For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಸೆನೆಗಲ್ ಗೆಲ್ಲುವ ಸಾಧ್ಯತೆಗಳೆಷ್ಟು?

FIFA world cup 2018 : Senegal world cup fixtures squad group guide | Oneindia Kannada
Fifa 2018 world cup team analysis senegal in group h

ಬೆಂಗಳೂರು, ಜೂನ್ 6: ಫೀಫಾ ಫುಟ್ ಬಾಲ್ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಅರ್ಹತೆ ಪಡೆದ ಎಲ್ಲ ತಂಡಗಳು ಈಗಾಗಲೇ ರಷ್ಯಾದಲ್ಲಿ ಜೂನ್ 14 ರಿಂದ ಜುಲೈ 15 ರವರೆಗೆ ನಡೆಯಲಿರುವ ಅಭೂತಪೂರ್ವ ವಿಶ್ವಕಪ್ ಪಂದ್ಯಾವಳಿಗಾಗಿ ತಮ್ಮ ತಯಾರಿಯನ್ನು ಜೋರಾಗಿ ನಡೆಸಿವೆ.

ಪ್ರಸ್ತುತ ಫೀಫಾ ವಿಶ್ವಕಪ್‌ಗೆ ಒಟ್ಟು 32 ದೇಶಗಳ ತಂಡಗಳು ಆಡಲು ಅರ್ಹತೆ ಪಡೆದಿವೆ. ತಲಾ ನಾಲ್ಕು ತಂಡಗಳಂತೆ ಒಟ್ಟು ಎಂಟು ಗ್ರೂಪ್‌ಗಳ ಮಧ್ಯೆ ಪಂದ್ಯಗಳು ನಡೆಯಲಿವೆ.

ಪ್ರತಿ ಗುಂಪಿನ ಎರಡು ಟಾಪ್ ತಂಡಗಳು ನಾಕ್ ಔಟ್ ಹಂತಕ್ಕೆ (16 ತಂಡಗಳ ಸುತ್ತು) ಪ್ರವೇಶ ಪಡೆಯಲಿವೆ. ಕೊನೆಗೆ ಜುಲೈ 15 ರಂದು ಮಾಸ್ಕೋದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿಶ್ವ ವಿಜೇತರು ಯಾರು ಎಂಬುದು ನಿರ್ಧಾರವಾಗಲಿದೆ.

ಆರಂಭದಲ್ಲಿ ಜರ್ಮನಿ ಹಾಗೂ ಬ್ರೆಜಿಲ್ ತಂಡಗಳು ಫೇವರಿಟ್ ಗೆಲ್ಲುವ ಕುದುರೆಗಳಾಗಿ ಎಂಟ್ರಿ ಕೊಟ್ಟಿದ್ದರೂ, ಇನ್ನುಳಿದ ಬಲಿಷ್ಠ ತಂಡಗಳಾದ ಅರ್ಜೆಂಟಿನಾ, ಸ್ಪೇನ್ ಹಾಗೂ ಬೆಲ್ಜಿಯಂ ತಂಡಗಳನ್ನು ಹೇಗೆ ಎದುರಿಸಲಿವೆ ಎಂಬ ಕುತೂಹಲ ಎಲ್ಲ ಫುಟ್ ಬಾಲ್ ಪ್ರೇಮಿಗಳಲ್ಲಿ ಮನೆ ಮಾಡಿದೆ.

ಗ್ರೂಪ್ 'ಎ' ನಲ್ಲಿ ಅತಿಥೇಯ ರಷ್ಯಾ, ಆರಂಭಿಕ ಪಂದ್ಯದಲ್ಲಿ ಏಷ್ಯಾದ ಪ್ರಬಲ ಎದುರಾಳಿ ಸೌದಿ ಅರೇಬಿಯಾದೊಂದಿಗೆ ಸೆಣಸಲಿದೆ. ಈ ಹಣಾಹಣಿ ಜೂನ್ 14 ರಂದು ಲುಜ್ನಿಕಿಯಲ್ಲಿ ನಡೆಯಲಿದೆ.

ವಿಶ್ವಕಪ್ ಆರಂಭಕ್ಕೂ ಮುನ್ನ ಮೈಖೇಲ್ ವೆಬ್‌ಸೈಟ್ ನಿಂದ ಪ್ರಮುಖ ಟೀಂ ಮಾಹಿತಿ ಹಾಗೂ ರೇಟಿಂಗ್ ನಿಮಗಾಗಿ ನೀಡುತ್ತಿದ್ದೇವೆ..

ದೇಶ : ಸೆನೆಗಲ್.
ಗ್ರೂಪ್: 'ಎಚ್'.
ಗ್ರೂಪ್ನ ಉಳಿದ ತಂಡಗಳು: ಕೊಲಂಬಿಯಾ, ಪೋಲಾಂಡ್ ಹಾಗೂ ಜಪಾನ್.
ಪಂದ್ಯಾವಳಿ ವೇಳಾಪಟ್ಟಿ: ಸೆನೆಗಲ್ Vs ಪೋಲಾಂಡ್, ಜೂನ್ 19 ರಂದು ರಾತ್ರಿ 8.30ಕ್ಕೆ, ಮಾಸ್ಕೋ ಸ್ಪಾರ್ಟಾಕ್ ನಲ್ಲಿ.
ಸೆನೆಗಲ್ Vs ಜಪಾನ್, ಜೂನ್ 24 ರಂದು ರಾತ್ರಿ 8.30ಕ್ಕೆ, ಎಕಾಟೆರಿನ್‌ಬರ್ಗ್.
ಸೆನೆಗಲ್ Vs ಕೊಲಂಬಿಯಾ, ಜೂನ್ 28 ರಂದು ಸಂಜೆ 7.30ಕ್ಕೆ, ಸಮಾರಾದಲ್ಲಿ.

ಸೆನೆಗಲ್ ಫೀಫಾ Ranking: 28
ಹಿಂದಿನ ವಿಶ್ವಕಪ್: ಅರ್ಹತೆ ಪಡೆದಿರಲಿಲ್ಲ
ಕೊನೆಯ ಸಾಧನೆ: ಕ್ವಾರ್ಟರ್ ಫೈನಲ್ ನಲ್ಲಿ ಟರ್ಕಿ ವಿರುದ್ಧ ಸೋಲು (2002).
ಬೆಸ್ಟ್ ಫಿನಿಶ್ : ಕ್ವಾರ್ಟರ್ ಫೈನಲ್ ಪ್ರವೇಶ (2002)
ಸ್ಟಾರ್ ಆಟಗಾರರು: ಸಾಡಿಯೊ ಮಾನೆ (ಲಿವರ್ ಪೂಲ್ ವಿಂಗರ್), ಕಾಲಿಡೊ ಕೌಲಿಬಾಲಿ (ನಾಪೋಲಿ ಡಿಫೆಂಡರ್), ಡಿಯಾಫ್ರಾ ಸಾಖೊ (ರೆನ್ನೆಸ್ ಸ್ಟ್ರೈಕರ್).
ಕೋಚ್ : ಅಲಿಯು ಸಿಸ್ಸೆ

2002 ರ ವಿಶ್ವಕಪ್ ಪಂದ್ಯಾವಳಿಯಲ್ಲಿ 1998 ರ ಚಾಂಪಿಯನ್, ಪ್ರಬಲ ಫ್ರಾನ್ಸ್ ತಂಡವನ್ನು ಸೆನೆಗಲ್ ಮಣಿಸಿ ಅಚ್ಚರಿ ಮೂಡಿಸಿತ್ತು. ಫ್ರಾನ್ಸ್ ಅನ್ನು ಸೋಲಿಸಿ ಸೆನೆಗಲ್ ಕ್ವಾರ್ಟರ್ ಫೈನಲ್ ತಲುಪಿತ್ತು. ಆಗ ತಂಡದ ಆಟಗಾರನಾಗಿದ್ದ ಅಲಿಯು ಸಿಸ್ಸೆ ಈಗ ಸೆನೆಗಲ್ ತಂಡದ ಕೋಚ್.

ಇದರ ಹಿಂದೆ ರೋಚಕವಾದ ಕತೆ ಇದೆ - ಆಗ ಗ್ರೂಪ್ 'ಡಿ'ನಲ್ಲಿ ಸೆನೆಗಲ್, ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿತ್ತು. ಆದರೆ ರೆಫರಿ ಜೋಸೆಫ್ ಲ್ಯಾಂಪ್ಟೆ ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮತ್ತೆ ಪಂದ್ಯ ಆಡಿಸಲಾಗಿತ್ತು.

ಆಗ 2017 ನವೆಂಬರ್ ನಲ್ಲಿ ನಡೆದ ರಿಪ್ಲೇ ನಲ್ಲಿ, ಸೆನೆಗಲ್ 2-0 ಅಂತರದಲ್ಲಿ ಪಂದ್ಯ ಗೆದ್ದು, ರಷ್ಯಾ ವಿಶ್ವಕಪ್‌ಗೆ ತನ್ನ ಸ್ಥಾನ ಭದ್ರ ಪಡಿಸಿಕೊಂಡಿತ್ತು.

ಆಗಿನ ಎಲ್ಲ ವಿವಾದಗಳನ್ನು ಮೆಟ್ಟಿ ನಿಂತ ಸೆನೆಗಲ್ ತಂಡ ಈಗ ಫಾರ್ವರ್ಡ್ ಆಟಗಾರ ಸಾಡಿಯೊ ಮಾನೆ ಅವರತ್ತ ದೃಷ್ಟಿ ನೆಟ್ಟಿದೆ. ಇತ್ತೀಚೆಗೆ ಮುಗಿದ UEFA ಪಂದ್ಯಾವಳಿಯಲ್ಲಿ ಸಾಡಿಯೊ ಮಾನೆ ಒಳ್ಳೆಯ ಆಟವಾಡಿದ್ದರು. ವೇಗದ ಆಟಕ್ಕೆ ಹೆಸರಾದ ಸೆನೆಗಲ್ ತಂಡ ಈಗ ಒಳ್ಳೆಯ ಫಲಿತಾಂಶದ ನಿರೀಕ್ಷೆಯಲ್ಲಿದೆ.

ಲಯನ್ಸ್ ಟೆರಂಗಾ ಎಂಬ ಅಡ್ಡ ಹೆಸರಿನಿಂದ ಗುರುತಿಸಿಕೊಂಡಿರುವ ಸೆನೆಗಲ್ ತಂಡದ ಭವಿಷ್ಯ ಅದರ ಪ್ರಮುಖ ಆಟಗಾರರ ಮೇಲೆ ನಿಂತಿದೆ.

ಗ್ರೂಪ್‌ನಲ್ಲಿರುವ ಇತರ ತಂಡಗಳಿಗೆ ಸೆನೆಗಲ್‌ನ ಅಥ್ಲೆಟಿಕ್ ಸಾಮರ್ಥ್ಯ ಚಿಂತೆಯ ವಿಷಯವಾಗಿದೆ. ಹೀಗಾಗಿ ಅವು ಬಲಿಷ್ಠ ಡಿಫೆಂಡರ್ ಗಳನ್ನು ನಿಯೋಜಿಸಲು ತಂತ್ರ ರೂಪಿಸುತ್ತಿವೆ.

ಸೆಂಟ್ರಲ್ ಮಿಡ್ ಫೀಲ್ಡರ್ಗಳಾದ ಚೇಖೊ ಕೋಯಾಟೆ ಹಾಗೂ ಇದ್ರಿಸಾ ಗುಯೆಯ್ ಅವರನ್ನು ಸನೆಗಲ್ ಡಿಫೆನ್ಸಿವ್ ಮಿಡ್ ಫೀಲ್ಡರ್ ಗಳನ್ನಾಗಿಸುವ ಸಾಧ್ಯತೆಯಿದೆ. ಇದು ಮಾನೆ ಹಾಗೂ ಕೇಟಾ ಬಾಲ್ಡೆ ಅವರಿಗೆ ಫಾರ್ವರ್ಡ್‌ಗಳಾಗುವ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ಕೌಲಿಬಾಲಿ ಪ್ರಮುಖ ಡಿಫೆಂಡರ್ ಆಗಿದ್ದರೂ ಅವರಿಗೆ ತಮ್ಮ ಸೆಂಟ್ರಲ್ ಡಿಫೆಂಡರ್‌ಗಳಿಂದ ಎಷ್ಟು ಪ್ರಬಲ ಬೆಂಬಲ ಸಿಗುತ್ತದೆ ಎಂಬುದನ್ನು ನೋಡಬೇಕಿದೆ. ಅದರಲ್ಲೂ ಪೋಲಾಂಡ್ ಹಾಗೂ ಕೊಲಂಬಿಯಾ ವಿರುದ್ಧದ ಪಂದ್ಯಗಳು ನಿರ್ಣಾಯಕವಾಗಲಿವೆ.

ಪೋಲಾಂಡ್ ಪರವಾಗಿ ರಾಬರ್ಟ್ ಲೆವಾಂಡೊವಸ್ಕಿ ಹಾಗೂ ಕೊಲಂಬಿಯಾ ಪರವಾಗಿ ರಾಡಾಮೆಲ್ ಫಾಲ್ಕಾವೊ ಪೋಚರ್ ಗಳಾಗಿ ಆಡಲಿದ್ದಾರೆ.

ಗೋಲ್ ಕೀಪರ್ ಖದೀಮ್ ಎನ್‌ಡಿಯಾಯ್ ಈವರೆಗೂ ಯುರೋಪ್ ದೇಶಗಳಲ್ಲಿ ಆಡಿದ ಅನುಭವ ಹೊಂದಿಲ್ಲದಿರುವುದು ಸೆನೆಗಲ್ ತಂಡಕ್ಕೆ ತುಸು ಆತಂಕದ ವಿಷಯವಾಗಿದೆ.

ಏನಾಗಬಹುದು: ಸೆನೆಗಲ್ ಜಪಾನ್ ವಿರುದ್ಧ ಗೆಲ್ಲಬೇಕು. ಜೊತೆಗೆ ಗ್ರೂಪ್ ನಲ್ಲಿನ ಒಂದು ದೊಡ್ಡ ತಂಡದ ವಿರುದ್ಧ ಕನಿಷ್ಠ ಡ್ರಾ ಮಾಡಿಕೊಂಡರೆ ಮಂದಿನ ಹಂತಕ್ಕೆ ಸುಲಭವಾಗಿ ಪ್ರವೇಶ ಪಡೆಯಬಹುದು.

Story first published: Friday, June 8, 2018, 18:11 [IST]
Other articles published on Jun 8, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+