

ಮಾಸ್ಕೋ, ಜೂ. 24: ಫೀಫಾ ವಿಶ್ವಕಪ್ ಗ್ರೂಪ್ ಜಿಯ ಇಂಗ್ಲೆಂಡ್-ಪನಾಮಾ ಮುಖಾಮುಖಿಯಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿಕೇನ್ ಹ್ಯಾಟ್ರಿಕ್ ಗೋಲ್ ನೆರವಿನಿಂದ ಇಂಗ್ಲೆಂಡ್ 6-1ರ ಭರ್ಜರಿ ಗೆಲುವು ದಾಖಲಿಸಿದೆ. 22, 46, 62ನೇ ನಿಮಿಷದಲ್ಲಿ ಗೋಲ್ ದಾಖಲಿಸಿ ಹ್ಯಾರಿಕೇನ್ ಹ್ಯಾಟ್ರಿಕ್ ಸಾಧನೆ ಮೆರೆದರು.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಇದನ್ನು ಹೊರತುಪಡಿಸಿ ಇಂಗ್ಲೆಂಡ್ ಪರ 8ನೇ ನಿಮಿಷದಲ್ಲಿ ಜಾನ್ ಸ್ಟೋನ್ಸ್, 36ನೇ ನಿಮಿಷದಲ್ಲಿ ಜೆಸ್ಸಿ ಲಿಂಗಾರ್ಡ್, 40ನೇ ನಿಮಿಷದಲ್ಲಿ ಮತ್ತೆ ಜಾನ್ ಸ್ಟೋನ್ಸ್ ಗೋಲ್ ಬಾರಿಸಿ ತಂಡಕ್ಕೆ 6-1ರ ಮುನ್ನಡೆ ತಂದುಕೊಟ್ಟರು. ಪನಾಮಾ ಪರ ಗೋಲ್ ಬಾರಿಸಿದ್ದು ಫೆಲಿಪ್ ಬಲೋಯ್ ಅವರು 78ನೇ ನಿಮಿಷದಲ್ಲಿ.
ಇಂಗ್ಲೆಂಡ್ (3-5-2): ಜೋರ್ಡಾನ್ ಪಿಕ್ಫರ್ಡ್; ಕೈಲ್ ವಾಕರ್, ಜಾನ್ ಸ್ಟೋನ್ಸ್; ಹ್ಯಾರಿ ಮ್ಯಾಗೈರ್; ಜೋರ್ಡಾನ್ ಹೆಂಡರ್ಸನ್, ಕೀರನ್ ಟ್ರಿಪ್ಪಿಯರ್, ಆಶ್ಲೆ ಯಂಗ್, ಜೆಸ್ಸೆ ಲಿಂಗಾರ್ಡ್, ರುಬಿನ್ ಲಾಫ್ಟಸ್-ಚೀಕ್; ಹರೀಮ್ ಸ್ಟರ್ಲಿಂಗ್, ಹ್ಯಾರಿ ಕೇನ್ (ಕ್ಯಾಪ್ಟನ್) ಪಂದ್ಯವನ್ನಾಡಿದ್ದರು.
ಪನಾಮಾ (4-5-1): ಜೇಮೀ ಪೆನೆಡೋ; ಮೈಕೆಲ್ ಮುರಿಲ್ಲೊ, ರೋಮನ್ ಟಾರ್ರೆಸ್ (ಕ್ಯಾಪ್ಟನ್), ಫಿಡೆಲ್ ಎಸ್ಕೋಬರ್, ಎರಿಕ್ ಡೇವಿಸ್; ಗೇಬ್ರಿಯಲ್ ಗೊಮೆಜ್, ಎಡ್ಗರ್ ಬಾರ್ಸೆನಾಸ್, ಆರ್ಮಾಂಡೋ ಕೂಪರ್, ಅನೈಬಲ್ ಗೊಡೊಯ್, ಜೋಸ್ ಲೂಯಿಸ್ ರೊಡ್ರಿಗಜ್; ಬ್ಲಾಸ್ ಪೆರೆಜ್ ಕಣಕ್ಕಿಳಿದಿದ್ದರು.