Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2021ರ ಯು-17, ಯು-20 ವಿಶ್ವಕಪ್‌ಗಳ ರದ್ದು ಮಾಡಿದ ಫೀಫಾ

FIFA cancels U17 and U20 World Cups in 2021

ಬೆಂಗಳೂರು: ಮುಂದಿನ ವರ್ಷ ಅಂದರೆ 2021ರಲ್ಲಿ ನಡೆಯಬೇಕಿದ್ದ ಅಂಡರ್ 17 ಮತ್ತು ಅಂಡರ್ 20 ಫುಟ್ಬಾಲ್ ವಿಶ್ವಕಪ್‌ ಟೂರ್ನಿಗಳನ್ನು ಫೆಡರೇಶನ್ ಇಂಟರ್ ನ್ಯಾಷನಲ್ ಡೆ ಫುಟ್ಬಾಲ್ ಅಸೋಸಿಯೇಶನ್ (ಫೀಫಾ) ರದ್ದು ಮಾಡಿದೆ. ಕೊರೊನಾವೈರಸ್ ಕಾರಣದಿಂದ ಪ್ರತಿಷ್ಠಿತ ಟೂರ್ನಿ ರದ್ದು ಮಾಡುತ್ತಿರುವುದಾಗಿ ಫೀಫಾ ಹೇಳಿದೆ.

ರದ್ದಾಗಿರುವ 2021ರ ಅಂಡರ್ 17 ಮತ್ತು ಅಂಡರ್ 20 ಫುಟ್ಬಾಲ್ ಟೂರ್ನಿಗಳು 2023ರಲ್ಲಿ ನಡೆಯಲಿವೆ. ಅಂಡರ್ 20 ವಿಶ್ವಕಪ್‌ ಅನ್ನು ಇಂಡೋನೇಷ್ಯಾ ದೇಶವೇ ನಡೆಸಿದರೆ, ಅಂಡರ್ 17 ಫುಟ್ಬಾಲ್ ವಿಶ್ವಕಪ್‌ಗೆ ಪೆರು ರಾಷ್ಟ್ರ ಆತಿಥ್ಯ ವಹಿಸಿಕೊಳ್ಳಲಿದೆ.

ಪ್ರಮುಖ ಟೂರ್ನಿಗಳನ್ನು ರದ್ದು ಮಾಡಿರುವ ಫೀಫಾ, 'ಕೋವಿಡ್-19 ಸಾಂಕ್ರಾಮಿಕವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಆತಿಥ್ಯಕ್ಕಾಗಿ ಸವಾಲುಗಳನ್ನು ಮುಂದೊಡ್ಡುತ್ತಿದೆ ಮತ್ತು ಅಂತರರಾಷ್ಟ್ರೀಯ ಪ್ರಯಾಣದ ಮೇಲೆ ನಿರ್ಬಂಧಿತ ಪರಿಣಾಮವನ್ನು ಬೀರುತ್ತದೆ,' ಎಂದಿದೆ.

'ಪ್ರಮುಖ ಟೂರ್ನಿಗಳನ್ನು ನಮಗೆ ನಡೆಸಲಾಗುತ್ತಿಲ್ಲವೆಂದರೆ ವೈರಸ್‌ ಅನ್ನು ಜಾಗತಿಕ ಮಟ್ಟದಲ್ಲಿ ಹತ್ತಿಕ್ಕುವಲ್ಲಿ ನಾವು ಎಡವಿದ್ದೇವೆ ಅನ್ನೋದು ಇಲ್ಲಿ ಸ್ಪಷ್ಟ,' ಎಂದು ಫೀಫಾ ಹೇಳಿದೆ.

Story first published: Friday, December 25, 2020, 0:07 [IST]
Other articles published on Dec 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+