ಮಾಜಿ ಹಣಕಾಸು ನಿರ್ದೇಶಕ ಕಾಟ್ನರ್‌ಗೆ 10 ವರ್ಷಗಳ ನಿಷೇಧ ಹೇರಿದ ಫೀಫಾ

ನವದೆಹಲಿ, ಜುಲೈ 1: ಮಾಜಿ ಹಣಕಾಸು ನಿರ್ದೇಶಕ ಮಾರ್ಕಸ್ ಕಾಟ್ನರ್ ಅವರಿಗೆ ಫೆಡರೇಶನ್ ಇಂಟರ್ ನ್ಯಾಷನಲ್ ಡೆ ಫುಟ್ಬಾಲ್ ಅಸೋಸಿಯೇಶನ್ (ಫೀಫಾ) 10 ವರ್ಷಗಳ ನಿಷೇಧ ಹೇರಿದೆ. ಫೀಫಾದಲ್ಲಿದ್ದುಕೊಂಡು ಅವ್ಯವಹಾರ ನಡೆಸಲು ಸಹಾಯ ಮಾಡಿದ ಆರೋಪದಡಿಯಲ್ಲಿ ಕಾಟ್ನರ್ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.
ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಮತ್ತು ಇತರ ಉನ್ನತ ವ್ಯವಸ್ಥಾಪಕರು ತಮ್ಮನ್ನು ತಾವು ಸಂಬಳ ಹೆಚ್ಚಿಸಿಕೊಳ್ಳಲು, ಬೋನಸ್‌ಗಳನ್ನು ಹೆಚ್ಚಿಸಿಕೊಳ್ಳಲು ಕಾಟ್ನರ್ ನೆರವು ನೀಡಿದ್ದರು. ಇಲ್ಲಿ ಸಂಬಳ ಮತ್ತು ಬೋನಸ್ ಹೆಚ್ಚಳವಾದ ಮೌಲ್ಯ ಸುಮಾರು ಹತ್ತು ಮಿಲಿಯನ್ ಡಾಲರ್‌ಗಳಷ್ಟಾಗುತ್ತದೆ. ಈ ಅವ್ಯವಹಾರದ ಕಾರಣಕ್ಕೆ ಕಾಟ್ನರ್ ನಿಷೇಧಕ್ಕೀಡಾಗಿದ್ದಾರೆ.
ಕಾರ್ಟ್ನರ್ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದು, ಸಂಘರ್ಷ ಹಿತಾಸಕ್ತಿ ವಿಚಾರದಲ್ಲಿ ತಪ್ಪೆಸಗಿರುವುದು, ಫೀಫಾ ಕೌನ್ಸಿಲ್ ಸಭೆಯ ದಾಖಲೆಗಳನ್ನು ಪಡೆದುಕೊಳ್ಳುವುದು ಹೀಗೆ ಅನೇಕ ವಿಚಾರಗಳಲ್ಲಿ ಕಾರ್ಟ್ನರ್ ತಪ್ಪು ಎಸಗಿರುವುದನ್ನು ವಿಚಾರಣೆ ವೇಳೆ ನೈತಿಕ ಸಮಿತಿಯ ಜಡ್ಜ್‌ಗಳು ಕಂಡುಕೊಂಡಿದ್ದಾರೆ. ಹೀಗಾಗಿ ಕಾರ್ಟ್ನರ್‌ಗೆ ನಿಷೇಧ ವಿಧಿಸಲಾಗಿದೆ ಎಂದು ಫೀಫಾ ಹೇಳಿದೆ.
ಮಾರ್ಕಸ್ ಕಾಟ್ನರ್‌ಗೆ 10 ವರ್ಷಗಳ ನಿಷೇಧ ಹೇರಿರುವುದರ ಜೊತೆಗೆ ಅವರಿಗೆ 1 ಮಿಲಿಯನ್ ಸ್ವಿಸ್ ಫ್ರ್ಯಾಂಕ್‌ಗಳನ್ನು (ಸುಮಾರು 7,92,90,802 ರೂ.) 30 ದಿನಗಳ ಒಳಗೆ ನೀಡುವಂತೆ ದಂಡ ಕೂಡ ಹಾಕಲಾಗಿದೆ ಎಂದು ತಿಳಿದುಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications