ಭಾರತದಲ್ಲಿ ನಡೆಯಲಿದ್ದ ಯು-17 ಮಹಿಳಾ ವಿಶ್ವಕಪ್ ಫುಟ್ಬಾಲ್ ಮುಂದೂಡಿಕೆ

ನವದೆಹಲಿ, ಏಪ್ರಿಲ್ 4: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿದ್ದ ಅಂಡರ್ 17 ಮಹಿಳಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನು ಫುಟ್ಬಾಲ್ ಆಡಳಿತ ಮಂಡಳಿ ಫೀಫಾ ಮುಂದೂಡಿದೆ. ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾವೈರಸ್ ಸೋಂಕಿನ ಕಾರಣದಿಂದ ಭಾರತದಲ್ಲಿ ನಡೆಯಲಿದ್ದ ಪ್ರತಿಷ್ಠಿತ ಟೂರ್ನಿ ಮುಂದೂಡಲ್ಪಟ್ಟಿದೆ.
17ರ ವಯೋಮಾನದ ಯುವತಿಯರಿಗಾಗಿ ನಡೆಸಲಾಗುವ ವಿಶ್ವಕಪ್ ಫುಟ್ಬಾಲ್ ಟೂರ್ನಿ ನವೆಂಬರ್ 2ರಿಂದ 22ರ ವರೆಗೆ ಭಾರತದ ಐದು ತಾಣಗಳಾದ ಕೋಲ್ಕತ್ತಾ, ಗುವಾಹಟಿ, ಭುವನೇಶ್ವರ, ಅಹ್ಮದಾಬಾದ್ ಮತ್ತು ನವಿ ಮುಂಬೈನಲ್ಲಿ ನಡೆಯುವುದರಲ್ಲಿತ್ತು.
16 ತಂಡಗಳು ಪಾಲ್ಗೊಳ್ಳುವ ಈ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದರಿಂದ ಭಾರತಕ್ಕೆ 'ಅಟೋಮ್ಯಾಟಿಕ್ ಕ್ವಾಲಿಫೈಯರ್ಸ್' ಲಭಿಸಿತ್ತು. ಅಂದರೆ 17 ವಯೋಮಾನದ ಮಹಿಳಾ ವಿಶ್ವಕಪ್‌ಗಾಗಿ ಭಾರತ ಇದೇ ಚೊಚ್ಚಲ ಬಾರಿಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು.
ವಿಶ್ವದಗಲ ಹಬ್ಬುತ್ತಿರುವ ಕೊರೊನಾವೈರಸ್‌ನಿಂದಾಗಿ ಎಲ್ಲಾ ಕ್ರೀಡಾಚಟುವಟಿಕೆಗಳು ರದ್ದು ಇಲ್ಲವೆ ಮುಂದೂಲ್ಪಟ್ಟಿರುವುದರಿಂದ ಅಂಡರ್-17 ಮಹಿಳಾ ವಿಶ್ವಕಪ್ ಮುಂದೂಡುವ ನಿರ್ಧಾರವನ್ನು ಫೀಫಾ ತಾಳಿದೆ. 'ಟೂರ್ನಿಗಾಗಿ ಹೊಸ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ,' ಎಂದು ಫೀಫಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications