ಐಎಸ್‌ಎಲ್ 2019: ಹೈದರಾಬಾದ್ ನಲ್ಲಿ ಜಯದ ಲಯಕ್ಕಾಗಿ ಕಾದಿರುವ ಗೋವಾ

ಹೈದರಾಬಾದ್, ಡಿಸೆಂಬರ್ 8: ಭಾನುವಾರ (ಡಿಸೆಂಬರ್ 8) ಇಲ್ಲಿನ ಜಿಎಂಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡ ಹೈದರಾಬಾದ್ ತಂಡದ ವಿರುದ್ಧ ಜಯ ಗಳಿಸುವ ಗುರಿ ಹೊಂದಿದೆ.
ಈ ಹಿಂದಿನ ಎರಡು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಲು ಶಕ್ಯವಾಗಿರುವ ಸರ್ಗಿಯೋ ಲೊಬೆರಾ ಪಡೆ, ತಳ ಮಟ್ಟದಲ್ಲಿರುವ ಹೈದರಾಬಾದ್ ವಿರುದ್ಧ ಜಯ ಗಳಿಸಿದರೆ ಅಗ್ರ ನಾಲ್ಕು ಸ್ಥಾನಕ್ಕೆ ಪ್ರವೇಶಿಸಲಿದೆ.
ಆರು ಪಂದ್ಯಗಳನ್ನು ಆಡಿರುವ ಹೈದರಾಬಾದ್ ಕೇವಲ ನಾಲ್ಕು ಅಂಕಗಳನ್ನು ಗಳಿಸಿದೆ. ಒಂಬತ್ತು ಅಂಕಗಳನ್ನು ಗಳಿಸಿ ಐದನೇ ಸ್ಥಾನದಲ್ಲಿರುವ ಗೋವಾ ತಂಡವನ್ನು ಮಣಿಸಿದರೆ ಕೆಲವು ತಂಡಗಳನ್ನು ಹಿಂದಿಕ್ಕಲಿದೆ. ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ರಾಬಿನ್ ಸಿಂಗ್ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್ ಸಿ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿತ್ತು.

ಹೈದರಾಬಾದ್ ತಂಡದ ಮಿಡ್ ಫೀಲ್ಡ್ ವಿಭಾಗದ ಶಕ್ತಿ ಕ್ಷೀಣಗೊಂಡಿರುವುದೇ ತಂಡದ ಹಿನ್ನಡೆಗೆ ಕಾರಣವಾಗಿದೆ. ಆತಿಥೇಯ ತಂಡವು ಇದುವರೆಗೂ 13 ಗೋಲುಗಳನ್ನು ನೀಡಿದ್ದು ಕೋಚ್ ಫಿಲ್ ಬ್ರೌನ್ ಅವರಿಗೆ ಚಿಂತೆಯನ್ನುಂಟು ಮಾಡಿದೆ. ಒಂದು ಸಮಾಧಾನಕರ ಸಂಗತಿಯೆಂದರೆ ಬ್ರೌನ್ ಅವರಿಗೆ ತಮ್ಮ ತಂಡದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂಬತ್ತು ದಿನಗಳ ಗಡುವು ಸಿಕ್ಕಿತ್ತು.
ಸ್ಟ್ರೈಕರ್ ಗಿಲ್ಸ್ ಬಮ್ಸ್ ಅವರ ಫಿಟ್ನೆಸ್ ಉತ್ತಮಗೊಂಡಿದ್ದು, ಮಾರ್ಸೆಲಿನೊ ಆದಿಲ್ ಖಾನ್ ಅವರೊಂದಿಗೆ ಅಂಗಣಕ್ಕಿಳಿಯುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವಾಗ ಖಾನ್ ಗಾಯಗೊಂಡಿದ್ದರು. ಡಿಫೆಂಡರ್ ಸಾಹಿಲ್ ಪನ್ವಾರ್ ಹಾಗೂ ಗುರ್ತೇಜ್ ಸಿಂಗ್ ಅಮಾನತುಗೊಂಡಿದ್ದರಿಂದ ನಾಳೆಯ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈಗ ಬ್ರೌನ್ ಅವರಿಗೆ ನಿಖಿಲ್ ಪೂಜಾರಿ ಹಾಗೂ ಆಶೀಶ್ ರಾಯ್ ಅವರನ್ನು ಆಧರಿಸಬೇಕಾಗಿದೆ.
''ಜ್ಯಗತ್ತಿನ ಪ್ರತಿಯೊಂದು ಕೋಚ್ ಕೂಡ ಗಾಯ ಹಾಗೂ ಅಮಾನತಿನ ಸಮಸ್ಯೆಯನ್ನು ಎದುರಿಸುತ್ತಾರೆ. ನಮ್ಮ ತಾಣದಲ್ಲಿ ಅತ್ಯಂತ ತೃಪ್ತಿದಾಯಕ ಅಂಶ ಎಂದರೆ ನಮ್ಮ ಚಿಕಿತ್ಸಾ ಕೊಠಡಿ ಈಗ ಯಾರೂ ಇಲ್ಲ. ಆದರೆ ಇಬ್ಬರು ಆಟಗಾರರು ಅಮಾನತು ಪಟ್ಟಿಯಲ್ಲಿದ್ದಾರೆ. ಯಾರು ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ನಮ್ಮ ತಂಡದ ಶಕ್ತಿಯಲ್ಲಿ ಈಗ ಪರಿಪೂರ್ಣತೆ ಇದೆ,'' ಎಂದು ಬ್ರೌನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications