ಜರಾಗೋಜಾ, ವಲೇನ್ಸಿಯಾ, ಬಾರ್ಸಿಲೋನಾ, ಅಟ್ಲೆಟಿಕೋ ಮ್ಯಾಡ್ರಿಡ್, ನ್ಯೂಯಾರ್ಕ್ ಸಿಟಿ, ಮೆಲ್ಬೋರ್ನ್ ಸಿಟಿ ಪರ ಆಡಿದ್ದಾರೆ.

ಸ್ಪೇನ್ ಗೆ ಮರೆಯಲಾರದ ಪಾಠ

ಸ್ಪೇನ್ ಗೆ ಮರೆಯಲಾರದ ಪಾಠ

ವಿಲ್ಲಾ ಹಾಗೂ ಟೊರೆಸ್ ರನ್ನು ಸಮರ್ಥವಾಗಿ ಬಳಸಿಕೊಳ್ಳದ ಕೋಚ್ ವಿನ್ಸೆಂಟ್ ಡಿ ಬಾಸ್ಕ್‌ ಅವರ ಸ್ಪೇನಿನ ಟಿಕಿ ಟಾಕಾ ರಣತಂತ್ರವೇ ಮುಳುವಾಯಿತು. ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಡಿಯಾಗೋ ಕೋಸ್ಟಾ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡು ಮುಂಪಡೆ ಆಟಗಾರನಾಗಿ ಆಡಿಸಿದ್ದು ಮುಳುವಾಯಿತು. ಇನಿಯಾಸ್ಟಾ, ಸಿಲ್ವಾಗೆ ಸರಿಯಾದ ಸಾಥಿ ಸಿಕ್ಕಿರಲಿಲ್ಲ.

Story first published: Wednesday, January 3, 2018, 10:13 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+