For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಈ ವೃದ್ಧ ದಂಪತಿಯ ಫುಟ್‌ಬಾಲ್ ಪ್ರೀತಿಗೆ ವಯಸ್ಸೇ ಆಗಿಲ್ಲ

By Manjunatha
ಈ ವೃದ್ಧ ದಂಪತಿ ಏನು ಮಾಡಲು ಹೊರಟಿದ್ದಾರೆ ಗೊತ್ತಾ ? | Oneindia Kannada
Elderly couple set go to Russia to watch their 10nth FIFA world cup

ಬೆಂಗಳೂರು, ಜೂನ್ 07: ವಯಸ್ಸಾದ ಮೇಲೆ ಮಂದಿರಕ್ಕೋ, ಮಠಕ್ಕೋ , ಕಾಶಿಗೋ, ರಾಮೇಶ್ವರಕ್ಕೋ ಹೋಗುವುದು ಸಾಮಾನ್ಯ ಆದರೆ ಈ ವೃದ್ಧ ದಂಪತಿ ಫುಟ್‌ಬಾಲ್ ವಿಶ್ವಕಪ್ ನೋಡಲು ರಷ್ಯಾಕ್ಕೆ ಹೊರಟು ನಿಂತಿದ್ದಾರೆ.

ಹೌದು, ಕೊಲ್ಕತ್ತ ಮೂಲದ ಪನ್ನಾಲಾಲ್ ಹಾಗೂ ಚೈತಾಲಿ ಚಟರ್ಜಿ ಅವರು ತಮ್ಮ 10 ನೇ ವಿಶ್ವಕಪ್ ಫುಟ್‌ಬಾಲ್ ಅನ್ನು ಕ್ರೀಡಾಂಗಣಕ್ಕೆ ಹೋಗಿ ನೋಡಲು ಸಜ್ಜಾಗಿದ್ದಾರೆ. ಟಿಕೆಟ್ ಕೂಡ ಖರೀದಿ ಮಾಡಿಕೊಂಡಿದ್ದಾರೆ.

ಫೀಫಾ ವಿಶ್ವಕಪ್ 2018 : ವೇಳಾಪಟ್ಟಿ | ತಂಡಗಳು

85 ವರ್ಷದ ಪನ್ನಾಲಾಲ್, 75 ವರ್ಷದ ಚೈತಾಲಿ ಚಟರ್ಜಿ 1982 ರಿಂದಲೂ ವಿಶ್ವಕಪ್ ಫುಟ್‌ಬಾಲ್ ಅನ್ನು ಕ್ರೀಡಾಂಗಣಕ್ಕೆ ಹೊಗಿ ನೋಡಲು ಶುರುವಿಟ್ಟುಕೊಂಡರು. ಇದು ಅವರ 10 ವಿಶ್ವಕಪ್.

ಇವರೇನು ಶ್ರೀಮಂತ ಕುಟುಂಬದವರಲ್ಲ, ವಿಶ್ವಕಪ್‌ಗೆ ಹೋಗಲು ಹಣ ಹೊಂದಿಸಲೆಂದೆ ಬಜೆಟ್ ಹಾಕಿಕೊಳ್ಳುತ್ತಾರೆ. ಅದರಂತೆ ಜೀವಿಸುತ್ತಾರೆ. ಹೊಟ್ಟೆ-ಬಟ್ಟೆ ಕಟ್ಟಿ ಹಣ ಹೊಂದಿಸಿ ವಿಶ್ವಕಪ್ ನೋಡಲು ಹೋಗುತ್ತಾರೆ. ಇವರ ಫುಟ್‌ಬಾಲ್ ಪ್ರೀತಿ ಅಂತಹದ್ದು. ಎಷ್ಟೆಂದರೂ ಕೊಲ್ಕತ್ತದವರಲ್ಲವೇ.

ಈ ವೃದ್ಧ ದಂಪತಿ ಬ್ರೆಜಿಲ್ ತಂಡದ ಅಪ್ಪಟ ಅಭಿಮಾನಿಗಳು. ಹತ್ತು ವಿಶ್ವಕಪ್‌ ನೋಡಿರುವ ಇವರು ಸಾಕಷ್ಟು ಚರಿತ್ರಾತ್ಮಕ ಘಟನೆಗಳಿಗೆ ಸಾಕ್ಷಿಯಾಗಿದ್ದಾರೆ. ಅದರಲ್ಲಿ ಇವರು ಎಂದು ಮರೆಯಲು ಇಚ್ಚೆಪಡದೇ ಇರುವುದು 'ಹ್ಯಾಂಡ್ ಆಫ್ ಗಾಡ್' (ಮರಡೋನಾ ಕೈ (?)ಇಂದ ಹೊಡೆದ ಗೋಲು) ಅಂತೆ.

ಈ ಬಾರಿ ಇವರಿಗೆ ಮೂರು ಟಿಕೆಟ್‌ಗಳನ್ನು ಮಾತ್ರ ಖರೀದಿಸಲು ಸಾಧ್ಯವಾಗಿದೆ. ಆದರೆ ಇನ್ನೂ ಹೆಚ್ಚಿನ ಟಿಕೆಟ್‌ಗಾಗಿ ಫಿಫಾಗೆ ಮನವಿ ಮಾಡಿದ್ದಾರೆ. ಅಂಡರ್ 17 ವಿಶ್ವಕಪ್ ನಡೆದಾಗ ಫಿಫಾ ಇವರಿಗೆ ವಿಶೇಷ ಆತಿಥ್ಯ ನೀಡಿತ್ತು ಹಾಗಾಗಿ ಫಿಫಾ ಇವರ ಮನವಿಯನ್ನು ಮನ್ನಿಸುವ ವಿಶ್ವಾಸದಲ್ಲಿದ್ದಾರೆ ಈ ವೃದ್ಧ ದಂಪತಿ.

ಜೂನ್ 14ಕ್ಕೆ ಈ ದಂಪತಿ ರಷ್ಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು

ನೋಡುವ ಆಸೆ ಅವರಿಗಿದೆ. 'ಬಹುಷಃ ಇದು ನಮ್ಮ ಕೊನೆಯ ವಿಶ್ವಕಪ್ ಆಗಬಹುದು' ಎಂದು ನೋವಿನ ಧ್ವನಿಯಲ್ಲೇ ನುಡಿಯುತ್ತಾರೆ ಪನ್ನಾಲಾಲ್. 2022ರ ವಿಶ್ವಕಪ್‌ ಹೊತ್ತಿಗೆ ಅವರಿಗೆ 90 ಆಗಿರುತ್ತದೆ.

Story first published: Thursday, June 7, 2018, 18:49 [IST]
Other articles published on Jun 7, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+