For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

'ಕೋಕಾ-ಕೋಲಾ'ಕ್ಕೆ ಒದ್ದ ರೊನಾಲ್ಡೋ, ಕಂಪನಿಗೆ ಭಾರೀ ನಷ್ಟ: ವಿಡಿಯೋ

Euro 2020: Coca-Cola Lose USD 4 Billion After Cristiano Ronaldo Moves Bottle and Endorses Water

ಬುಡಾಪೆಸ್ಟ್‌: ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಅವರ ಒಂದೇ ಒಂದು ನಡೆಯಿಂದಾಗಿ ದೈತ್ಯ ಕಂಪನಿ ಕೋಕಾ-ಕೋಲಾಗೆ ಸುಮಾರು 4 ಬಿಲಿಯನ್ ಡಾಲರ್ (2,93,24,00,00,000 ರೂ.) ನಷ್ಟವಾಗಿದೆ. ಸುದ್ದಿಗೋಷ್ಠಿ ವೇಳೆ ರೊನಾಲ್ಡೋ ತೋರಿದ ಒಂದು ನಡೆಯಿಂದಾಗಿ ಕೋಕಾ-ಕೋಲಾಕ್ಕೆ ಇಷ್ಟು ದೊಡ್ಡ ನಷ್ಟವಾಗಿದೆ.

ಮಂಗಳವಾರ (ಜೂನ್ 15) ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಪಂದ್ಯದಲ್ಲಿ ಪೋರ್ಚುಗಲ್ ಮತ್ತು ಹಂಗೆರಿ ತಂಡಗಳು ಕಾದಾಡಿದ್ದವು. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆದಿತ್ತು. ಈ ವೇಳೆ ಕ್ರಿಸ್ಚಿಯಾನೊ ರೊನಾಲ್ಡೋ ಕೋಕಾ-ಕೋಲಾ ಬಾಟಲಿಯನ್ನು ಬದಿಗೆ ಸರಿಸಿದ್ದರು. ಇದರಿಂದಲೇ ಕಂಪನಿಗೆ ಅಪಾರ ನಷ್ಟವಾಗಿದೆ.

ಸುದ್ದಿಗೋಷ್ಠಿಯಲ್ಲಿ ಕುಳಿತುಕೊಳ್ಳಲು ಬಂದ ರೊನಾಲ್ಡೋ ಮುಂದೆ ಎರಡು ಕೋಕಾ-ಕೋಲಾ ಬಾಟಲಿಗಳು ಮತ್ತೊಂದು ನೀರಿನ ಬಾಟಲಿ ಇತ್ತು. ಸುದ್ದಿಗೋಷ್ಠಿ ಆರಂಭವಾಗಬೇಕು ಅನ್ನುವಾಗ ರೊನಾಲ್ಡೋ ಎರಡು ಕೋಕಾ-ಕೋಲಾ ಬಾಟಲಿಗಳನ್ನು ಡೆಸ್ಕ್‌ನ ಬದಿಗಿರಿಸಿ ನೀರಿನ ಬಾಟಲಿ ಮೇಲೆತ್ತಿ 'ಅದರ ಬದಲು ಇದನ್ನು ಕುಡಿಯಿರಿ' ಎಂದಿದ್ದರು. ಇದು ಕೋಕಾ-ಕೋಲಾ' ಕಂಪನಿಗೆ ದೊಡ್ಡ ಹೊಡೆತ ಕೊಟ್ಟಿದೆ.

ಹಂಗೆರಿಯ ಬುಡಾಪೆಸ್ಟ್‌ನಲ್ಲಿರುವ ಪುಸ್ಕಸ್ ಅರೆನಾದಲ್ಲಿ ಮಂಗಳವಾರ ನಡೆದ ಯೂರೋ 2020 ಗ್ರೂಪ್ 'ಎಫ್‌' ಆರಂಭಿಕ ಪಂದ್ಯದಲ್ಲಿ ಹಂಗೆರಿ ವಿರುದ್ಧ ಪೋರ್ಚುಗಲ್ 3-0ಯ ಜಯ ದಾಖಲಿಸಿದೆ. ಪೋರ್ಚುಗಲ್ ಪರ ರಾಫೌಲ್ ಗೆರೆರೋ 84ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ರೊನಾಲ್ಡೋ 87 (ಪೆನಾಲ್ಟಿ) ಮತ್ತು 90+2ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೆಲುವು ಸಾರಿದರು.

Story first published: Wednesday, June 16, 2021, 10:16 [IST]
Other articles published on Jun 16, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+