ಭಾರತದಲ್ಲಿ ನಡೆಯಲಿದ್ದ ಮಹಿಳಾ ಯು-17 ಫುಟ್ಬಾಲ್ ವಿಶ್ವಕಪ್ ರದ್ದು

ನವದೆಹಲಿ: ಭಾರತದಲ್ಲಿ ನಡೆಯಲಿದ್ದ ಮಹಿಳೆಯರ ಅಂಡರ್ 17 ಫುಟ್ಬಾಲ್ ವಿಶ್ವಕಪ್ ಟೂರ್ನಿಯನ್ನು ಫೆಡರೇಶನ್ ಇಂಟರ್ ನ್ಯಾಷನಲ್ ಡೆ ಫುಟ್ಬಾಲ್ ಅಸೋಸಿಯೇಶನ್ (ಫೀಫಾ) ರದ್ದುಗೊಳಿಸಿದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿರುವುದರಿಂದ ಪ್ರತಿಷ್ಠಿತ ಟೂರ್ನಿ ರದ್ದಾಗಿದೆ.
ಭಾರತದಲ್ಲಿ ನಡೆಯಲಿದ್ದ ಅಂಡರ್ 17 ಮಹಿಳಾ ಫುಟ್ಬಾಲ್ ಟೂರ್ನಿಯನ್ನು 2021ಕ್ಕೆ ಆರಂಭದಲ್ಲಿ ಮುಂದೂಡಲಾಗಿತ್ತು. ಆದರೆ ಮಂಗಳವಾರ (ನವೆಂಬರ್ 17) ಉದ್ದೇಶಿತ ಟೂರ್ನಿಯನ್ನು ರದ್ದುಗೊಳಿಸಿರುವ ಫೀಫಾ, ಇದೇ ಟೂರ್ನಿಯನ್ನು ಭಾರತದಲ್ಲಿ 2022ಕ್ಕೆ ನಡೆಸಲು ಹಕ್ಕುಗಳನ್ನು ನೀಡಿದೆ.
ಟೂರ್ನಿ ರದ್ದುಗೊಳಿಸುವ ನಿರ್ಧಾರವನ್ನು ಫುಟ್ಬಾಲ್ ಕೌನ್ಸಿಲ್‌ನ ಬ್ಯೂರೋ ತಾಳಿದೆ. ಜಾಗತಿಕವಾಗಿ ಕಾಡುತ್ತಿರುವ ಕೊರೊನಾವೈರಸ್‌ನಿಂದಾಗಿ ಭಾರತದಲ್ಲಿ ನಡೆಯಲಿದ್ದ ಪ್ರಮುಖ ಟೂರ್ನಿಗೆ ಹಿನ್ನಡೆಯಾಗಿದೆ. ಬರೀ ಭಾರತದ ಟೂರ್ನಿಯಷ್ಟೇ ಅಲ್ಲ, ಕೋಸ್ಟರಿಕಾದಲ್ಲಿ ನಡೆಯಲಿದ್ದ ಅಂಡರ್ 20 ವಿಶ್ವಕಪ್ ಅನ್ನು ಕೂಡ ಫೀಫಾ ರದ್ದು ಮಾಡಿದೆ.
ಭಾರತ ಮತ್ತು ಕೋಸ್ಟರಿಕಾ ಎರಡಕ್ಕೂ 2022ರಲ್ಲಿ ಟೂರ್ನಿ ನಡೆಸುವ ಹಕ್ಕನ್ನು ಫೀಫಾ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications