ಮೆಸ್ಸಿ ಮಿಂಚಿನಾಟದ ನಡುವೆ ಲಾ ಲೀಗಾ ಮಹಾಸಮರ ಸಮಬಲ

ಬೆಂಗಳೂರು, ಮೇ 07: ಸ್ಪೇನಿನ ಲಾ ಲೀಗಾದ ಎಲ್ ಕ್ಲಾಸಿಕೋ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ ಕಂಡಿದೆ. ಗೆಲುವಿನ ಹೊಸ್ತಿಲಲ್ಲಿದ್ದ ಬಾರ್ಸಿಲೋನಾ ತಂಡದ ವಿರುದ್ಧ ರಿಯಲ್ ಮ್ಯಾಡ್ರಿಡ್ ನ ಗರೇತ್ ಬೇಲ್ ಅವರು ಕೊನೆ ಹತ್ತು ನಿಮಿಷದಲ್ಲಿ ಗೋಲು ಗಳಿಸಿ, ಬಾರ್ಸಿಲೋನಾದ ಜಯಕ್ಕೆ ಬ್ರೇಕ್ ಹಾಕಿದರು. ನೆಚ್ಚಿನ ತಾರೆಯರ ಅದ್ಭುತ ಆಟ, ರಿಯಲ್ ಮ್ಯಾಡ್ರಿಡ್ ಆಟಗಾರರ ಒರಟಾಟ, ಹಳದಿ ಕಾರ್ಡ್, ರೆಡ್ ಕಾರ್ಡ್ ಗಳ ಭರಾಟೆ ನಡುವೆ ಉತ್ತಮ ಫುಟ್ಬಾಲ್ ನೋಡಿದ ಪ್ರೇಕ್ಷಕರು ಥ್ರಿಲ್ ಆದರು.
ಚಾಂಪಿಯನ್ಸ್ ತಂಡ ಬಾರ್ಸಿಲೋನಾ ಸದ್ಯ ಲಾ ಲೀಗಾದಲ್ಲಿ 35 ಪಂದ್ಯಗಳಿಂದ 87 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನೂ ಸೋಲಿನ ಕಹಿ ಅನುಭವಿಸಿದ ಬಾರ್ಸಿಲೋನಾ ವಿರುದ್ಧ ಡ್ರಾ ಸಾಧಿಸಿದ ತೃಪ್ತಿಯಲ್ಲಿರುವ ರಿಯಲ್ ಮ್ಯಾಡ್ರಿಡ್ ತಂಡವು 72 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಅಟ್ಲೆಟಿಕೊ ಡಿ ಮ್ಯಾಡ್ರಿಡ್ ತಂಡ 75 ಅಂಕಗಳೊಂದಿಗೆ 2ನೇ ಸ್ಥಾನ ಗಳಿಸಿದೆ.
ಲಾ ಲೀಗಾ ಸಂಪೂರ್ಣ ಅಂಕಪಟ್ಟಿ | ಎಲ್ ಕ್ಲಾಸಿಕೋ ಪಂದ್ಯದ ಪೂರ್ಣ ಸ್ಕೋರ್ ಕಾರ್ಡ್
ಎಲ್ ಕ್ಲಾಸಿಕೋ: ಪಂದ್ಯ ಆರಂಭವಾದ 10 ನಿಮಿಷದಲ್ಲೇ ಬಾರ್ಸಿಲೋನಾದ ಲೂಯಿಸ್ ಸ್ವಾರೇಜ್ ಅವರು ರೊಬರ್ಟೋ ಕೊಟ್ಟ ಪಾಸನ್ನು ಸುಲಭವಾಗಿ ಗೋಲ್ ಪೋಸ್ಟ್ ಯೊಳಗೆ ಕಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, ನಂತರದ ಐದು ನಿಮಿಷಗಳಲ್ಲೇ ರಿಯಲ್ ಮ್ಯಾಡ್ರಿಡ್ ತಂಡದ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊ ಅವರು ಗೋಲು ಗಳಿಸಿ ಸಮಬಲ ಸಾಧಿಸಿದರು.
ಆದರೆ, ಕಾಲಿಗೆ ಗಾಯ ಮಾಡಿಕೊಂಡ ರೊನೊಲ್ಡೊ ಮೈದಾನದ ಹೊರಕ್ಕೆ ಹೋಗಿದ್ದು ರಿಯಲ್ ತಂಡಕ್ಕೆ ಕೊಂಚ ಹಿನ್ನಡೆಯುಂಟಾಯಿತು.

ಎರಡನೇ ಅವಧಿಗೂ ಮುನ್ನ ಬಾರ್ಸಿಲೋನಾದ ರೊಬಾರ್ಟೋ ಅವರು ರೆಡ್ ಕಾರ್ಡ್ ಪಡೆದು ಮೈದಾನದಿಂದ ಹೊರಕ್ಕೆ ಹೋಗಬೇಕಾಯಿತು. 52ನೇ ನಿಮಿಷದಲ್ಲಿ ಬಾರ್ಸಿಲೋನಾದ ಲಿಯೊನೆಲ್ ಮೆಸ್ಸಿ ಅವರು ಅದ್ಭುತ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದರು. ಇದು ಎಲ್ ಕ್ಲಾಸಿಕೋ ಪಂದ್ಯಗಳಲ್ಲಿ ಮೆಸ್ಸಿ ಗಳಿಸಿದ 26ನೇ ದಾಖಲೆ ಗೋಲಾಗಿತ್ತು.
ಆದರೆ, ಪಂದ್ಯದ 72ನೇ ನಿಮಿಷದಲ್ಲಿ ಗರೇತ್ ಬೇಲ್ ಅವರು ಗೋಲು ಗಳಿಸಿ, ಬಾರ್ಸಿಲೋನಾದ ಗೆಲುವಿನ ಆಸೆಗೆ ತಣ್ಣಿರೆರಚಿದರು. ಇನ್ನೂ ಮೂರು ಪಂದ್ಯಗಳು ಲೀಗ್ ನಲ್ಲಿ ಬಾಕಿ ಇದ್ದು, ಬಾರ್ಸಿಲೋನಾ ತನ್ನ ಗೆಲುವಿನ ನಾಗಲೋಟ ಮುಂದುವರೆಸುವ ನಿರೀಕ್ಷೆಯಿದೆ.
ಒಟ್ಟಾರೆ, ಎಲ್ ಕ್ಲಾಸಿಕೋ ಪಂದ್ಯದಲ್ಲಿ ಅದ್ಭುತ ಫುಟ್ಬಾಲ್ ಆಟ, ಇನಿಯಸ್ಟಾ ಅವರ ಕಡೆ ಪಂದ್ಯ(ಎಲ್ ಕ್ಲಾಸಿಕೋ), ಐದಾರು ಹಳದಿ ಕಾರ್ಡ್, ಒಂದು ರೆಡ್ ಕಾರ್ಡ್, ಆಟಗಾರರ ಮಾತಿನ ಚಕಮಕಿ, ಒರಟಾಟದ ನಡುವೆ ಭರಪೂರ ಮನರಂಜನೆಯನ್ನು ತಂದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications